HomePage_Banner
HomePage_Banner
HomePage_Banner

ಮೆಡಿಕಲ್ ಕಾಲೇಜುಗೆ ಕಾದಿರಿಸದ ಸ್ಥಳದಲ್ಲಿ ಸೀಫುಡ್ ಪಾರ್ಕ್ ನಿರ್ಮಾಣಕ್ಕೆ ಕನ್ನಡ ಸೇನೆ ಜಿಲ್ಲಾಧ್ಯಕ್ಷ ಚಂದ್ರಶೇಖರ ಎ. ರವರಿಂದ ಆಕ್ಷೇಪಣೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಬನ್ನೂರು ಗ್ರಾಮದ ಸ.ನ.84ರಲ್ಲಿ ಸರಕಾರಿ ಮೆಡಿಕಲ್ ಕಾಲೇಜಿಗೆ ಮತ್ತು ಶೈಕ್ಷಣಿಕ ಉದ್ದೇಶಕ್ಕೆ ಮೀಸಲಿಟ್ಟ 40 ಎಕರೆ ಸ್ಥಳವನ್ನು ಬೇರೆ ಉದ್ದೇಶಕ್ಕೆ ಬಳಕೆ ಮಾಡುವ ಬಗ್ಗೆ ದ.ಕ.ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ಚಂದ್ರಶೇಖರ ಎ. ರವರು ರಾಜ್ಯ ಕಂದಾಯ ಸಚಿವರಿಗೆ ಆಕ್ಷೇಪಣೆ ಸಲ್ಲಿಸಿದ್ದಾರೆ.

ಸದ್ರಿ ಸ್ಥಳವನ್ನು ಸೀ ಫುಡ್ ಪಾರ್ಕ್ ಉದ್ದೇಶಕ್ಕೆ ಬದಲಾವಣೆ ಮಾಡಲು ಉದ್ದೇಶಿಸಿದ ವಿಚಾರ ತಿಳಿದು ಬಂದಿರುತ್ತದೆ. ಸರಕಾರಿ ಮೆಡಿಕಲ್ ಕಾಲೇಜ್‌ಗೆ ಕಾದಿರಿಸಿದ ಸ್ಥಳವನ್ನು ಬೇರೆ ಉದ್ದೇಶಕ್ಕೆ ಬಳಸುವುದಕ್ಕೆ ನಮ್ಮ ತೀವ್ರವಾದ ಆಕ್ಷೇಪಣೆ ಇರುತ್ತದೆ. ಮುಂದಕ್ಕೆ ಜಿಲ್ಲಾ ಕೇಂದ್ರವಾಗಲಿರುವ ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು ತೆರೆಯಲು ಸ್ಥಳ ಇಲ್ಲದೆ ತೊಂದರೆಯಾಗುವ ಸಂಭವ ಇರುತ್ತದೆ. ಬಡ ಜನರಿಗೆ ಮೆಡಿಕಲ್ ಕಲಿಯಲು ಸರಕಾರಿ ಮೆಡಿಕಲ್ ಕಾಲೇಜುಗಳ ಅವಶ್ಯಕತೆ ಇರುತ್ತದೆ. ಆದ್ದರಿಂದ ಮೆಡಿಕಲ್ ಕಾಲೇಜುಗೆ ಕಾದಿರಿಸಿದ ಸ್ಥಳವನ್ನು ಸೀ ಫುಡ್ ಪಾರ್ಕ್ ಉದ್ದೇಶಕ್ಕೆ ಬದಲಾವಣೆ ಮಾಡಲು ಆಕ್ಷೇಪಣೆ ಇದೆ ಎಂದು ತಿಳಿಸಲಾಗಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.