HomePage_Banner
HomePage_Banner
HomePage_Banner

ಮೂಲ ಸ್ವರೂಪ ಉಳಿಸಿಕೊಂಡು ಹೊಸತನದ ಕಲ್ಪನೆ ಬಾಲವನದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಡಾ. ಶಿವರಾಮ ಕಾರಂತರ ಮನೆ, ನಾಟ್ಯ ಶಾಲೆಯನ್ನು ಮೂಲ ಸ್ವರೂಪ ಉಳಿಸಿಕೊಂಡು ಅಭಿವೃದ್ಧಿ ಪಡಿಸಲಾಗುವುದು. ಈ ಕುರಿತು ಮುಂದಿನ ವಾರದಲ್ಲೇ ಬೆಂಗಳೂರಿನಲ್ಲಿ ಪುತ್ತೂರು ಶಾಸಕರ ಉಪಸ್ಥಿತಿಯಲ್ಲಿ ವಿಶೇಷ ಸಭೆ ಕರೆಯಲಾಗುವುದು. ಒಟ್ಟು ಬೇರೆ ಬೇರೆ ಇಲಾಖೆಗಳಿಂದ ಹೊಸತನದ ಕಲ್ಪಣೆಗಳನ್ನು ಜೋಡಿಸಿಕೊಂಡು ಅಭಿವೃದ್ಧಿ ಕಾರ್ಯ ನಡೆಯಲಿದೆ ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಹೇಳಿದರು.

ಪುತ್ತೂರು ಪರ್ಲಡ್ಕದಲ್ಲಿರುವ ಡಾ. ಶಿವರಾಮ ಕಾರಂತರ ಬಾಲವನದಲ್ಲಿ ನ.17ರಂದು ಸಂಜೆ ಬಾಲವನ ಅಭಿವೃದ್ಧಿಕುರಿತು ಶಾಸಕ ಸಂಜೀವ ಮಠಂದೂರು ಮತ್ತು ಬಾಲವನ ಅಭಿವೃದ್ಧಿ ಸಮಿತಿ ಆಡಳಿತಾಧಿಕಾರಿ ಸಹಾಯಕ ಕಮೀಷನರ್ ಉಪಸ್ಥಿತಿಯಲ್ಲಿ ನಡೆದ ಆಂತರಿಕ ಸಭೆಯ ಮುಂದೆ ಅವರು ಪತ್ರಿಕಾ ಮಾದ್ಯಮದವರೊಂದಿಗೆ ಮಾತನಾಡಿದರು. ಕನ್ನಡ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಇಲಾಖೆಯವರು ಮತ್ತು ಹಿರಿಯ ಅಧಿಕಾರಿಗಳ ಜೊತೆ ವಿಶೇಷ ಸಭೆ ನಡೆಸಲಾಗುವುದು. ಸಮಗ್ರವಾದ ಮಾಸ್ಟರ್ ಪ್ಲಾನರಿ ಮಾಡಿ ಎರಡು ಮೂರು ವರ್ಷದಲ್ಲಿ ತುಂಬಾ ಅರ್ಥಪೂರ್ಣ, ಅಪೂರ್ವವಾದ ಕಾರಂತರ ನೆನಪಿನ ಸಾಂಸ್ಕೃತಿಕ ವೇದಿಕೆಯಾಗಿ ಈ ಬಾಲವನ ರೂಪುಗೊಳ್ಳಲಿದೆ ಎಂಬ ಆಶಯವಿದೆ ಎಂದರು.

ಅಧ್ಯಯನ ಪೀಠ ಶಿಫ್ಟ್ ಪ್ರಸ್ತಾವನೆ ಇಲ್ಲ:
ಡಾ.ಶಿವರಾಮ ಕಾರಂತರ ಅಧ್ಯಯ ಪೀಠ ಬಹಳ ಹಿಂದೆ ಮಾಡಲಾಗಿದೆ. ಅದನ್ನು ಬಾಲವನಕ್ಕೆ ಶಿಫ್ಟ್ ಮಾಡುವ ಪ್ರಸ್ತಾಪ ಇಲ್ಲ. ಅಗತ್ಯವಿದ್ದರೆ ಪರಿಶೀಲನೆ ಮಾಡೋಣ. ಅದೇ ರೀತಿ ರಂಗಾಯನ ಮಾದರಿಯಲ್ಲಿ ಬಾಲವನದಲ್ಲೂ ಕಲ್ಪಣೆ ಇತ್ತು. ಆದರೆ ಕನ್ನಡ ಸಂಸ್ಕೃತಿ ಇಲಾಖೆಯ ಸಚಿವರು ಬದಲಾವಣೆ ಅದ್ದರಿಂದ ಅದು ನೆನೆಗುದಿಗೆ ಬಿದ್ದಿತ್ತು. ಮತ್ತೆ ಅದನ್ನು ಪ್ರಸ್ತಾಪ ಮಾಡಲಾಗುವುದು ಎಂದು ಸಚಿವರು ಹೇಳಿದರು. ಈ ಸಂದರ್ಭದಲ್ಲಿ ಶಾಸಕ ಸಂಜೀವ ಮಠಂದೂರು, ಜಿ.ಪಂ ಸದಸ್ಯೆ ಶಯನಾ ಜಯಾನಂದ್, ಸಹಾಯಕ ಕಮೀಷನರ್ ಡಾ. ಯತೀಶ್ ಉಳ್ಳಾಲ್, ತಹಸೀಲ್ದಾರ್ ರಮೇಶ್ ಬಾಬು ಟಿ, ಬಾಲವನದ ವಿಶೇಷ ಕರ್ತವ್ಯಾಧಿಕಾರಿ ಸುಂದರ ಕೇನಾಜೆ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.