HomePage_Banner
HomePage_Banner
HomePage_Banner

ಕಥೊಲಿಕ್ ಸಭಾ ಉಪ್ಪಿನಂಗಡಿ ಘಟಕದ ಮಹಾಸಭೆ

Puttur_Advt_NewsUnder_1
Puttur_Advt_NewsUnder_1


ಪುತ್ತೂರು : ಕಥೊಲಿಕ್ ಸಭಾ ಉಪ್ಪಿನಂಗಡಿ ಘಟಕದ ಮಹಾಸಭೆ ಮತ್ತು ೨೦೨೧ – ೨೨ರ ಸಾಲಿನ ಸದಸ್ಯರ ಚುನಾವಣೆ ನ.೧೫ ರಂದು ಉಪ್ಪಿನಂಗಡಿ ದೀನರ ಕನ್ಯಾಮಾತ ದೇವಾಲಯದ ಸಭಾಂಗಣದಲ್ಲಿ ನಡೆಯಿತು. ಕೇಂದ್ರೀಯ ಸಮಿತಿಯ ಖಜಾಂಚಿ ಹಾಗೂ ಚುನಾವಣಾಧಿಕಾರಿ ಜೋಕಿಂ ಡಿಸೋಜ ಕಡಬರವರು ಚುನಾವಣೆ ನಡೆಸಿಕೊಟ್ಟರು. ಘಟಕದ ಅಧ್ಯಕ್ಷರಾಗಿ ಲವೀನಾ ಪಿಂಟೊ, ನಿಕಟಪೂರ್ವ ಅಧ್ಯಕ್ಷರಾಗಿ ಸ್ಟೀವನ್ ಮೊಂತೆರೊ, ಉಪಾಧ್ಯಕ್ಷರಾಗಿ ಜೋನ್ ಲೋಬೊ, ಕಾರ್ಯದರ್ಶಿ ಅನಿತಾ ಸಿಕ್ವೇರಾ, ಸಹ ಕಾರ್ಯದರ್ಶಿಯಾಗಿ ಸಿಂತಿಯಾ ಬ್ರ್ಯಾಗ್ಸ್, ಖಜಾಂಚಿಯಾಗಿ ಸ್ಟೀವನ್ ಮೊಂತೆರೊ, “ಸಂದೇಶ್” ಪ್ರತಿನಿದಿಯಾಗಿ ಜೆರೋಮ್ ಬ್ರ್ಯಾಗ್ಸ್, “ಸ್ತ್ರೀ” ಹಿತಾ ಸಂಚಾಲಕಿಯಾಗಿ ಶಾಲೆಟ್ ವಾಸ್, ರಾಜಕೀಯ ಸಂಚಾಲಕಿಯಾಗಿ ಆನಿ ಮಿನೇಜಸ್, ಸಮುದಾಯ ಅಭಿವೃದ್ಧಿ ಸಂಚಾಲಕರಾಗಿ ಓಸ್ವಲ್ಡ್ ಪಿಂಟೊ ಚುನಾಯಿತರಾದರು.

ವೇದಿಕೆಯಲ್ಲಿ ಚರ್ಚ್‌ನ ಧರ್ಮಗುರುಗಳು ಹಾಗೂ ಘಟಕದ ಆಧ್ಯಾತ್ಮಿಕ ನಿರ್ಧೇಶಕರಾದ ಫಾ||ಅಬೆಲ್ ಲೋಬೊ, ಕೇಂದ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಗೂ ಚುನಾವಣಾ ಸದಸ್ಯ ನವೀನ್ ಬ್ರ್ಯಾಗ್ಸ್ ಉಪಸ್ಥಿತರಿದ್ದರು. ಚುನಾವಣೆಯಲ್ಲಿ ಕಥೋಲಿಕ್ ಸಭಾ ಉಪ್ಪಿನಂಗಡಿ ಘಟಕದ ಸದಸ್ಯರು ಪಾಲ್ಗೊಂಡಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.