HomePage_Banner
HomePage_Banner
HomePage_Banner

ಜಿಲ್ಲಾ ಅಪರಾಧ ಗುಪ್ತ ವಾರ್ತಾ ವಿಭಾಗದ ಹೆಡ್ ಕಾನ್‌ಸ್ಟೇಬಲ್ ಕುಂಬ್ರದ ಉದಯ ರೈ ಮಂದಾರಗೆ ಮುಖ್ಯಮಂತ್ರಿ ಚಿನ್ನದ ಪದಕ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಓ.ಓ.ಡಿ ಜಿಲ್ಲಾ ಅಪರಾಧ ಗುಪ್ತ ವಾರ್ತಾ ವಿಭಾಗದಲ್ಲಿ ಸಿವಿಲ್ ಹೆಡ್ ಕಾನ್‌ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಕುಂಬ್ರದ ಉದಯ ರೈ ಮಂದಾರರವರು 2017 ನೇ ಸಾಲಿನ ಮುಖ್ಯ ಮಂತ್ರಿಯವರ ಚಿನ್ನದ ಪದಕಕ್ಕೆ ಆಯ್ಕೆಯಾಗಿದ್ದಾರೆ. ದಿ.ನಾರಾಯಣ ರೈ ಮತ್ತು ಲಲಿತಾ ರೈಯವರ ಪುತ್ರರಾಗಿರುವ ಇವರು ಸಿನಿಮಾ ನಟ, ನಿರ್ದೇಶಕ ಸುಂದರ ರೈ ಮಂದಾರರವರ ಸಹೋದರರಾಗಿದ್ದಾರೆ.

ಉದಯ ರೈಯವರು ೨೦೦೦ ಜೂನ್ ೧೬ ರಂದು ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡು ಆರಕ್ಷಕರಾಗಿ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಪ್ರಥಮವಾಗಿ ತಮ್ಮ ಸೇವೆಯನ್ನು ಆರಂಭಿಸಿದ್ದಾರೆ. ಬಳಿಕ ಬೆಳ್ತಂಗಡಿ, ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ ಪ್ರಸ್ತುತ ಬಂಟ್ವಾಳ ಸಂಚಾರ ಪೊಲೀಸ್ ಠಾಣೆ (ಓ.ಓ.ಡಿ ಜಿಲ್ಲಾ ಅಪರಾಧ ಗುಪ್ತ ವಾರ್ತೆ ವಿಭಾಗ )ಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ಸೇವೆಗೆ ಸೇರಿದಂದಿನಿಂದ ವಿಶೇಷವಾಗಿ ಅಪರಾಧ ಪತ್ತೆ ಕಾರ್ಯದಲ್ಲಿ ಹೆಚ್ಚಿನ ಮುತುವರ್ಜಿಯನ್ನು ವಹಿಸಿರುತ್ತಾರೆ. ಹಾಗೂ ಆನೇಕ ಅಪರಾಧ ಪ್ರಕರಣಗಳಲ್ಲಿ ಅಪರಾಧಿಗಳನ್ನು ಪತ್ತೆ ಮಾಡಿ ಬಹುಮಾನಗಳನ್ನು ಪಡೆದುಕೊಂಡಿದ್ದಾರೆ. ಇವರ ಚಾಣಾಕ್ಷತನದಲ್ಲಿ ಅನೇಕ ಘೋರ ಅಪರಾಧಗಳು ಸೇರಿದಂತೆ ಅನೇಕ ಅಪರಾಧ ಪ್ರಕರಣಗಳು ಪತ್ತೆಯಾಗಿರುತ್ತದೆ.

೨೦೦೯ ರಲ್ಲಿ ಅಮಾಯಕ ಯುವತಿಯರನ್ನು ಪ್ರೀತಿಸುವ ನಾಟಕವಾಡಿ ಮದುವೆಯಾಗುತ್ತೇನೆಂದು ನಂಬಿಸಿ ಸೈನೆಡ್ ನೀಡಿ ಸೀರಿಯಲ್ ಕೊಲೆಗಳನ್ನು ಮಾಡಿದ ಕುಖ್ಯಾತ ಮೋಹನ್ ಕುಮಾರ್‌ರವರನ್ನು ಬಂಧಿಸಿ ೨೦ ಕೊಲೆ ಪ್ರಕರಣಗಳನ್ನು ಭೇದಿಸುವಲ್ಲಿ ಹಾಗೂ ಈ ಪ್ರಕರಣದ ತನಿಖೆಗೆ ತನಿಖಾಧಿಕಾರಿಯವರ ಜೊತೆಯಲ್ಲಿ ಸಹಕರಿಸಿರುತ್ತಾರೆ. ೨೦೧೨ರಲ್ಲಿ ಪೂಂಜಾಲಕಟ್ಟೆ ಠಾಣಾ ಸರಹದ್ದಿನ ಬಾರ್ಯ ಎಂಬಲ್ಲಿನ ಮುಸ್ಲಿಂ ಮಹಿಳೆ ಖತೀಜಮ್ಮ ಕೊಲೆ ಆರೋಪಿಗಳ ಪತ್ತೆ ಹಚ್ಚುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿರುತ್ತಾರೆ. ೨೦೧೩ರಲ್ಲಿ ಬೆಳ್ತಂಗಡಿ ಠಾಣಾ ಸರಹದ್ದಿನ ಬಂಗಾಡಿ ಜೈನ ಬಸದಿಯಿಂದ ಕಳವಾದ ೬ ತೀರ್ಥಂಕರ ವಿಗ್ರಹವನ್ನು ಹಾಗೂ ಜಿಲ್ಲೆಯ ವಿವಿಧ ದೇವಸ್ಥಾನಗಳಿಂದ ಕಳವಾದ ಚಿನ್ನ ಬೆಳ್ಳಿಯ ಆಭರಣಗಳನ್ನು ಪತ್ತೆ ಹಚ್ಚುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿರುತ್ತಾರೆ. ೨೦೧೬ ರಲ್ಲಿ ಬೆಳ್ಳಾರೆ ಪೊಲೀಸ್ ಠಾಣಾ ಸರಹದ್ದಿನಲ್ಲಿ ನಡೆದ ಇಸ್ಮಾಯಿಲ್ ಬೆಳ್ಳಾರೆ ಕೊಲೆ ಆರೋಪಿಗಳ ಪತ್ತೆ ಹಚ್ಚುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿರುತ್ತಾರೆ. ೨೦೧೬ ರಲ್ಲಿ ಧರ್ಮಸ್ಥಳ ಪೊಲೀಸು ಠಾಣಾ ಸರಹದ್ದಿನ ಕಕ್ಕಿಂಜೆ ವೃದ್ಧ ದಂಪತಿ ಮನೆ ದರೋಡೆ ಮಾಡಿ ಕೊಲೆ ಮಾಡಿದ ಆರೋಪಿಗಳ ಪತ್ತೆ ಹಚ್ಚುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿರುತ್ತಾರೆ. ಸುಳ್ಯ ಕೆವಿಜಿ ಪ್ರಾಂಶುಪಾಲ ರಾಮಕೃಷ್ಣ ಭಟ್ ಕೊಲೆ ಪ್ರಕರಣದ ಆರೋಪಿಗಳ ಪತ್ತೆ. ಸುಬ್ರಹ್ಮಣ್ಯ ಪಂಬೆತ್ತಾಡಿ ಸುಬ್ರಹ್ಮಣ್ಯ ಭಟ್ ಕೊಲೆ ಆರೋಪಿಗಳ ಪತ್ತೆ ಸೇರಿದಂತೆ ಹಲವು ಪ್ರಕರಣಗಳನ್ನು ಭೇದಿಸುವಲ್ಲಿ ಇವರು ಯಶಸ್ವಿಯಾಗಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.