HomePage_Banner
HomePage_Banner

ಪುಣ್ಚಪ್ಪಾಡಿ ಶಾಲೆಯಲ್ಲಿ ಮೇಳೈಸಿತು ದೀಪಾವಳಿ ದೀಪದೃಶ್ಯ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಹತ್ತಾರು ಗೂಡುದೀಪ..! ನೂರಾರು ಹಣತೆ ಸಾಲು
  • ಮಹಿಳಾ ಗಾನ ತಾಳಮದ್ದಳೆಯೊಂದಿಗೆ ರಂಜಿಸಿತು ಸರಕಾರಿ ಶಾಲೆಯ ಬೆಳಕಿನ ಹಬ್ಬ

 

 ಸವಣೂರು : ಅದೇ ಸಂಭ್ರಮ…! ಅದು ಪುಣ್ಚಪ್ಪಾಡಿ ಗ್ರಾಮದ ಪುಟ್ಟ ಶಾಲೆ. ಪುಣ್ಚಪ್ಪಾಡಿ ಶಾಲೆ ಎಂದೇ ಪ್ರಸಿದ್ಧಿ..! ದೀಪಾವಳಿ ಆಚರಣೆ ಈ ಶಾಲೆಯ ಆಚರಣೆಗಳಲ್ಲಿ ಒಂದು. ಇದು ಮೂರನೇ ವರ್ಷದ ದೀಪಾವಳಿ. ಒಂದು ಕಡೆಯಿಂದ ಬೆಳಗುವ ಹತ್ತಾರು ರಾಜಸ್ಥಾನಿ ಗೂಡುದೀಪಗಳು..! ಮತ್ತೊಂದು ಕಡೆಯಿಂದ ನೂರಾರು ಹಣತೆಗಳ ಸಾಲು_! ಶಾಲೆಯ ಜಗಲಿ, ಹೊಸ್ತಿಲು, ಆವರಣ, ಅಂಗಳ ಹೀಗೆ ಎಲ್ಲೆಂದರಲ್ಲಿ ದೀಪವೋ ದೀಪ..! ಒಂದಲ್ಲ.. ಎರಡಲ್ಲ.. ಸಾವಿರಾರು..! ಊರವರೆಲ್ಲರೂ ಸೇರಿ ದೀಪ ಹಚ್ಚುವುದೇ ಸಂಭ್ರಮ.

ಈ ವರ್ಷದ ಕಾರ್ಯಕ್ರಮದಲ್ಲಿ ಮತ್ತೊಂದು ವಿಶೇಷತೆಯೆಂದರೆ ಮಹಿಳೆಯರ ಯಕ್ಷಗಾನ ತಾಳಮದ್ದಳೆ. ಯಕ್ಷಗಾನ ಅರ್ಥಧಾರಿ ಭಾಸ್ಕರ ಬಾರ್ಯರ ನಿರ್ದೇಶನದಲ್ಲಿ ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದ ಕಲಾವಿದರು ದೀಪಾವಳಿ ವಿಶಿಷ್ಟತೆಯ ಕಥಾನಕವನ್ನು ಬಹಳ ಸೊಗಸಾಗಿ ಮತ್ತು ಅರ್ಥಪೂರ್ಣವಾಗಿ ನಡೆಸಿಕೊಟ್ಟರು. ಇವರ ಅಚ್ಚುಕಟ್ಟಾದ ರಂಗಪ್ರಸ್ತುತಿ ಸೇರಿದ ಎಲ್ಲಾ ಪ್ರೇಕ್ಷಕರಿಗೆ ಮೌಲ್ಯ ಹಾಗೂ ರಂಜನೆಯನ್ನು ನೀಡುವುದರಲ್ಲಿ ಯಶಸ್ವಿಯಾಯಿತು.

ಈ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮದ ಹಿಮ್ಮೇಳದಲ್ಲಿ ಸತೀಶ್ ಇರ್ದೆ, ಮುರಳೀಧರ ಕಲ್ಲೂರಾಯ, ಶ್ರೀಪತಿ ಭಟ್ ಉಪ್ಪಿನಂಗಡಿ, ಮುಮ್ಮೇಳದಲ್ಲಿ ದೇವೇಂದ್ರನಾಗಿ ಹರಿಣಾಕ್ಷಿ ಜೆ ಶೆಟ್ಟಿ, ಬಲಿಯಾಗಿ ಶುಭ ಅಡಿಗ, ದೂರ್ವಾಸನಾಗಿ ಶಾರದ ಅರಸ್, ಮಹಾವಿಷ್ಣುವಾಗಿ ಶುಭ ಗಣೇಶ್, ಲಕ್ಷ್ತ್ರ್ಮಿಯಾಗಿ ಮನೋರಮ ಜಿ. ಭಟ್, ವಾಲಿಯಾಗಿ ಕಿಶೋರಿ ಡಿ. ನಾಯ್ಕ, ನಾರದನಾಗಿ ಪ್ರೇಮಲತಾ ರಾವ್ ಭಾಗವಹಿಸಿದರು. ಯಕ್ಷಗಾನವನ್ನು ಸವಣೂರು ಸಂಪನ್ಮೂಲ ವ್ಯಕ್ತಿ ಕುಶಾಲಪ್ಪ ಗೌಡ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ದ.ಕ.ಜಿ.ಪಂ ಸದಸ್ಯರಾದ ಪ್ರಮೀಳಾ ಜನಾರ್ದನ ಮಾತನಾಡಿ ಹಬ್ಬಗಳು ಹಳ್ಳಿಯ ಸಂಭ್ರಮದ ಪ್ರತೀಕ. ಹಬ್ಬಗಳನ್ನು ಮನೆಮನೆಗಳಲ್ಲಿ ಆಚರಿಸುವುದರಿಂದ ಸುಖ ಶಾಂತಿ ನೆಮ್ಮದಿ ಲಭಿಸುತ್ತದೆ. ಶಾಲೆಯಲ್ಲಿ ಈ ರೀತಿ ದೀಪಾವಳಿ ಆಚರಿಸುವುದು ಮಕ್ಕಳಿಗೆ ನೀಡುವ ಪ್ರೇರಣೆಯಾಗುತ್ತದೆ.

ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಮುಖ್ಯಗುರುಗಳಾದ ಗಿರಿಶಂಕರ ಸುಲಾಯ ಮಾತನಾಡಿ ದೀಪಾವಳಿ ಹಬ್ಬ ಜನರಿಗೆ ಬೆಳಕಿನತ್ತ ಸಾಗುವ ದಿವ್ಯ ಸಂದೇಶವನ್ನು ಕೊಡುವ ಹಬ್ಬ. ಪ್ರತಿ ಶಾಲೆಯಲ್ಲಿಯೂ ದೀಪಾವಳಿ ಹಬ್ಬ ಆಚರಿಸುವಂತಾಗಬೇಕು ಎಂದರು.

ಯಕ್ಷಗಾನ ತಾಳಮದ್ದಳೆಯನ್ನು ಸಂಯೋಜಿಸಿದ ಭಾಸ್ಕರ ಬಾರ್ಯ ಮಾತನಾಡಿ ಹಬ್ಬಗಳ ಆಚರಣೆಯು ಭಾರತೀಯ ಸಂಸ್ಕೃತಿಯ ಜೀವಾಳ. ಮಕ್ಕಳಿಗೆ ಹಬ್ಬಗಳ ಆಚರಣೆ ಸಂಸ್ಕೃತಿಯ ಪರಿಚಯಕ್ಕೆ ದಾರಿಯಾಗಬಲ್ಲುದು ಎಂದರು.

ಕಾರ್ಯಕ್ರಮದಲ್ಲಿ ಹಿರಿಯರಾದ ವಿಷ್ಣುಭಟ್ ಅಜಿಲೋಡಿ, ಪಿ.ಡಿ. ಗಂಗಾಧರ , ಜನಜಾಗತಿ ವೇದಿಕೆ ಸವಣೂರು ವಲಯ ಅಧ್ಯಕ್ಷ ನ್ಯಾಯವಾದಿ ಮಹೇಶ್ ಕೆ. ಸವಣೂರು, ಪಿ.ಡಿ. ಕಷ್ಣಕುಮಾರ್ , ಮಾಜಿ ಪಂಚಾಯತ್ ಸದಸ್ಯರಾದ ನಾಗೇಶ್ ಓಡಂತರ್‍ಯ, ಶಿಕ್ಷಕರಾದ ಜಗನ್ನಾಥ್ ಅರಿಯಡ್ಕ, ಜಗನ್ನಾಥ್ ಆರೆಲ್ತಡಿ, ಶ್ರೀಕಾಂತ್ ಆರೆಲ್ತಡಿ, ಸುನೀಲ ಜಗನ್ನಾಥ್, ರಾಣಿ ಕಬಕ, ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಉಮಾಶಂಕರ ಗೌಡ, ಹಿರಿಯ ವಿದ್ಯಾರ್ಥಿ ಸಂಘ ಕಾರ್ಯದರ್ಶಿ ಯತೀಶ್ ಕುಮಾರ್ ಪೋಷಕರು, ವಿದ್ಯಾರ್ಥಿಗಳು, ಹಿರಿಯ ವಿದ್ಯಾರ್ಥಿಗಳು, ಊರವರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಈ ಕಾರ್ಯಕ್ರಮಕ್ಕೆ ಜನಜಾಗತಿ ವೇದಿಕೆ ಸವಣೂರು ವಲಯ, ಹಿರಿಯ ವಿದ್ಯಾರ್ಥಿ ಸಂಘ ಪುಣ್ಚಪ್ಪಾಡಿ, ಯುವಚೇತನಾ ಸೇವಾ ಸಂಘ ಪುಣ್ಚಪ್ಪಾಡಿ ಸಹಕಾರ ನೀಡಿದರು. ಧರ್ಮಪ್ರಕಾಶ್ , ಸರಸ್ವತಿ, ಶ್ಯಾಮಲ ಸಿಹಿತಿಂಡಿಯ ವ್ಯವಸ್ಥೆ ಮಾಡಿದರು. ಶಿಕ್ಷಕರಾದ ಶೋಭಾ ಕೆ. ಸ್ವಾಗತಿಸಿ, ಫ್ಲಾವಿಯಾ ವಂದಿಸಿ, ಮುಖ್ಯಗುರು ರಶ್ಮಿತಾ ನರಿಮೊಗರು ಕಾರ್ಯಕ್ರಮ ನಿರ್ವಹಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.