HomePage_Banner
HomePage_Banner
HomePage_Banner

ಪುತ್ತೂರು‍ ಶ್ರೀ ಮಹಮ್ಮಾಯಿ ಸೌಹಾರ್ದ ಸಹಕಾರಿ ನಿಯಮಿತ ಇದರ ಅಧ್ಯಕ್ಷ ಸೇಸು ನಾಯ್ಕ ಬನ್ನೂರು ನಿಧನ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಇಲ್ಲಿನ ಕೊಂಬೆಟ್ಟು ಮರಾಠಿ ಸಂಘದ ಮಾಜಿ ಅಧ್ಯಕ್ಷ ,‍ಶ್ರೀ ಮಹಮ್ಮಾಯಿ ಸೌಹಾರ್ದ ಸಹಕಾರಿ ನಿಯಮಿತ ಇದರ ಅಧ್ಯಕ್ಷ ಸೇಸು ನಾಯ್ಕ ಬನ್ನೂರು(ವ.69)ರವರು ಅಲ್ಪಕಾಲದ ಅಸೌಖ್ಯದಿಂದ ನ.19ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನಾರಾಗಿದ್ದಾರೆ. ಸುಮಾರು 39 ವರ್ಷಗಳ ಕಾಲ ಸಿಂಡಿಕೇಟ್‌ ಬ್ಯಾಂಕ್‌ ಪುತ್ತೂರು ಹಾಗೂ ಉಪ್ಪಿನಂಗಡಿಯಲ್ಲಿ ಸೇವೆ ಸಲ್ಲಿಸಿ ತದನಂತರ ಮಂಗಳೂರಿನ ಪ್ರಾದೇಶಿಕ ಕಚೇರಿಯಲ್ಲಿ ಸೀನಿಯರ್‌ ಮ್ಯಾನೇಜರ್‌ ಆಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು.  ಪ್ರಸ್ತುತ ಪುತ್ತೂರು ತಾಲೂಕು ಪಂಚಾಯತ್‌ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಮಹಮ್ಮಾಯಿ ಸೌಹಾರ್ದ ಸಹಕಾರಿ ನಿಯಮಿತದ  ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು.

ಮೃತರು ಪತ್ನಿ ರತ್ನಾ ಸೇಸು ನಾಯ್ಕ, ಪುತ್ರ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಪಣಜಿಯ ಚೀಫ್‌ ಮ್ಯಾನೇಜರ್‌ ರಜನಿಕಾಂತ್, ಪುತ್ರಿ ರೇಖಾ ದೀಪಕ್‌ ಮಂಗಳೂರು, ಅಳಿಯ ಕೆಎಸ್‌ ಆರ್‌ ಟಿಸಿ ಡಿವಿಜನಲ್ ಮ್ಯಾನೇಜರ್‌ ಆಗಿರುವ ದೀಪಕ್‌, ಮೊಮ್ಮಕ್ಕಳು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.

ನ.20ರಂದು ಅಂತ್ಯಕ್ರಿಯೆ:
ಮೃತರ ಅಂತ್ಯಕ್ರಿಯೆಯು ಪುತ್ತೂರಿನ ಹಿಂದೂ ರುದ್ರಭೂಮಿಯಲ್ಲಿ ನ.20ರಂದು ಬೆಳಗ್ಗೆ ಜರಗಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.