HomePage_Banner
HomePage_Banner
HomePage_Banner

ಕೇರಳ ರಾಜ್ಯಕ್ಕೆ ಕಾರ್ಯಾಚರಣೆಯಾಗುತ್ತಿರುವ ಸಾರಿಗೆ ನಿಗಮದ ಬಸ್ಸುಗಳ ಪುನರಾರಂಭ – ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೋವಿಡ್-19ರ ಲಾಕ್‌ಡೌನ್ ಘೋಷಣೆಯಾದಗಿನಿಂದ ಕರ್ನಾಟಕ-ಕೇರಳ ಅಂತರರಾಜ್ಯ ಸಾರಿಗೆಗಳನ್ನು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು. ಪ್ರಸ್ತುತ ಸದ್ರಿ ಸಾರಿಗೆಗಳನ್ನು ಪುನರಾರಂಭಿಸಲು ಉಭಯ ರಾಜ್ಯಗಳು ಸಹಮತಿಯನ್ನು ವ್ಯಕ್ತಪಡಿಸಿರುವ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಪುತ್ತೂರು ವಿಭಾಗದಿಂದ ಕೇರಳ ರಾಜ್ಯಕ್ಕೆ ಈ ಹಿಂದೆ ಕಾರ್ಯಾಚರಣೆಯಾಗುತ್ತಿದ್ದ ಬಿಸಿರೋಡು-ಮುಡಿಪು-ದೇರಳಕಟ್ಟೆ-ತಲಪಾಡಿ-ಕಾಸರಗೋಡು ಮಾರ್ಗದ ಸಾರಿಗೆಗಳನ್ನು ಈಗಾಗಲೇ ಪ್ರಾರಂಭಿಸಲಾಗಿರುತ್ತದೆ. ಪುತ್ತೂರು-ವಿಟ್ಲ-ಕಾಸರಗೋಡು ಹಾಗೂ ಸುಳ್ಯ-ಪಂಜಿಕಲ್ಲು-ಕಾಸರಗೋಡು ಮಾರ್ಗದ ಸಾರಿಗೆಗಳನ್ನು ನ.19ರಿಂದ ಪುನರಾರಂಭಿಸಲಾಗುವುದು.

ಅಲ್ಲದೇ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಕಾಸರಗೋಡು-ವಿಟ್ಲ-ಪುತ್ತೂರು-ಬೆಂಗಳೂರು ರಾಜಹಂಸ ಸಾರಿಗೆ, ಮಡಿಕೇರಿ-ಮಲ್ಲಪುರಂ ವೇಗದೂತ ಸಾರಿಗೆ, ಪುತ್ತೂರು-ವಿಟ್ಲ-ಮಂಜೇಶ್ವರ, ಪುತ್ತೂರು-ವಿಟ್ಲ-ಬದಿಯಡ್ಕ-ಮಲ್ಲ, ಪುತ್ತೂರು-ವಿಟ್ಲ-ಕುರ್ಚಿಪಳ್ಳ ಸಾರಿಗೆಗಳನ್ನು ಪ್ರಾರಂಭಿಸಲಾಗುವುದು. ಸಾರ್ವಜನಿಕ ಪ್ರಯಾಣಿಕರು ಈ ಸಾರಿಗೆಗಳ ಸದುಪಯೋಗವನ್ನು ಪಡೆದುಕೊಳ್ಳಲು ಕೋರಲಾಗಿದೆ ಎಂದು ಪುತ್ತೂರು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.