HomePage_Banner
HomePage_Banner
HomePage_Banner

ಸೀ ಫುಡ್ ಪಾರ್ಕ್ ನಿರ್ಮಿಸುವ ಕುರಿತು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕೋಡಿಂಬಾಡಿ ಘಟಕದಿಂದ ಆಕ್ಷೇಪ

Puttur_Advt_NewsUnder_1
Puttur_Advt_NewsUnder_1

ಕೋಡಿಂಬಾಡಿ: ಪುತ್ತೂರು ತಾಲೂಕು ಬನ್ನೂರು ಗ್ರಾಮದ ಸೇಡಿಯಾಪು ಸರ್ವೆ ನಂಬರ್ 84 ರಲ್ಲಿ ಸರಕಾರಿ ವೈದ್ಯಕೀಯ ಕಾಲೇಜಿಗೆಂದು ಮೀಸಲಿಟ್ಟ 40 ಎಕ್ರೆ ಜಮೀನಿನಲ್ಲಿ ಸೀ ಫುಡ್ ಪಾರ್ಕ್ ನಿರ್ಮಿಸುವ ಕುರಿತು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕೋಡಿಂಬಾಡಿ ಘಟಕ ದ ವತಿಯಿಂದ ಆಕ್ಷೇಪಣೆಯನ್ನು ಸಲ್ಲಿಸಲಾಯಿತು.

ವೈದ್ಯಕೀಯ ಕಾಲೇಜಿಗೆಂದು ಮೀಸಲಿಟ್ಟ ಜಮೀನಿನಲ್ಲಿ ಸೀ ಫುಡ್ ಪಾರ್ಕ್ ಆಗುವ ಕುರಿತು ಬನ್ನೂರು ಗ್ರಾಮಕರಣಿಕರು ಸಾರ್ವಜನಿಕ ಪ್ರಕಟಣೆಯಲ್ಲಿ ತಿಳಿಸಿದ್ದು,ಆ ಬಗ್ಗೆ ಆಕ್ಷೇಪಣೆ ಇದ್ದಲ್ಲಿ ಸಲ್ಲಿಸಲು ಅವಕಾಶ ನೀಡಿದ್ದು, ಕೋಡಿಂಬಾಡಿ ರೈತ ಸಂಘ ಮತ್ತು ಹಸಿರು ಸೇನೆಯು ಅಧ್ಯಕ್ಷರಾದ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು ಇವರ ನೇತೃತ್ವದಲ್ಲಿ ಆಕ್ಷೇಪಣಾ ಮನವಿಯನ್ನು ಬನ್ನೂರು ಗ್ರಾಮಕರಣಿಕರಾದ ಶ್ರೀಮತಿ ಶರಣ್ಯರವರಿಗೆ ಸಲ್ಲಿಸಲಾಯಿತು.ಸಂದರ್ಭದಲ್ಲಿ ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮುರಳೀಧರ ರೈ ಮಠಂತಬೆಟ್ಟು, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕೋಡಿಂಬಾಡಿ ಘಟಕದ ಗೌರವಾಧ್ಯಕ್ಷರಾದ ಹುಸೈನ್ ಕೆ.ಬಿ.ಕೆ ಕೋಡಿಂಬಾಡಿ, ಗೌರವ ಸಲಹೆಗಾರರಾದ ವಿಕ್ರಮ್ ಶೆಟ್ಟಿ ಅಂತರ,ಉಪಾಧ್ಯಕ್ಷರಾದ ಜಗನ್ನಾಥ ಶೆಟ್ಟಿ ನಡುಮನೆ, ಕಾರ್ಯದರ್ಶಿ ಯಾದ ಯೋಗೀಶ್. ಯಸ್.ಸಾಮಾನಿ, ಸಂಪಿಗೆದಡಿ-ಮಠಂತಬೆಟ್ಟು, ಸದಸ್ಯರುಗಳಾದ ಮೋನಪ್ಪ ಗೌಡ ಪಮ್ಮನಮಜಲು,ಜಗನ್ನಾಥ ಶೆಟ್ಟಿ ಇಡೆಪುಣಿ,ಮೈಕಲ್ ವೇಗಸ್ ಶಾಂತಿನಗರ,ವಸಂತ ಗೌಡ ಪಣಿತೋಟ ಮುಂತಾದವರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.