HomePage_Banner
HomePage_Banner
HomePage_Banner

ಕಾವು: ಸಾರ್ವಜನಿಕ ಗೋಪೂಜೆ,ಧಾರ್ಮಿಕ ಸಭಾ ಕಾರ್ಯಕ್ರಮ, ಕೋರೋನ ವಾರಿಯರ್ಸ್‌ಗೆ ಗೌರವಾರ್ಪಣೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ವಿಶ್ವಹಿಂದೂ ಪರಿಷತ್ತು ಭಜರಂಗದಳ ಕಾವು ಘಟಕ ಹಾಗೂ ಗೋಪೂಜಾ ಸಮಿತಿ ಕಾವು ಇದರ ವತಿಯಿಂದ ೯ ನೇ ವರ್ಷದ ಸಾರ್ವಜನಿಕ ಗೋಪೂಜೆ, ಧಾರ್ಮಿಕ ಸಭಾ ಕಾರ್ಯಕ್ರಮ, ಕೊರೋನ ವಾರಿಯರ್ಸ್‌ಗೆ ಗೌರವಾರ್ಪಣೆ ಕಾರ್ಯಕ್ರಮ ಕಾವು ಪಂಚಲಿಂಗೇಶ್ವರ ದೇವಾಲಯದ ವಠಾರದಲ್ಲಿ ನ.೧೮ ರಂದು ನಡೆಯಿತು. ಅರ್ಚಕ ಶಿವಪ್ರಸಾದ್ ಕಡಮಣ್ಣಾಯರವರು ಗೋಪೂಜೆ ಕಾರ್ಯಕ್ರಮ ನೆರವೇರಿಸಿದರು. ನವದಂಪತಿಗಳು ಗೋವುಗಳಿಗೆ ಅವಲಕ್ಕಿ, ಹೂದ್ಲು ತಿನ್ನಿಸಿ ಹೂಹಾರ ಹಾಕಿ ದೀಪ ಬೆಳಗಿಸಿದರು.

 

ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ವಿಶ್ವ ಹಿಂದೂ ಪರಿಷತ್ ಪುತ್ತೂರು ಪ್ರಖಂಡದ ಅಧ್ಯಕ್ಷ ಜನಾರ್ದನ ಬೆಟ್ಟರವರು,ಗೋವು ಮನುಷ್ಯನ ಜೀವನ ಒಂದು ಆಧಾರ ಆಗಿದೆ.ಗೋವು ಸಾಕಾಣಿಕೆಯಿಂದ ವಾತಾವರಣವು ಶುದ್ಧಿಯಾಗುತ್ತದೆ. ಮನುಷ್ಯನ ಆರೋಗ್ಯ ರಕ್ಷಣೆಗೆ ಗೋಸಾಕಾಣಿಕೆ ಪೂರಕವಾಗಿದ್ದು ಗೋವಿನ ಸಂರಕ್ಷಣೆಗೆ ನಾವೆಲ್ಲರೂ ಪಣತೊಡಬೇಕು ಎಂದರು. ಕಾವು ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ಚಂದ್ರಶೇಖರ ರಾವ್ ನಿಧಿಮುಂಡರವರು ಗೋವಿನ ರಕ್ಷಣೆಗೆ ನಾವೆಲ್ಲರೂ ಕಟಿಬದ್ಧರಾಗೋಣ ಎಂದರು. ಮುಡ್ನೂರು ಶಕ್ತಿಕೇಂದ್ರ ಬಿಜೆಪಿ ಸಂಚಾಲಕ ಲೋಕೇಶ್ ಚಾಕೋಟೆಯವರು, ಗೋರಕ್ಷಣೆಯ ಜೊತೆಗೆ ಹಿಂದೂ ಧರ್ಮದ ರಕ್ಷಣೆಗೆ ಪರಿವಾರ ಸಂಘಟನೆಗಳೊಂದಿಗೆ ಕೈಜೋಡಿಸಿ ಬಲಿಷ್ಠ ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಪಣತೊಡಬೇಕು ಎಂದರು. ಗೋಪೂಜಾ ಸಮಿತಿ ಗೌರವ ಅಧ್ಯಕ್ಷ ಕಾವು ಭಾಸ್ಕರ ಬಲ್ಯಾಯ ಪ್ರಾಸ್ತಾವಿಕವಾಗಿ ಮಾತನಾಡಿ, ಗೋ ಸಂತತಿ ನಶಿಸುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿ, ಗೋವಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕು. ಹಿಂದೂ ಧರ್ಮದ ಆಚಾರ ವಿಚಾರಗಳನ್ನು ಉಳಿಸಿ ಬೆಳೆಸಿಕೊಂಡು ಬರಬೇಕಾದ ಜವಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು. ಇಂತಹ ಕಾರ್ಯಕ್ರಮಕ್ಕೆ ಮುಂದೆಯೂ ನಿಮ್ಮೆಲ್ಲರ ಸಹಕಾರ ಅಗತ್ಯ ಎಂದು ಹೇಳಿ ಸಹಕಾರ ಕೋರಿದರು.

ಕಾವು ಗೋಪೂಜಾ ಸಮಿತಿ ಅಧ್ಯಕ್ಷ ಹರೀಶ್ ಕುಂಜತ್ತಾಯ ಸ್ವಾಗತಿಸಿ, ಕಾರ್ಯದರ್ಶಿ ಶಿವಕುಮಾರ್ ಕಾವು ವಂದಿಸಿದರು. ವಿಶ್ವಹಿಂದೂ ಪರಿಷತ್ ಪುತ್ತೂರು ಪ್ರಖಂಡ ಕಾರ್ಯದರ್ಶಿ ವಿಶಾಖ್ ಸಸಿಹಿತ್ಲು ಕಾರ್ಯಕ್ರಮ ನಿರೂಪಿಸಿದರು.

ಕೊರೋನ ವಾರಿಯರ್ಸ್‌ಗೆ ಗೌರವಾರ್ಪಣೆ
ಕೋವಿಡ್ ೧೯ ಸಂದರ್ಭದಲ್ಲಿ ಕೋರೋನ ವಾರಿಯರ್ಸ್‌ಗಳಾಗಿ ಸೇವೆ ಸಲ್ಲಿಸಿದ್ದ ಕಿರಿಯ ಆರೋಗ್ಯ ಸಹಾಯಕಿ ನವ್ಯ ಪಿಉ, ಆಶಾ ಕಾರ್ಯಕರ್ತೆಯರಾದ ಮಮತಾ ಮಾಣಿಯಡ್ಕ, ಉಷಾಲತಾ ಅಶ್ವತ್ತಡಿ, ಹರಿಣಾಕ್ಷಿ ಅಶ್ವತ್ತಡಿ, ಉಷಾ ಡಿ.ಎಮ್ ಆಚಾರಿಮೂಲೆ, ಪ್ರಮೀಳಾ ಅಮ್ಚಿನಡ್ಕರವರುಗಳನ್ನು ಶಾಲು,ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ಕಾವು ದುರ್ಗಾವಾಹಿನಿ ಭಜನಾ ಮಂಡಳಿ ಇವರಿಂದ ಕುಣಿತ ಭಜನೆ ಹಾಗೂ ಭಜನಾ ಕಾರ್ಯಕ್ರಮ ನಡೆಯಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.