HomePage_Banner
HomePage_Banner
HomePage_Banner

ಕೋಸ್ಟಲ್ ಹೋಂ ಡಿಜಿಟಲ್ ಸೇವಾ ಕೇಂದ್ರ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1

 
ಪುತ್ತೂರು: ಸರಕಾರದ ಯಾವುದೇ ಸೌಲಭ್ಯ, ಸೇವೆ, ಯೋಜನೆಗಳ ಅರಿವು ಸಾರ್ವಜನಿಕರಿಗೆ ಇರಬೇಕಾಗಿರುವುದು ಇಂದಿನ ಡಿಜಿಟಲ್ ಯುಗದಲ್ಲಿ ಬಹಳ ಅವಶ್ಯ. ನಮ್ಮ ದಾಖಲೆಗಳಲ್ಲಿರುವ ಕುಂದುಕೊರತೆಗಳನ್ನು ಸರಿಪಡಿಸಿಕೊಳ್ಳಲು ಹಾಗೂ ವಿವಿಧ ಯೋಜನೆಗಳಿಗೆ ಅರ್ಜಿ ಸಲ್ಲಿಸಲು, ಸವಲತ್ತುಗಳನ್ನು ಪಡೆದುಕೊಳ್ಳಲು ಸಹಕಾರಿಯಾಗುವಂತಹ ಕೋಸ್ಟಲ್ ಹೋಂ ಡಿಜಿಟಲ್ ಸೇವಾ ಕೇಂದ್ರ ದರ್ಬೆ ಪರಿಸರದಲ್ಲಿ ಆರಂಭಗೊಂಡಿರುವುದು ಖುಷಿ ತಂದಿದೆ. ಈ ಜನಸೇವಾ ಕೇಂದ್ರದಿಂದ ನಗುಮೊಗದ ತೃಪ್ತಿಕರ ಸೇವೆ ಸಾರ್ವಜನಿಕರಿಗೆ ಸಿಗಲಿ ಎಂದು ಲಕ್ಷ್ಮಿ ಕಮರ್ಷಿಯಲ್ ಕಾಂಪ್ಲೆಕ್ಸ್ ಹಾಗೂ ಲಕ್ಷ್ಮಿ ಇಂಡಸ್ಟ್ರಿಸ್ ನ ಮಾಲಕ ಭರತ್ ಪೈ ಹೇಳಿದರು. ಅವರು ದರ್ಬೆಯ ಲಿಟ್ಲು ಫ್ಲವರ್ ಶಾಲೆಯ ಬಳಿಯಿರುವ ಅಕ್ಷಯ ಕಾಂಪ್ಲೇಕ್ಸ್ ನಲ್ಲಿ ನ.16ರಂದು ಕೋಸ್ಟಲ್ ಹೋಂ ಡಿಜಿಟಲ್ ಸೇವಾ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಪುತ್ತೂರು ರೋಟರಿ ಕ್ಲಬ್ ಯುವಾ ದ ಅಧ್ಯಕ್ಷರಾದ ಹರ್ಷಕುಮಾರ್ ರೈ ಮಾಡವು ಮಾತನಾಡಿ, ಸೇವಾ ಮನೋಭಾವ ಹೊಂದಿರುವ ಸಂದೇಶ್ ರೈ ಸಂಪ್ಯ ಈಗಾಗಲೇ ಹಲವು ಸೇವಾ ಕಾರ್ಯಗಳ ಮೂಲಕ ದರ್ಬೆ ಪರಿಸರದಲ್ಲಿ ಗುರುತಿಸಿಕೊಂಡಿದ್ದಾರೆ. ಇವರ ಜನಸೇವಾ ಕೇಂದ್ರವು ಸಾಮಾನ್ಯ ಜನರಿಗೆ ಒಂದು ಉತ್ತಮ ಅವಕಾಶ ಒದಗಿಸಿಕೊಡುವ ಸಂಸ್ಥೆಯಾಗಿ ರೂಪುಗೊಳ್ಳಲಿ ಎಂದು ಶುಭಹಾರೈಸಿದರು.


ಇನ್ನೋರ್ವ ಮುಖ್ಯ ಅತಿಥಿಯಾಗಿದ್ದ ಕುಂಬ್ರ ವರ್ತಕರ ಸಂಘದ ಮಾಜಿ ಅಧ್ಯಕ್ಷರಾದ ಶ್ಯಾಮ್ ಸುಂದರ್ ರೈ ಕೊಪ್ಪಳ ಮಾತನಾಡಿ, ಈ ಮಾಹಿತಿ ತಂತ್ರಜ್ಞಾನದ ಕಾಲದಲ್ಲಿ ಈ ಜನಸೇವಾ ಕೇಂದ್ರವೂ ತನ್ನ ಸೇವೆಯ ಮೂಲಕ ಎಲ್ಲರನ್ನು ತಲುಪಲಿ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಚೈತ್ರ ಇಲೆಕ್ಟ್ರಾನಿಕ್ಸ್ ನ ಮಾಲಕ ರಮೇಶ್ ರೈ,  ಲಿಟ್ಲ್ ಫ್ಲವರ್ ಶಾಲೆಯ ಶಿಕ್ಷಕ ಬಾಲಕೃಷ್ಣ ರೈ ಪೋರ್ದಲ್, ಉದ್ಯಮಿ ಮಂಜುನಾಥ್ ರಾವ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಅತಿಥಿಗಳನ್ನು ಮಾಲಕ ಸಂದೇಶ್ ರೈ ಸಂಪ್ಯ ಸ್ವಾಗತಿಸಿ, ಚೇತನ್ ರೈ ಸಂಪ್ಯ ವಂದಿಸಿದರು. ರಾಜ್ಯಶಾಸ್ತ್ರ ಉಪನ್ಯಾಸಕ ಲಕ್ಷ್ಮೀಕಾಂತ ರೈ ಅನಿಕೂಟೇಲ್ ಕಾರ್ಯಕ್ರಮ ನಿರ್ವಹಿಸಿದರು.

ಸಂಸ್ಥೆಯ ವಿಶಿಷ್ಟ ಸೇವೆಗಳು:
ಇದರಲ್ಲಿ ವಿವಿಧ ರೀತಿಯ ವಿದ್ಯಾರ್ಥಿಗಳಿಗೆ ಅವಶ್ಯವಾಗಿರುವ ಸ್ಕಾಲರ್ ಶಿಪ್, ಉದ್ಯೋಗಕ್ಕೆ ಸಂಬಂಧಿತ ಕೆಲಸ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ, ಪ್ರಧಾನ ಮಂತ್ರಿ ಶ್ರಮಯೋಗಿ ಯೋಜನೆ, ಆಧಾರ್ ಕಾರ್ಡ್ ತಿದ್ದುಪಡಿ ಮತ್ತು ಡೌನ್ಲೋಡ್, ಜಾತಿ ಆದಾಯ, ರೇಷನ್ ಕಾರ್ಡ್ ಅರ್ಜಿ, ಮತ್ತು ತಿದ್ದುಪಡಿ, ಪಾನ್ ಕಾರ್ಡ್, ಆರ್‌ಟಿಸಿ, 9/11 ಅರ್ಜಿ, ವಿದ್ಯಾರ್ಥಿಗಳ ಸ್ಕಾಲರ್‌ಶಿಫ್, ಪಾನ್ ಕಾರ್ಡ್, ಪಾಸ್ ಪೋರ್ಟ್ ಆನ್‌ಲೈನ್ ಅರ್ಜಿ, ಉದ್ಯೋಗ ಅವಕಾಶಗಳ ಆನ್‌ಲೈನ್ ಅರ್ಜಿ, ಶಾದಿ ಭಾಗ್ಯ ಅರ್ಜಿ, ರಾಷ್ಟ್ರೀಯ ಪಿಂಚಣಿ ಯೋಜನೆ, ಅಲ್ಪಸಂಖ್ಯಾತರ ವಿವಿಧ ಯೋಜನೆಗಳ ಅರ್ಜಿ, ಸಂಧ್ಯಾ ಸುರಕ್ಷಾ, ವಿಧವಾ ವೇತನ, ಮನಸ್ವಿನಿ, ವಸತಿ, ನಿವೇಶನಗಳ ಅರ್ಜಿ ಸೇರಿದಂತೆ ಸರಕಾರದ ಎಲ್ಲಾ ಯೋಜನೆಗಳ ಅರ್ಜಿ, ಜೆರಾಕ್ಸ್, ಕಲರ್ ಪ್ರಿಂಟ್, ಲ್ಯಾಮಿನೇಶನ್ ಮುಂತಾದ ಹಲವಾರು ಸೇವೆಗಳನ್ನು ನೀಡುತ್ತೇವೆ. ಸಾರ್ವಜನಿಕರು ಸದಾ ಪ್ರೋತ್ಸಾಹಿಸಿ ಹರಸಬೇಕಾಗಿ ಸಂಸ್ಥೆಯ ಮಾಲಕ ಸಂದೇಶ್ ರೈ ಸಂಪ್ಯ ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.