HomePage_Banner
HomePage_Banner
HomePage_Banner

ಕೆಮ್ಮಿಂಜೆ ಪುದುಕೋಳಿಯಲ್ಲಿ ಅಸಮರ್ಪಕ ವಿದ್ಯುತ್ | ಕೆಟ್ಟು ಹೋದ ಗೃಹೋಪಯೋಗಿ ವಿದ್ಯುತ್ ವಸ್ತುಗಳು -ಸಾರ್ವಜನಿಕರ ಆಕ್ರೋಶ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೆಮ್ಮಿಂಜೆ ಗ್ರಾಮದ ಪುದುಕೋಳಿ ಪರಿಸರದಲ್ಲಿ ಅಸಮರ್ಪಕ ವಿದ್ಯುತ್ ಸಂಪರ್ಕದಿಂದ ಹಲವು ಮನೆಗಳಲ್ಲಿ ಗೃಹೋಪಯೋಗಿ ವಿದ್ಯುತ್ ವಸ್ತುಗಳು ಕೆಟ್ಟು ಹೋಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ ಎಂದು ಮೆಸ್ಕಾಂ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿ ತಕ್ಷಣ ಸಮಪರ್ಕ ವಿದ್ಯುತ್ ಸರಬರಾಜು ಮಾಡುವಂತೆ ವಿನಂತಿಸಿದ್ದಾರೆ.

ಪುತ್ತೂರು ಮೂಲೆಯಲ್ಲಿರುವ ವಿದ್ಯುತ್ ಪರಿವರ್ತಕದಿಂದ ನಮ್ಮ ಪರಿಸರಕ್ಕೆ ವಿದ್ಯುತ್ ಸರಬರಾಜು ಆಗುತ್ತಿದ್ದು, ಕೆಲವು ದಿನಗಳಿಂದ ಅಸಮರ್ಪಕ ವಿದ್ಯುತ್‌ನಿಂದಾಗಿ ಮನೆಯ ಫ್ಯಾನ್, ಪ್ರಿಡ್ಜ್, ವಾಷಿಂಗಮಿಶನ್ ಸೇರಿದಂತೆ ಗೃಹೋಪಯೋಗಿ ವಿದ್ಯುತ್ ವಸ್ತುಗಳು, ಪಂಪ್‌ಸೆಟ್‌ಗಳು ಕೆಟ್ಟು ಹೋಗಿದೆ. ಸ್ಥಳೀಯ ಪವರ್‌ಮ್ಯಾನ್ ಅವರಿಗೆ ಮಾಹಿತಿ ನೀಡಿದ್ದರೂ ಈ ತನಕ ಸರಿಯಾಗಿಲ್ಲ. ಈ ನಿಟ್ಟಿನಲ್ಲಿ ತಕ್ಷಣ ವಿದ್ಯುತ್ ಸರಬರಾಜನ್ನು ದುರಸ್ಥಿಗೊಳಿಸಿ ಸಮಸ್ಯೆ ಸರಿಪಡಿಸುವಂತೆ ಮನವಿಯಲ್ಲಿ ತಿಳಿಸಿದ್ದಾರೆ. ಪರಿಸರದ ಡಾ. ಕೆ.ರಮೇಶ್, ನಿಂಗಪ್ಪ ದೇವೇಂದ್ರಪ್ಪ, ದಯಾನಂದ.ಪಿ, ಲಿಯಾಕ್ರಾಸ್ತಾ, ಲಿಡ್ವಿನ್ ಡಿ ಸೋಜ, ಬಾಲಕೃಷ್ಣ ಪೂಜಾರಿ, ಕುಶಾಲಪ್ಪ, ವಿಜಯಾ ಪಿ, ಕುಶಾಲಪ್ಪ, ಮಾಧವ ರೈ, ಕೃಷ್ಣಪ್ಪ, ಗಣೇಶ್, ಶ್ರೀಧರ್, ಸುಮನಾ ಭಟ್, ಸುಮಾನ ಎಂ ಭಟ್, ವೈ ಮಹಾಬಲ ಭಟ್, ಪ್ರವೀಣ್, ಗೋಪಾಲಕೃಷ್ಣ ಭಟ್ ಸೇರಿದಂತೆ ಹಲವಾರು ಮಂದಿ ಮನವಿ ನೀಡುವ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಮೆಸ್ಕಾಂ ಇಂಜಿನಿಯರ್ ರಾಮಚಂದ್ರ ಅವರು ಮನವಿ ಸ್ವೀಕರಿಸಿ ಪರಿಶೀಲಿಸುವುದಾಗಿ ಭರವಸೆ ವ್ಯಕ್ತಪಡಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.