HomePage_Banner
HomePage_Banner
HomePage_Banner

ನ.26: ಅಖಿಲ ಭಾರತ ಕಾರ್ಮಿಕ ಮುಷ್ಕರ ಯಶ್ವಸ್ವಿಗೊಳಿಸಲು ಬಿ.ಎಂ.ಭಟ್ ಕರೆ

Puttur_Advt_NewsUnder_1
Puttur_Advt_NewsUnder_1
  • ಮಾಜಿ ಸೈನಿಕರ ಭವನದಲ್ಲಿ ನಡೆದ ಕಾರ್ಮಿಕ ಸಮಾವೇಶ

ಪುತ್ತೂರು: ಕೇಂದ್ರ ಸರಕಾರದಕಾರ್ಮಿಕ ವಿರೋದಿ, ರೈತ ವಿರೋದಿ, ಜನ ವಿರೋದಿ ದೋರಣೆಯಿಂದ ಮಾತ್ರವಲ್ಲ್ಲಭಾರತದ ಒಂದೊಂದೆ ಸಾರ್ವಜನಿಕ ಆಸ್ತಿಯನ್ನು ಮಾರಾಟ ಮಾಡುತ್ತಾ ದೇಶದ ಸರ್ವನಾಶ ಮಾಡಲು ಹೊರಟಿರುವ ಕೇಂದ್ರದ ಬಿಜೆಪಿ ಸರಕಾರದ ನೀತಿಯ ವಿರುದ್ದ ಎಲ್ಲಾ ಕಾರ್ಮಿಕ ಸಂಘಟನೆಗಳು ನ.26ರಂದು ಅಖಿಲ ಭಾರತ ಮುಷ್ಕರ ನಡೆಸಲು ತೀರ್ಮಾನಿಸಿದ್ದು,  ಅದನ್ನು ಯಶಸ್ವಿಗೊಳಿಸಬೇಕು ಎಂದು ಕಾರ್ಮಿಕ ವರ್ಗದ ರಾಜ್ಯ ನಾಯಕ ನ್ಯಾಯವಾದಿ ಬಿ.ಎಂ.ಭಟ್ ಹೇಳಿದರು.

ಪುತ್ತೂರು ಮಾಜಿ ಸೈನಿಕರ ಭವನದಲ್ಲಿ ನಡೆದ ಕಾರ್ಮಿಕ ಸಮಾವೇಶದಲ್ಲಿ ಅವರು ಮಾತನಾಡಿದರು. ಜಿಲ್ಲೆಯ ಬೀಡಿಕಾರ್ಮಿಕರಿಗೆ 3 ವರ್ಷದಿಂದ ಕನಿಷ್ಟ ಕೂಲಿ ಬಾಕಿ ಮಾಡಿದ ಬೀಡಿ ಮಾಲಕರ ವಿರುದ್ದ, ಕಳೆದ 3 ವರ್ಷಗಳ ತುಟ್ಟಿ ಭತ್ಯೆ ಬಾಕಿ ಮಾಡಿಕಾರ್ಮಿಕರಿಗೆ ಮೋಸ ಮಾಡಿದ ಬೀಡಿ ಮಾಲಕರ ವಿರುದ್ದ, ನಡೆಯುವ ಈ ಮುಷ್ಕರ ವಾರ ಪೂರ್ತಿ ಕೆಲಸ ನೀಡದೆ ಕಾರ್ಮಿಕರನ್ನು ಶೋಷಣೆ ಮಾಡುವ ಬೀಡಿ ಮಾಲಕರು ಕಾರ್ಮಿಕರು ಕೆಲಸ ಬಿಟು ಹೋಗುವಾಗ ನೀಡಬೇಕಾದ ಗ್ರಾಚ್ಯುವಿಟಿ ಹಣವನ್ನೂ ನೀಡದೆ ವಂಚಿಸುತ್ತಿರುವುದನ್ನೂ ಈ ಮುಷ್ಕರದ ಮೂಲಕ ಸರಕಾರದ ಗಮನಕ್ಕೆ ತರೋಣ ಎಂದರು.

ಅಕ್ಷರದಾಸೋಹ ನೌಕರರಿಗೆ ಬದುಕಲು ತಕ್ಕ ವೇತನ ನೀಡದೆ ಕೇವಲ ಮಾಸಿಕ ರೂ.2,500 ವೇತನದಲ್ಲಿ ದುಡಿಸುತ್ತಾ ಕಳೆದ 6 ವರ್ಷಗಳಿಂದ ವೇತನ ಏರಿಸದ ನರೇಂದ್ರ ಮೋದಿ ಸರಕಾರದ ವಿರುದ್ದ ಅವರು ಕಿಡಿಕಾರಿದರು. ಹಿಂದು ಉದ್ದಾರ ಎನ್ನುವ ಈ ಸರಕಾರ ಹಿಂದು ರೈತರ, ಹಿಂದು ಕಾರ್ಮಿಕರನ್ನೂ ಸೇರಿಸಿ ಎಲ್ಲಾ ರೈತ, ಕಾರ್ಮಿಕರನ್ನೂ ಬೀದಿಗೆ ತಳ್ಳುವ ಕಾನೂನುಗಳನ್ನು ಜಾರಿ ಮಾಡುತ್ತಿದೆ ಎಂದು ಟೀಕಿಸಿದರು.

ಕಾರ್ಮಿಕ ನಾಯಕಿ ಈಶ್ವರಿ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತಾಡಿದರು. ಅಕ್ಷರದಾಸೋಹ ನೌಕರ ಸಂಘದ ಅದ್ಯಕ್ಷೆ ಸುಧಾ ಅಧ್ಯಕ್ಷತೆ ವಹಿಸಿ ವಂದಿಸಿದರು. ವೇದಿಕೆಯಲ್ಲಿ ಕಾರ್ಮಿಕ ನಾಯಕರಾದ ಕೇಶವ ಕುಮಾರ್, ಕಾರ್ಯದರ್ಶಿ ಸವಿತ, ವೇದಾವತಿ ಕೊಳ್ತಿಗೆ, ಜಯಂತಿ ಮುರ ,ಗಣೆಶ ಪ್ರಸಾದ್, ಕುಮಾರಿಗೌರಿ ಕಾಯರ್ತಡ್ಕ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.