HomePage_Banner
HomePage_Banner
HomePage_Banner

ನ.19: ಸರಕಾರಿ ಮೆಡಿಕಲ್ ಕಾಲೇಜು ಜಾಗದಲ್ಲಿ ಸೀಪುಡ್ ಪಾರ್ಕ್ ವಿರೋಧಿಸಿ ಪುತ್ತೂರು ಸರಕಾರಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿಯಿಂದ ಧರಣಿ

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಬನ್ನೂರಿನಲ್ಲಿ ಸರಕಾರಿ ಮೆಡಿಕಲ್ ಕಾಲೇಜಿಗೆ ಮೀಸಲಿಟ್ಟ ಜಾಗದಲ್ಲಿ ರೂ. 50 ಕೋಟಿ ಅನುದಾನದಲ್ಲಿ ಸೀಪುಡ್ ಪಾರ್ಕ್ ಮಾಡುವ ಯೋಜನೆಯನ್ನು ಕೈ ಬಿಡಬೇಕು. ಪುತ್ತೂರಿಗೆ ಸರಕಾರಿ ಮೆಡಿಕಲ್ ಕಾಲೇಜು ಬರಬೇಕು ಎಂದು ಆಗ್ರಹಿಸಿ ಸರಕಾರಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿ ನೇತೃತ್ವದಲ್ಲಿ ಸಮಾನಮನಸ್ಕರಿಂದ ನ.19ರಂದು ಇಲ್ಲಿನ ಮಹಾತ್ಮಗಾಂಧಿ ಪ್ರತಿಮೆಯ ಬಳಿ ಧರಣಿ ನಡೆಯಲಿದೆ ಎಂದು ಸಮಾನಮನಸ್ಕರ ಹೋರಾಟ ಸಮಿತಿ ಸಂಚಾಲಕ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿಯವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಅವರ ಕಚೇರಿಯಲ್ಲಿ ಅವರು ಸುದ್ದಿಯೊಂದಿಗೆ ಮಾತನಾಡಿದರು. ಸರಕಾರಿ ಆಸ್ಪತ್ರೆಯ ಹೋರಾಟ ಸಮಿತಿ ವತಿಯಿಂದ ಈಗಾಗಲೇ ಪುತ್ತೂರಿಗೆ ಸರಕಾರಿ ಮೆಡಿಕಲ್ ಕಾಲೇಜು ಬರಬೇಕೆಂದು ಆಗ್ರಹಿಸಿದ್ದೆವು. ಆದರೆ ಇದೀಗ ಮತ್ತೆ ಅದೇ ಜಾಗದಲ್ಲಿ ಸೀಪುಡ್ ಪಾರ್ಕ್ ಮಾಡುವ ಯೋಜನೆ ಮಾಡಿದ್ದಾರೆ. ತಕ್ಷಣ ಇದನ್ನು ಕೈ ಬಿಡಬೇಕು ಮತ್ತು ಪುತ್ತೂರಿಗೆ ಯಾವುದೇ ಕಾರಣಕ್ಕೂ ಸಿಪುಡ್ ಪಾರ್ಕ್ ಬರಬಾರದು ಎಂದು ಅವರು ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸರಕಾರಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿ ಮುಖಂಡ ಅಶ್ರಫ್ ಕಲ್ಲೇಗ ಅವರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.