HomePage_Banner
HomePage_Banner
HomePage_Banner

ನಿಡ್ಪಳ್ಳಿ ಮುಂಡೂರು ದೈವಸ್ಥಾನದಲ್ಲಿ ಪುದ್ವಾರ್ ಮೆಚ್ಚಿ ನೆಮೋತ್ಸವ

Puttur_Advt_NewsUnder_1
Puttur_Advt_NewsUnder_1
ನಿಡ್ಪಳ್ಳಿ: ದೀಪಾವಳಿ ಪ್ರಯುಕ್ತ ಗುತ್ತು ಚಾವಡಿಯಿಂದ  ಹುಲಿಭೂತ ಭಂಡಾರ ನ.16 ರಂದು ರಾತ್ರಿ ಮುಂಡೂರು ದೈವಸ್ಥಾನಕ್ಕೆ ತೆರಳಿ  ನ.17 ರಂದು ಬೆಳಿಗ್ಗೆಯಿಂದ ಹುಲಿಭೂತಕ್ಕೆ ಪುದ್ವಾರ್ ಮೆಚ್ಚಿ ನೆಮೋತ್ಸವ ನಡೆಯಿತು. ಮಧ್ಯಾಹ್ನ ಪ್ರಸಾದ ವಿತರಣೆ ನಡೆದು ನಂತರ ಅನ್ನಸಂತರ್ಪಣೆ ನಡೆಯಿತು.
ನ.16 ರಂದು  ಗುತ್ತುಚಾವಡಿಯಲ್ಲಿ ಧಾನ್ಯ ಪೂಜೆ, ಗಣಪತಿ ಹೋಮ, ಶುದ್ದಿಕಲಶ ನಡೆದು ದೈವಗಳಿಗೆ  ಪುದ್ವಾರ್ ತಂಬಿಲ ನಡೆದು ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಿತು.ಸಂಜೆ ಉಳ್ಳಾಕುಲು ಮಾಡದಲ್ಲಿ ದೈವಗಳಿಗೆ ದೀಪಾವಳಿ ಪ್ರಯುಕ್ತ ಪುದ್ವಾರ್ ತಂಬಿಲ ಮತ್ತು ಸಂಕ್ರಮಣ ತಂಬಿಲ ನಡೆಯಿತು. ಅನುವಂಶಿಕ ಆಡಳಿತ ಮೊಕ್ತೇಸರ ಪ್ರವೀಣ ಎನ್.ಆರಿಗ ಮತ್ತು ಮನೆಯವರು, ಮುಂಡೂರು ಮನೆಯವರು, ಗುತ್ತು ಬಾರಿಕೆ ಮನೆಯವರು, ನಿಡ್ಪಳ್ಳಿ ಶ್ರೀ ಶಾಂತದುರ್ಗಾ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ನಾಗೇಶ ಗೌಡ ಪುಳಿತ್ತಡಿ, ಕಾರ್ಯದರ್ಶಿ ನಾರಾಯಣ ರೈ ಕೊಪ್ಪಳ ಹಾಗೂ ಊರ ಪರವೂರ  ಗ್ರಾಮಸ್ಥರು ಪಾಲ್ಗೊಂಡರು. ವೇದ ಮೂರ್ತಿ ಪರಮೇಶ್ವರ ಭಟ್ ಮತ್ತು ಶ್ರೀ ಶಾಂತದುರ್ಗಾ ದೇವಸ್ಥಾನದ ಅರ್ಚಕ ರಾಜೇಂದ್ರ ಭಟ್ ಇವರು ಪೂಜಾ ವಿದಿ ವಿಧಾನಗಳನ್ನು ನೆರವೇರಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.