HomePage_Banner
HomePage_Banner
HomePage_Banner

ಆಲಂಕಾರು: ಉದ್ಯೋಗ ನೈಪುಣ್ಯ ತರಬೇತಿ ಶಿಬಿರದ ಪೂರ್ವಭಾವಿ ಸಭೆ

Puttur_Advt_NewsUnder_1
Puttur_Advt_NewsUnder_1

ಆಲಂಕಾರು: ಗ್ರಾಮ ವಿಕಾಸ ಮಂಗಳೂರು ವಿಭಾಗ, ವಿವೇಕಾನಂದ ವಿಧ್ಯಾವರ್ಧಕ ಸಂಘ, ಸಹಕಾರ ಭಾರತಿ, ಆಲಂಕಾರು ಸಿ.ಎ ಬ್ಯಾಂಕ್ ,ಶ್ರೀ ಭಾರತೀ ವಿದ್ಯಾಸಂಸ್ಥೆಯ ಸಹಯೋಗದೊಂದಿಗೆ ನ.30ರಿಂದ ಡಿ.6ರ ತನಕ ಆಲಂಕಾರು ಭಾರತೀ ಹಿರಿಯ ಪ್ರಾಥಮಿಕ ಶಾಲೆ ಆಲಂಕಾರಿನಲ್ಲಿ ನಡೆಯುವ ಉದ್ಯೋಗ ನೈಪುಣ್ಯ ತರಬೇತಿ ಶಿಬಿರದ ಪೂರ್ವಭಾವಿ ಸಭೆಯು ಆಲಂಕಾರು ಸಿ.ಎ ಬ್ಯಾಂಕಿನ ದೀನದಯಾಳು ರೈತ ಸಭಾಭವನದಲ್ಲಿ ನಡೆಯಿತು.

ಪ್ರಾಂತ ಸಹ ಸೇವಾ ಪ್ರಮುಖ್ ನಾ.ಸೀತಾರಾಮ್ ಒಟ್ಟು ಕಾರ್ಯಕ್ರಮದ ಬಗ್ಗೆ ಹಾಗು ತರಬೇತಿಯ ಬಗ್ಗೆ ಮಾರ್ಗದರ್ಶನ ಮಾಡಿ ಎಲ್ಲರು ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳಬೇಕೆನ್ನುವ ದೃಷ್ಟಿಯಿಂದ ಇದೀಗಲೇ ಸುಳ್ಯ ವಿಧಾನಸಭಾಕ್ಷೇತ್ರದಲ್ಲಿ ಒಟ್ಟು 2750 ಮಂದಿಗೆ ತರಬೇತಿಯನ್ನು ನೀಡಲಾಗಿದೆ ಎಂದು ತಿಳಿಸಿದರು.

ವೇದಿಕೆಯಲ್ಲಿ ಕಡಬ ತಾಲೂಕ್ಕು ಸಂಘ ಚಾಲಕ್ ದಿವಾಕರ ರಾವ್ ಪಂಚವಟಿ, ಮಂಗಳೂರು ಸಹ ಸೇವಾ ಪ್ರಮುಖ್ ಸುಭಾಷ್ ಕಳೆಂಜ, ಆಲಂಕಾರು ಸಿ.ಎ ಬ್ಯಾಂಕಿನ ಅಧ್ಯಕ್ಷ ದರ್ಮಪಾಲ ರಾವ್ ಕಜೆ, ಗ್ರಾಮ ವಿಕಾಸ ಜಿಲ್ಲಾ ಸಹ ಸಂಯೋಜಕ ವಿನೋದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭೆಯಲ್ಲಿ ವಿಧ್ಯುತ್ ಉಪಕರಣ ಹಾಗು ಬಳಕೆ ಯ ದುರಸ್ತಿ,ಪ್ಲಂಬಿಗ್ ಮತ್ತು ಇಲೆಕ್ಟ್ರೀಶಿಯನ್ ತರಬೇತಿ, ಕೃಷಿ, ಕಸಿ ಕಟ್ಟುವುದು, ಜೇನುಕೃಷಿ ತರಬೇತಿ, ಹೈನುಗಾರಿಕೆ, ಕೋಳಿ ಸಾಕಣಿಕೆ, ಕೃಷಿಯಂತ್ರೋಪಕರಣಗಳ ಬಳಕೆ ಮತ್ತು ದುರಸ್ತಿ, ಪುಡ್ ಟೆಕ್ನ್ ಲಾಜಿ ,ಕರಕುಶಲ ಸಾಮಾಗ್ರಿಗಳ ತಯಾರಿಕ ತರಬೇತಿಗಳ ಸಂಯೋಜಕರು,ಗ್ರಾಮಸಂಯೋಜಕರು,ಒಟ್ಟು ತರಬೇತಿಯ ಸಂಯೋಜಕರನ್ನು ಸಭೆಯಲ್ಲಿ ಅಯ್ಕೆ ಮಾಡಲಾಯಿತು. ಸಭೆಯಲ್ಲಿ ಆಲಂಕಾರು,ರಾಮಕುಂಜ, ಹಳೇನೆರೆಂಕಿ,ಪೆರಾಬೆ,ಕುಂತೂರು,ಕಾಣಿಯೂರು ಗ್ರಾಮಗಳ ಪ್ರಮುಖರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.