HomePage_Banner
HomePage_Banner
HomePage_Banner

ಡಿಬಿಐಎಲ್ ಜೊತೆ ವಿಲೀನವಾಗಲಿದೆ ಲಕ್ಷ್ಮೀವಿಲಾಸ್ ಬ್ಯಾಂಕ್

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಲಕ್ಷ್ಮಿ ವಿಲಾಸ್ ಬ್ಯಾಂಕ್ (ಎಲ್‌ವಿಬಿ) ಅನ್ನು ಡಿಬಿಎಸ್ ಬ್ಯಾಂಕ್ ಇಂಡಿಯಾ ಲಿಮಿಟೆಡ್ (ಡಿಬಿಐಎಲ್) ಜತೆಗೆ ವಿಲೀನಗೊಳಿಸುವ ಕರಡು ಯೋಜನೆಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಘೋಷಿಸಿದೆ. ಪುತ್ತೂರಿನ ಕೋರ್ಟ್‌ರಸ್ತೆಯಲ್ಲಿರುವ ಲಕ್ಷ್ಮೀ ವಿಲಾಸ್ ಬ್ಯಾಂಕ್‌ನ ಶಾಖೆಯಲ್ಲಿ ಎಂದಿನಂತೆ ವ್ಯವಹಾರ ನಡೆದಿದೆ.
ವಿಲೀನದ ಕುರಿತು ಘೋಷಣೆಯಾದ ತಕ್ಷಣ ಹಣಕಾಸು ಸಚಿವಾಲಯವು ಒಂದು ತಿಂಗಳ ಅವಧಿಗೆ ಪ್ರತಿ ಠೇವಣಿದಾರರಿಗೆ ವಾಪಸಾತಿ ಮಿತಿಯನ್ನು 25 ಸಾವಿರ ರೂ. ಸೀಮಿತಗೊಳಿಸಿದೆ. ಚೆನ್ನೈ ಮೂಲದ ಲಕ್ಷ್ಮಿ ವಿಲಾಸ್ ಬ್ಯಾಂಕ್ 94 ವರ್ಷಗಳ ಇತಿಹಾಸ ಹೊಂದಿದ್ದು, ಚಿಲ್ಲರೆ ಮತ್ತು ಎಸ್‌ಎಂಇ ಗ್ರಾಹಕರನ್ನು ಹೊಂದಿದೆ. ಒಂದು ತಿಂಗಳ ತನಕ ನಗದು ಹಿಂಪಡೆಯುವಿಕೆ ಮಿತಿಯನ್ನು ಪ್ರತಿ ಖಾತೆಗೆ ೨೫ ಸಾವಿರ ರೂ. ಮಿತಿ ಹೇರಲಾಗಿದೆ ಎಂದು ಲಕ್ಷ್ಮಿ ವಿಲಾಸ್ ಬ್ಯಾಂಕ್‌ನ ನಿರ್ವಾಹಕರಾಗಿ ನೇಮಕಗೊಂಡಿರುವ ಕೆನರಾ ಬ್ಯಾಂಕ್‌ನ ಮಾಜಿ ಕಾರ್ಯನಿರ್ವಾಹಕೇತರ ಅಧ್ಯಕ್ಷ ಟಿ.ಎನ್.ಮನೋಹರನ್ ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.