HomePage_Banner
HomePage_Banner
HomePage_Banner
HomePage_Banner

ಪುತ್ತೂರು ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ಆಶ್ರಯದಲ್ಲಿ 67ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರಂಭ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಸಹಕಾರಿ ಸಂಘದ ಮಹಿಳಾ ಮಣಿಗಳ ಭಾಗವಹಿಸುವಿಕೆ
  • ಸಪ್ತಾಹದ ಮೂಲಕ 2 ಪ್ರಮುಖ ಕೊಡುಗೆ – ಶಶಿಕುಮಾರ್ ರೈ ಬಾಲ್ಯೊಟ್ಟು
  • ಪುತ್ತೂರು ಮಹಿಳಾ ಸೊಸೈಟಿಯ ಉತ್ತಮ ಕೆಲಸ – ಕೆ.ಜೀವಂಧರ್ ಜೈನ್
  • ಸಹಕಾರಿ ಸಂಘ ಜನಸಾಮಾನ್ಯರಲ್ಲಿ ಬದಲಾವಣೆ ತಂದಿದೆ- ಪ್ರಸಾದ್ ಕೌಶಲ್ ಶೆಟ್ಟಿ
  • ಜನಸಾಮಾನ್ಯರಿಗೆ ಬಹಳ ಹತ್ತಿರವಾದ ಕ್ಷೇತ್ರ- ರಾಜಶೇಖರ್ ಜೈನ್
  • ಆತ್ಮನಿರ್ಭರ ಭಾರತದ ಅಡಿಯಲ್ಲಿ ಉತ್ತಮ ಕಾರ್ಯ – ಗೌರಿ ಬನ್ನೂರು
  • ಪ್ರತಿ ಗ್ರಾಮಕ್ಕೊಂದು ಮಹಿಳಾ ಸಹಕಾರಿ ಸಂಘ ಬೇಕು – ಇಂದಿರಾ ಭಂಡಾರಿ

ಪುತ್ತೂರು: ಯುವಜನ, ಮಹಿಳಾ ಮತ್ತು ಅಬಲ ವರ್ಗಕ್ಕಾಗಿ ಸಹಕಾರಿ ಸಂಸ್ಥೆಗಳೆಂಬ ಉದ್ದೇಶವಿಟ್ಟು ಕೊಂಡು ಪುತ್ತೂರಿನ ವಿವಿಧ ಸಹಕಾರಿ ಸಂಘಗಳಲ್ಲಿರುವ ಮಹಿಳಾ ನಿರ್ದೇಶಕರ ಕೂಡುವಿಕೆಯೊಂದಿಗೆ ನ.19ರಂದು ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ೬೭ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರಂಭ ನಡೆಯಿತು. ಮಹಿಳಾ ಮಣಿಗಳ ನೇತೃತ್ವ ಮತ್ತು ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಿತು.
  
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲ, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಯೂನಿಯನ್, ತಾಲೂಕು ಸಹಕಾರಿ ಯೂನಿಯನ್ ಮತ್ತು ಪುತ್ತೂರು ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘ ಪುತ್ತೂರು ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ಸಪ್ತಾಹ ಸಮಾರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಅವರು ಸಹಕಾರಿ ಧ್ವಜಾರೋಹಣ ಮಾಡಿದರು ನಗರಸಭಾ ಅಧ್ಯಕ್ಷ ಕೆ ಜೀವಂದರ್ ಜೈನ್ ಸಪ್ತಾಹವನ್ನು ಉದ್ಘಾಟಿಸಿದರು.

2 ಪ್ರಮುಖ ಕೊಡುಗೆಯೊಂದಿಗೆ ಸಪ್ತಾಹ:
ಕೇಂದ್ರ ಸಹಕಾರಿ ಬ್ಯಾಂಕ್ ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೋಟ್ಟು ಅವರು ಮಾತನಾಡಿ ಈ ಬಾರಿ ಸಹಕಾರಿ ಸಪ್ತಾಹವು ಎಲ್ಲಾ ಸಹಕಾರಿ ಸಂಘಗಳ ಮೂಲಕ ಜನೌಷಧಿ ಸೇವೆ ಮತ್ತು ಸಹಕಾರಿಯ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಸಹಕಾರ ಅಧ್ಯಯನ ಪೀಠವನ್ನು ಕೊಡುಗೆಯಾಗಿ ನೀಡುತ್ತಿದೆ. ಈಗಾಗಾಲೆ ವಿಶ್ವವಿದ್ಯಾಲಯದ ಕುಲಪತಿಗಳು ಘೋಷಣೆ ಮಾಡಿದ್ದಾರೆ ಎಂದರು. ೨೫ ವರ್ಷಗಳ ಹಿಂದೆ ಸಹಕಾರಿ ಸಂಘಗಳು ಕಷ್ಟದಲ್ಲಿದ್ದ ಸಂದರ್ಭದಲ್ಲಿ ಕೆಂದ್ರ ಎಸ್ ಸಿ ಡಿ ಸಿ ಬ್ಯಾಂಕ್ ಅಧ್ಯಕ್ಷರಾಗಿ ರಾಜೇಂದ್ರ ಕುಮಾರ್ ಆದ ಬಳಿಕ ಆರ್ಥಿಕವಾಗಿ ತೊಂದರೆಯಲ್ಲಿದ್ದ ಸಹಕಾರಿ ಸಂಘವನ್ನು ಮೇಲೆತ್ತುವ ಮೂಲಕ ಸಹಕಾರಿ ಸಂಘಗಳನ್ನು ಸದ್ರಢಗೊಳಿಸಿದ್ದಾರೆ. ಒಟ್ಟಿನಲ್ಲಿ ಹುಟ್ಟಿನಿಂದ ಛಟ್ಟದ ತನಕ ಸಹಕಾರಿ ಸಂಘಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದರು.

ಪುತ್ತೂರು ಮಹಿಳಾ ಸೊಸೈಟಿಯ ಉತ್ತಮ ಕೆಲಸ:
ಸಪ್ತಾಹವನ್ನು ಉದ್ಘಾಟಿಸಿದ ನಗರಸಭಾ ಅಧ್ಯಕ್ಷ ಕೆ ಜೀವಂಧರ್ ಜೈನ್ ಅವರು ಮಾತನಾಡಿ ಸಹಕಾರಿ ಸಂಘಗಳ ಮೂಲಕ ಎಷ್ಟೋ ಕುಟುಂಬ ಅಭಿವ್ರದ್ದಿ ಕೊಂಡಿದೆ. ಪುತ್ತೂರಿನಲ್ಲಿ ಮಹಿಳಾ ಸೊಸೈಟಿ ಉತ್ತಮ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಸಹಕಾರಿ ಸಂಘ ಜನಸಾಮಾನ್ಯರಲ್ಲಿ ಬದಲಾವಣೆ ತಂದಿದೆ:
ಸಹಕಾರ ಯೂನಿಯನ್ ಜಿಲ್ಲಾಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿಯವರು ಮಾತನಾಡಿ ಮೊಳಹಳ್ಳಿ ಶಿವರಾಯರ ಊರಲ್ಲಿ ಬೆಳೆದ ಸಹಕಾರಿ ಸಂಘ ಇವತ್ತು ಎಲ್ಲಾ ಕ್ಷೇತ್ರದಲ್ಲೂ ಸಾಧನೆ ಮಾಡಿದೆ. ಮಹಿಳಾ ಸಹಕಾರಿ ಸಂಘ ಉತ್ತಮ ಬೆಳವಣಿಗೆಯ ಜೊತೆ ಅನೇಕ ಉತ್ತಮ ಕಾರ್ಯಕ್ರಮ ಆಯೋಜಿಸುವ ಮೂಲಕ ಸಹಕಾರಿ ಕ್ಷೇತ್ರ ಪ್ರತಿ ಜನಸಾಮಾನ್ಯರ ಬದುಕಿನಲ್ಲಿ ಬದಲಾವಣೆ ಮಾಡಿದೆ. ಮುಂದಿನ ದಿನಗಳಲ್ಲಿ ಸಹಕಾರಿ ಕ್ಷೇತ್ರಕ್ಕೆ ಮಹಿಳೆಯರು ಯುವಕರು ಹೆಚ್ಚು ಹೆಚ್ಚು ಬರಬೇಕೆಂದು ಅವರು ವಿನಂತಿಸಿದರು.

ಜನಸಾಮಾನ್ಯರಿಗೆ ಬಹಳ ಹತ್ತಿರವಾದ ಕ್ಷೇತ್ರ:
ಸಹಕಾರಿ ಯೂನಿಯನ್ ಜಿಲ್ಲಾ ನಿರ್ದೇಶಕ ರಾಜಶೇಖರ್ ಜೈನ್ ಅವರು ಮಾತನಾಡಿ ಜನಸಾಮಾನ್ಯರಿಗೆ ಬಹಳ ಹತ್ತಿರವಾದ ಕ್ಷೇತ್ರ ಸಹಕಾರಿ ಸಂಘ. ಇದರಲ್ಲೂ ಮಹಿಳೆಯರು ಉತ್ತಮ ರೀತಿಯಲ್ಲಿ ಸಹಕಾರ ಸಂಘವನ್ನು ನಡೆಸುತ್ತಿದ್ದಾರೆ. ಈ ನಿಟ್ಡಿನಲ್ಲಿ ಜನರಿಗೆ ಪ್ರಯೋಜನವಾದ ಕಾರ್ಯಕ್ರಮ ಇನ್ನಷ್ಟು ಮೂಡಿಬರಲಿ ಎಂದು ಹೇಳಿದರು.

ಆತ್ಮನಿರ್ಭರ ಭಾರತದ ಅಡಿಯಲ್ಲಿ ಉತ್ತಮ ಕಾರ್ಯ:
ಅಧ್ಯಕ್ಷತೆ ವಹಿಸಿದ ಪುತ್ತೂರು ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷೆ ಗೌರಿ ಬನ್ನೂರು ಅವರು ಮಾತನಾಡಿ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಹಾಕಿಕೊಟ್ಟ ಆತ್ಮನಿರ್ಭರ ಭಾರತದಂತೆ ಸಹಕಾರಿ ಸಂಘದಲ್ಲಿ ಒಬ್ಬರಿಂದೊಬ್ಬರು ಸಹಕಾರಿಗಳಾಗಿ ಸೇವೆ ಮಾಡುವ ಮೂಲಕ ಸ್ವಾವಲಂಭಿ ಮಹಿಳೆಯರಾಗಿದ್ದೇವೆ. ನಮ್ಮ ಮಹಿಳಾ ಸಂಘದಲ್ಲಿ ಸುಮಾರು ೧೯೦೦ಕ್ಕೂಅಧಿಕ ಮಹಿಳಾ ಸದಸ್ಯರಿದ್ದು, ರೂ. ೧೫ ಕೋಟಿ ದುಡಿಯುವ ಬಂಡವಾಳ ಹೊಂದಿದ್ದೇವೆ. ಕೋವಿಡ್ ಸಂದರ್ಭದಲ್ಲಿ ಬಡ, ನಿರ್ಗತಿಕರಿಗೆ ಆಹಾರದ ಒದಗಿಸುವ ಮತ್ತು ೨ಸಾವಿರ ಪಡಿತರ ಚೀಟಿದಾರರಿಗೆ ಉಚಿತವಾಗಿ ಮಾಸ್ಕ್ ವಿತರಿಸಿದ್ದೇವೆ. ಪ್ರತಿ ವರ್ಷದ ಸಂಘದ ಲಾಭದಲ್ಲಿ ಒಂದಂಶವನ್ನು ವೃದ್ಧಾಶ್ರಮಕ್ಕೆ, ಬಡವರ್ಗದವರಿಗೆ, ನಿರ್ಗತಿಕರಿಗೆ ಮೀಸಲಿಡುವ ಮೂಲಕ ಮಹಾಮಂಡಲದಿಂದ ದ್ವಿತೀಯ ಬಾರಿ ಉತ್ತಮ ಪ್ರಶಸ್ತಿ ಪಡೆದುಕೊಂಡಿದ್ದೇವೆ ಎಂದರು. ಮಹಿಳೆಯರು ಕೂಡುಕುಟುಂಬದಿಂದ ಬಂದವರು ಅದೇ ರೀತಿಯ ಕೂಡುಕುಟುಂಬದಲ್ಲಿ ಸಹಕಾರಿ ಸಂಘದಲ್ಲಿ ಸೇವೆ ಮಾಡುತ್ತಿದ್ದಾರೆ ಎಂದರು.

ಪ್ರತಿ ಗ್ರಾಮಕ್ಕೊಂದು ಮಹಿಳಾ ಸಹಕಾರಿ ಸಂಘ ಬೇಕು:
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಬೆಳಿಯೂರು ಕಟ್ಟೆ ಸ.ಪ.ಪೂರ್ವ ಕಾಲೇಜಿನ ಉಪನ್ಯಾಸಕಿ ಇಂದಿರಾ ಭಂಡಾರಿ ಜೆ.ಎಮ್ ಅವರು ಮಾತನಾಡಿ ಆರ್ಥಿಕತೆ ಸುಧಾರಿಕೆಗೆ ಸಹಕಾರ ಸಂಘದ ಮಹಿಳೆಯ ಪಾತ್ರ ಪ್ರಮುಖವಾಗಿದೆ. ಸಹಕಾರ ಮನುಷ್ಯ ಜೀವನದ ಅವಿಭಾಜ್ಯ ಸಂಘ. ಸಹಕಾರಿ ಚಳುವಳಿ ಯಶಸ್ವಿಯಾಗ ಬೇಕಾದರೆ ಯುವಕರು ಈ ಕ್ಷೇತ್ರದಲ್ಲಿ ಭಾಗವಹಿಸಬೇಕು. ಯಾಕೆಂದರೆ ನಿರುದ್ಯೋಗ ಸಮಸ್ಯೆಯಿಂದ ಹೊರ ಬರಲು ಸಹಕಾರ ಸಂಘ ಪ್ರಮುಖ ಪಾತ್ರ ವಹಿಸುತ್ತದೆ. ವಿವಿಧ ಸಮಾಜದ ಮಹಿಳೆಯವರು ಸಹಕಾರಿ ಸಂಘದಲ್ಲಿ ಭಾಗವಹಿಸಲು ಮಹಿಳೆಯರಿಗೆ ಸಹಕಾರ ಸಂಘದ ಮೂಲಕ ಸಿಗುವ ಸಾಲ ಸೌಲಭ್ಯದ ಕುರಿತು ಅರಿವು, ಕಾನೂನು ಮಾಹಿತಿ, ಸ್ವಸಹಾಯ ಗುಂಪುಗಳ ರಚನೆ, ಮಹಿಳಾ ಸಬಲೀಕರಣ ಕುರಿತು ಮಾಹಿತಿ ನೀಡಬೇಕು ಮತ್ತು ಪ್ರತಿ ಗ್ರಾಮಕ್ಕೆ ಮಹಿಳಾ ಸಹಕಾರಿ ಸಂಘ ಬೇಕು ಎಂದು ಅವರು ಹೇಳಿದರು. ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕಿ ರಾಜೀವಿ ರೈ ಅವರು ಮಾತನಾಡಿ ಜಿಲ್ಲೆಯಲ್ಲಿ ಪುತ್ತೂರು ಮಹಿಳಾ ಸಂಘ ಬಹಳ ಯಶಸ್ವಿಯಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದರು. ಪುತ್ತೂರು ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ ರಾಜು ಅವರು ಶುಭ ಹಾರೈಸಿದರು. ಸಂಘದ ನಿರ್ದೇಶಕರಾದ ಮೋಹಿನಿ ದಿವಾಕರ್, ಪ್ರೇಮಲತಾ ರಾವ್ ಟಿ, ಶಶಿಕಲಾ, ಯಶೋಧ, ಜಯಶ್ರೀ ಎಸ್ ಶೆಟ್ಟಿ, ವಿಜಯಲಕ್ಷ್ಮೀ, ಇಂದಿರಾ ಪಿ ಆಚಾರ್ಯ, ಮೋಹಿನಿ ಪಿ ನಾಯ್ಕ್, ಅರ್ಪಣಾ ಎಸ್ ಅತಿಥಿಗಳನ್ನು ಗೌರವಿಸಿದರು. ಮಹಾಲಕ್ಷ್ಮೀ ಪ್ರಾರ್ಥಿಸಿದರು. ಸಂಘದ ನಿರ್ದೇಶಕಿ ಪ್ರೇಮಲತಾ ರಾವ್ ಸ್ವಾಗತಿಸಿ, ಉಷಾ ಮುಳಿಯ ವಂದಿಸಿದರು. ಉಪಾಧ್ಯಕ್ಷೆ ಉಮಾ ಡಿ ಪ್ರಸನ್ನ ಕಾರ್ಯಕ್ರಮ ನಿರೂಪಿಸಿದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ವಿದ್ಯಾ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಸಂಘದ ಗೌರವ ಸಲಹೆಗಾರರಾದ ನಾಗಪ್ಪಯ್ಯ, ಲಕ್ಷ್ಮೀನಾರಾಯಣ ಕಡಂಬಳಿತ್ತಾಯ ಮತ್ತು ವಿವಿಧ ಮಹಿಳಾ ಸದಸ್ಯರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.