HomePage_Banner
HomePage_Banner
HomePage_Banner
HomePage_Banner

ಕೇಂದ್ರ ಸರಕಾರದ ಅತ್ಮನಿರ್ಭರ ಭಾರತದ ಯೋಜನೆ ಪುತ್ತೂರಿಗೆ | ಬನ್ನೂರಿನಲ್ಲಿ ಸೀ ಫುಡ್ ಪಾರ್ಕ್‌ಗೆ ಯೋಜನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ನಾವು ರಾಜಕೀಯ ರಹಿತವಾಗಿ ಯೋಚನೆ ಮಾಡುವವರು – ಅಪಸ್ವರಕ್ಕೆ ಶಾಸಕರ ದಿಟ್ಟ ಉತ್ತರ

ಪುತ್ತೂರು: ಕೇಂದ್ರ ಸರಕಾರದ ಪ್ರಧಾನಿ ನರೆಂದ್ರ ಮೋದಿಯವರು ಕೋವಿಡ್ -19 ಬಂದ ಬಳಿಕ ದೇಶದ ಎಲ್ಲಾ ಜನರಿಗೆ ಒಂದು ಬದುಕು ಕೊಡು ದೃಷ್ಟಿಯಿಂದ ಆತ್ಮನಿರ್ಭರ ಭಾರತ ಯೋಜನೆಯಂತೆ ಗ್ರಾಮೀಣ ಭಾಗದ ಯುವಕರಿಗೂ ಯುವಕರಿಗೂ ಉದ್ಯೋಗ, ಉದ್ದಿಮೆ ಆರಂಭ ಮಾಡುವ ನಿಟ್ಟಿನಲ್ಲಿ ಪುತ್ತೂರಿನ ಬನ್ನೂರಿನಲ್ಲಿ ಸೀ ಫುಡ್ ಪಾರ್ಕ್ ನಿರ್ಮಾಣ ಆಗಲಿದೆ ಎಂದು ಶಾಸಕ ಸಂಜೀವ ಮಠಂದೂರು ತಿಳಿಸಿದ್ದಾರೆ.

ಅವರು ಪುತ್ತೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿಯವರು ಆತ್ಮನಿರ್ಭರ ಭಾರತದ ಮೂಲಕ ಒಂದೊಂದು ಜಿಲ್ಲೆಗೆ ಒಂದೊಂದು ಯೋಜನೆ ಕೊಡುತ್ತಿದ್ದಾರೆ. ದ.ಕ.ಜಿಲ್ಲೆಗೆ ಮತ್ಸೋದ್ಯಮ ಸೀ ಫುಡ್ ಪಾರ್ಕ್ ಮಾಡಲು ಅವಕಾಶ ಕೊಟ್ಟಿದ್ದಾರೆ. ಇದಕ್ಕೆ ಮಂಗಳೂರಿನ ಕೇಂದ್ರ ಸ್ಥಾನದಿಂದ ಮತ್ತು ವಿಮಾನ ನಿಲ್ದಾಣದಿಂದ ೫೦ ಕಿ.ಮೀ ಒಳಗಡೆ ಮಾಡಬೇಕಾದ ಗೈಡ್ ಲೈನ್ ಪ್ರಕಾರ ದ.ಕ.ಜಿಲ್ಲಾ ಉಸ್ತುವಾರಿ ಮತ್ತು ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಪುತ್ತೂರು ವಿಧಾನ ಸಭಾ ಕ್ಷೇತ್ರಕ್ಕೆ ಅವಕಾಶ ಕೊಟ್ಟಿದ್ದಾರೆ. ಇದೊಂದು ವಾಲ್ಯೂ ಆಡೆಡ್ ಪ್ರೋಡಕ್ಟ್ ಮತ್ತು ಗೃಹೋಪಯೋಗಿ ಆಹಾರ ಉತ್ಪನ್ನ, ಉದ್ದಿಮೆಗಳಾಗಿರುವುದರಿಂದ ಇದರಿಂದಾಗಿ ಸುಮಾರು ೨ಸಾವಿರ ಮಂದಿಗೆ ಉದ್ಯೋಗ ಸಿಗಲಿದೆ. ಸೀ ಫುಡ್ ಪಾರ್ಕ್‌ಗೆ ಕನಿಷ್ಠ 50 ಎಕ್ರೆ ಸ್ಥಳವಕಾಶ ಬೇಕಾಗಿದ್ದು, ಒಂದೇ ಕಡೆ ಇಷ್ಟೊಂದು ದೊಡ್ಡ ಮಟ್ಟದ ಜಾಗ ತಕ್ಷಣಕ್ಕೆ ಸಿಗುವ ನಿಟ್ಟಿನಲ್ಲಿ ಮತ್ತು ರೂ.50 ಕೋಟಿ ಅನುದಾನ ಕೈ ತಪ್ಪಬಾರದು ಎಂದು ಈಗಾಗಲೇ ಈ ಹಿಂದೆ ಮೆಡಿಕಲ್ ಕಾಲೇಜಿಗೆ ಕಾಯ್ದಿರಿಸಿದ ಜಾಗವನ್ನು ಸೀ ಫುಡ್ ಪಾರ್ಕ್‌ಗೆ ಮೀಸಲಿಟ್ಟು, ಮುಂದೆ ಮೆಡಿಕಲ್ ಕಾಲೇಜಿಗೆ ಬೇರೆ ಕಡೆ ಜಾಗ ಹುಡುಕುವ ಕುರಿತು ಅಧಿಕಾರಿಗಳ ಸಲಹೆಯಂತೆ ಈಗಾಗಲೇ ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ನಾವು ರಾಜಕೀಯ ರಹಿತವಾಗಿ ಯೋಚನೆ ಮಾಡುವವರು:
ಪುತ್ತೂರಿನ ಅಭಿವೃದ್ಧಿ ದೃಷ್ಟಿಯಿಂದ ಅನುದಾನ ನಮ್ಮ ಕೈ ತಪ್ಪಬಾರದು, ಅದು ದಕ್ಷಿಣ ಕನ್ನಡ ಜಿಲ್ಲೆಗೆ ಉಪಯೋಗ ಆಗಬೇಕು. ಒಂದಷ್ಟು ಯುವಕರು ಉದ್ದಿಮೆದಾರರು ಮುಂದೆ ಬರಬೇಕು. ಪುತ್ತೂರು ಪಟ್ಟಣ ಇನ್ನಷ್ಟು ಬೆಳೆಯಬೇಕು. ಅದರ ಜೊತೆ ನಮ್ಮ ಆಮದು, ರಫ್ತು ಹೆಚ್ಚಾಗಬೇಕು. ವಾಲ್ಯೂ ಆಡೆಟ್ ಪೊಡಕ್ಟ್‌ಗಳು ಹೆಚ್ಚು ಹೆಚ್ಚು ಬರಬೇಕೆಂದು ಸೀ ಫುಡ್ ಪಾರ್ಕ್ ಯೋಜನೆಗೆ ಚಾಲನೆ ನೀಡಲಾಗಿದೆ. ಆದರೆ ಇದಕ್ಕೆ ಅಪಸ್ವರ ಬರುತ್ತಿರುವುದು ಕಾಣುತ್ತಿದೆ. ನಾವೆಲ್ಲ ರಾಜಕೀಯ ರಹಿತವಾಗಿ ಯೋಚನೆ ಮಾಡುವವರು. ಪುತ್ತೂರಿನ ಅಭಿವೃದ್ಧಿಗಾಗಿ ಏನು ಮಾಡಬೇಕೋ ಅದನ್ನು ಮಾಡುತ್ತೇವೆ. ಯುವಕರಿಗೆ ಉದ್ಯೋಗ ಕೊಡಬೇಕು. ಅದಕ್ಕೆ ಏನು ಮಾಡಬೇಕೆಂದು ಯೋಚನೆ ಮಾಡುತ್ತೇವೆ. ರಾಜಕೀಯ ನಾಯಕರು ಇದಕ್ಕೆ ತಮಗೆ ಬೇಕಾದ ಹಾಗೆ ಹೇಳಿಕೆ ಕೊಟ್ಟು ಜನರಲ್ಲಿ ಗೊಂದಲ ನಿರ್ಮಾಣ ಮಾಡುವ ಸಂಗತಿ ಮಾಡುತ್ತಿರುವುದನ್ನು ಬಿಟ್ಟು ನೇರವಾಗಿ ಅವರಿಗೆ ನಮ್ಮ ಜೊತೆ ಮಾತುಕತೆ ಮಾಡಬಹುದು. ನಾವು ಜನವಿರೋದಿಗಳಲ್ಲ. ನಾವು ಅಭಿವೃದ್ದಿ ಪರ ಚಿಂತನೆ ಮಾಡುವಂತಹ ಜನಪ್ರತಿನಿಧಿಗಳು. ಪುತ್ತೂರು ಮುಂದೆ 25 ವರ್ಷದಲ್ಲಿ ಹೇಗಿರಬೇಕು ಪುತ್ತೂರಿನ ಬೆಳವಣಿಗೆ ಹೇಗಾಗಬೇಕು. ಇದರ ಬಗ್ಗೆ ಯೋಚನೆ ಮಾಡುತ್ತೆವೆ ಹೊರತು ಯಾವುದೋ ರಾಜಕೀಯ ದುರುದ್ದೇಶದ ಹೇಳಿಕೆ ಕೊಡಲು ನಾವು ಸಿದ್ದರಿಲ್ಲ. ಒಟ್ಟು ಜನರ ಹಿತ ಮತ್ತು ಅಭಿವೃದಿಯ ಕಲ್ಪಣೆ ಕೊಡುವ ಯೋಜನೆ ತಂದಿದೇವೆ. ಜನರು ಅಪೇಕ್ಷೆ ಪಟ್ಟಂತೆ ಅನುಗುಣವಾಗಿ ಯೋಜನೆ ಎಲ್ಲಿ ಮಾಡಬೇಕೋ ಅಲ್ಲಿ ಮಾಡಲು ಕಾರ್ಯಪ್ರವರ್ತರಾಗಲಿದ್ದೇವೆ ಎಂದು ಸಂಜೀವ ಮಠಂದೂರು ಹೇಳಿದರು. 

ಸೀಫುಡ್ ಪಾರ್ಕ್‌ಗೆ ಆಕ್ಷೇಪಣೆ ಸಲ್ಲಿಕೆ:
ಬನ್ನೂರು ಗ್ರಾಮದ ಸೇಡಿಯಾಪು ಸರ್ವೆ ನಂಬ್ರ ೮೪ರಲ್ಲಿ ಸರಕಾರಿ ವೈದ್ಯಕೀಯ ಕಾಲೇಜಿಗೆಂದು ಮೀಸಲಿಟ್ಟ 40 ಎಕ್ರೆ ಜಮೀನಿನಲ್ಲಿ ಸೀ ಫುಡ್ ಪಾರ್ಕ್ ನಿರ್ಮಿಸುವ ಕುರಿತು ಬನ್ನೂರು ಗ್ರಾಮಸ್ಥರ ಪರವಾಗಿ ನಿಯೋಗವೊಂದು ಶಾಸಕರಿಗೆ ಆಕ್ಷೇಪಣೆ ಸಲ್ಲಿಸಿದ್ದಾರೆ.  ಸೀ ಫುಡ್ ಪಾರ್ಕ್ ಆಗುವ ಕುರಿತು ಬನ್ನೂರು ಗ್ರಾಮಕರಣಿಕರು ಸಾರ್ವಜನಿಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆದರೆ ಜಮೀನಿನ ಸುತ್ತ ಕೃಷಿ ಜಮೀನು, ವಾಸದ ಮನೆಗಳನ್ನು ಹೊಂದಿರುವಂತಹ ನಾವು ಪರಿಸರಕ್ಕೆ ಹಾನಿಕಾರಕವಾದಂತಹ ಈ ಯೋಜನೆಯನ್ನು ವಿರೋಧಿಸುತ್ತೇವೆ. ಮೀನು ಮತ್ತು ಮೀನಿನ ಉತ್ಪನ್ನಗಳ ಸಂಸ್ಕರಣೆ ಮತ್ತು ಇದರ ತ್ಯಾಜ್ಯದಿಂದ ಸುತ್ತಮುತ್ತಲಿನ ವಾತಾವರಣ ಮಲೀನಗೊಂದು ಹಾನಿಕಾರಕ ನೋಣ, ಕ್ರಿಮಿ ಕೀಟಗಳ ಉತ್ಪತ್ತಿಗೆ ಕಾರಣವಾಗಿ ಜನರ ಆರೋಗ್ಯದ ಮೇಲೆ ಪರಿಣಾಮವನ್ನುಂಟು ಮಾಡಲಿದೆ. ಈಗಾಗಲೇ ಈ ಪ್ರದೇಶದಲ್ಲಿ ಡಂಪಿಂಗ್ ಯಾರ್ಡ್ ಇದ್ದು ಗ್ರಾಮಸ್ಥರು ತೊಂದರೆಗೆ ಒಳಪಟ್ಟಿದ್ದಾರೆ. ಮುಂದೆ ಗಾಯದ ಮೇಲೆ ಬರೆ ಎಲೆದಂತಾಗುತ್ತದೆ. ಸೀ ಫುಡ್ ಪಾರ್ಕ್ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಬೇಡಿ ಎಂದು ನಿಯೋಗ ಮನವಿ ಮಾಡಿದೆ. ನಿಯೋಗದಲ್ಲಿ ವಿಶ್ವಪ್ರಸಾದ್ ಸೇಡಿಯಾಪು, ದಿನಮಣಿ ನಾರಾಯಣ, ಧರ್ಣಪ್ಪ ಮೂಲ್ಯ, ಗ್ರಾ.ಪಂ ಸದಸ್ಯ ರತ್ನಾಕರ ಪ್ರಭು, ಡೆನ್ನಿಸ್ ಮಸ್ಕರೇನಸ್, ಜನಾರ್ದನ ಭಟ್ ಸೇಡಿಯಾಪು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.