HomePage_Banner
HomePage_Banner
HomePage_Banner

ನ.21: ಕಾವು ತುಡರ್ ಯುವಕ ಮಂಡಲದ ನೇತೃತ್ವದಲ್ಲಿ ಆಧಾರ್ ಮೇಳ

Puttur_Advt_NewsUnder_1
Puttur_Advt_NewsUnder_1

ಕಾವು: ಜಿಲ್ಲಾ ಪ್ರಶಸ್ತಿ ಪುರಸ್ಕೃತ ಕಾವು ನನ್ಯ ತುಡರ್ ಯುವಕ ಮಂಡಲದ ನೇತೃತ್ವದಲ್ಲಿ ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಹಕಾರದೊಂದಿಗೆ ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ, ಸುಳ್ಯ ಉಪವಿಭಾಗ, ಉಪ ಅಂಚೆಕಛೇರಿ ಕಾವು ಇದರ ಸಹಭಾಗಿತ್ವದಲ್ಲಿ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಸೇವೆಯ ಬೃಹತ್ ಆಧಾರ್ ಮೇಳ ಮತ್ತು ಅಂಚೆ ಇಲಾಖೆ ಸೌಲಭ್ಯದ ಮಾಹಿತಿ ಕಾರ್ಯಕ್ರಮವು ನ.21ರಂದು ಕಾವು ಸಹಕಾರ ಸಂಘದ ಶಿವಸದನ ಸಭಾಭವನದಲ್ಲಿ ನಡೆಯಲಿದೆ.

ಬೆಳಿಗ್ಗೆ ಗಂಟೆ 9ರಿಂದ ಸಂಜೆ ೫ರವರೆಗೆ ನಡೆಯಲಿರುವ ಆಧಾರ ಮೇಳದಲ್ಲಿ ಹೊಸ ನೋಂದಣಿ, ಮೊಬೈಲ್ ನಂಬರ್ ಸೇರ್ಪಡೆ, ಬಯೋಮೆಟ್ರಿಕ್(ಬೆರಳಚ್ಚು) ಪರಿಷ್ಕರಣೆ, ಹೆಸರು, ವಿಳಾಸ ತಿದ್ದುಪಡಿ, ಜನ್ಮ ದಿನಾಂಕ ತಿದ್ದುಪಡಿ ಸೇವೆಗಳು ನಡೆಯಲಿದೆ. ಆಧಾರ್ ತಿದ್ದುಪಡಿಗೆ ಬೇಕಾದ ಅಗತ್ಯ ಮೂಲ ದಾಖಲೆಯನ್ನು ಪರಿಶೀಲನೆಗೆ ತರಬೇಕಾಗುತ್ತದೆ. ಆಧಾರ ಸೇವೆ ಪಡೆಯಲಿಚ್ಛಿಸುವವರು ಕಾರ್ಯಕ್ರಮ ದಿನಾಂಕದಂದೇ ಸ್ಥಳದಲ್ಲಿಯೇ ಟೋಕನ್ ಪಡೆದುಕೊಳ್ಳಬೇಕಾಗುತ್ತದೆ ಎಂದು ಕಾರ್ಯಕ್ರಮ ಸಂಘಟಕರು ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.