HomePage_Banner
HomePage_Banner
HomePage_Banner

ನೆಲ್ಲಿಗುಂಡಿಯಲ್ಲಿ ರಸ್ತೆಗಾಗಿ ಸಾರ್ವಜನಿಕರ ಹೋರಾಟ ಸ್ಥಳಕ್ಕೆ ಆಗಮಿಸಿದ ಪೌರಾಯುಕ್ತರು, ಸರ್ವೆ ಇಲಾಧಿಕಾರಿಗಳು

Puttur_Advt_NewsUnder_1
Puttur_Advt_NewsUnder_1
  • ಮುಂದಿನ ವಾರ ಸ್ಥಳ ಸರ್ವೆ ಕಾರ್ಯ – ರೂಪಾ ಶೆಟ್ಟಿ

ಪುತ್ತೂರು: ನಗರಸಭೆ ವ್ಯಾಪ್ತಿಯ ನೆಲ್ಲಿಗುಂಡಿಯಲ್ಲಿ ಸಾರ್ವಜನಿಕ ರಸ್ತೆ ವಂಚಿತಗೊಂಡ ಹಲವಾರು ಮಂದಿ ನಗರಸಭೆಗೆ ದೂರು ನೀಡಿದ ಹಿನ್ನಲೆಯಲ್ಲಿ ನ.೧೯ರಂದು ನಗರಸಭೆ ಪೌರಾಯುಕ್ತೆ ರೂಪಾ ಶೆಟ್ಟಿ, ಸರ್ವೆ ಇಲಾಖಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ನೆಲ್ಲಿಗುಂಡಿಯ ಕಾಲೋನಿಗೆ ತೆರಳಲು ಇರುವ ಸರಕಾರಿ ರಸ್ತೆಯನ್ನು ಅತಿಕ್ರಮಣಗೊಳಿಸಿದ್ದಾರೆ. ನಮಗೆ ಮೂಲಭೂತ ಸೌಕರ್ಯ ಒದಗಿಸಿ ಎಂದು ಕಾಲೋನಿ ನಿವಾಸಿಗಳು ನಗರಸಭೆಗೆ ದೂರು ನೀಡಿದ ಬೆನ್ನಲ್ಲೇ ನಗರಸಭೆ ಪೌರಾಯುಕ್ತೆ ರೂಪಾ ಶೆಟ್ಟಿ, ಅಭಿಯಂತರರು ಮತ್ತು ಸರ್ವೆ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಅಕ್ಕಪಕ್ಕದವರು ರಸ್ತೆಗಾಗಿ ಜಮೀನು ನೀಡುವುದಿಲ್ಲ ಎಂದು ಸ್ಥಳೀಯರು ಆಗ್ರಹಿಸಿದರು. ಪೌರಾಯುಕ್ತೆ ರೂಪಾ ಶೆಟ್ಟಿಯವರು ಅಕ್ಕಪಕ್ಕದದ ಜಮೀನು ಮಾಲಕರೊಂದಿಗೆ ಮಾತನಾಡಿ ದಾಖಲೆ ಪತ್ರ ಪರಿಶೀಲಿಸಿದರು. ಬಳಿಕ ಮುಂದಿನ ವಾರ ಜಮೀನು ಸರ್ವೆ ಕಾರ್ಯ ನಡೆಸಲಾಗುವುದು. ಸರಕಾರಿ ಜಮೀನು ಖಾಸಗಿ ಸ್ಥಳದಲ್ಲಿ ಇದ್ದರೆ ಅದನ್ನು ತೆರವು ಮಾಡಿ ರಸ್ತೆ ಮಾಡಿಸಿಕೊಡುವ ಭರವಸೆ ವ್ಯಕ್ತಪಡಿಸುವ ಮೂಲಕ ಗೊಂದಲಕ್ಕೆ ತೆರೆ ಎಳೆದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.