HomePage_Banner
HomePage_Banner
HomePage_Banner

ಕಬಕದಲ್ಲಿ ಮಾಜಿ ಪ್ರಧಾನಿ ದಿ.ಇಂದಿರಾಗಾಂಧಿಯವರ ಜನ್ಮದಿನಾಚರಣೆ

Puttur_Advt_NewsUnder_1
Puttur_Advt_NewsUnder_1
  • ಇಂದಿರಾಗಾಂಧಿಯವರ ಭೂಸುಧಾರಣೆ ಮಸೂದೆಯಿಂದ ಇಂದು ದೇಶದಲ್ಲಿ ಜನತೆ ಸ್ವತಂತ್ರರಾಗಿದ್ದಾರೆ: ರಮಾನಾಥ ರೈ

ಪುತ್ತೂರು: ದೇಶದ ಪ್ರಥಮ ಮಹಿಳಾ ಪ್ರಧಾನಿ ಇಂದಿರಾಗಾಂಧಿಯವರ ಭೂಸುಧಾರಣಾ ಕಾಯ್ದೆಯ ಫಲವಾಗಿ ಇಂದು ಕೋಟ್ಯಂತರ ಜನ ಸ್ವತಂತ್ರರಾಗಿದ್ದಾರೆ. ಸ್ವಂತ ಹಿಡುವಳಿದಾರರಾಗಿದ್ದಾರೆ ಎಂದು ಮಾಜಿ ಸಚಿವ ಬೆಳ್ಳಿಪ್ಪಾಡಿ ರಮಾನಾಥ ರೈ ಯವರು ಹೇಳಿದರು.

ಕಬಕ ಜಂಕ್ಷನ್ ನಲ್ಲಿ ರೈತ ಹಿತರಕ್ಷಣಾ ವೇದಿಕೆ ಆಶ್ರಯದಲ್ಲಿ ನಡೆದ ಇಂದಿರಾಗಾಂಧಿ ಜನ್ಮದಿನದ ಅಂಗವಾಗಿ ನಡೆದ ವಿಚಾರ ವಿನಿಮಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ನಾನು ಸಣ್ಣವನಾಗಿದ್ದಾಗ ಅಧಿಕಾರ ಶ್ರೀಮಂತರ ಕೇಂದ್ರೀಕೃತವಾಗಿತ್ತು. ಇಂದಿರಾಗಾಂಧಿಯವ ದಿಟ್ಟ ನಿರ್ಧಾರದಿಂದಾಗಿ ಈಗ ಅಧಿಕಾರ ವಿಕೇಂದ್ರೀಕರಣವಾಗಿದೆ ಎಂದು ಅಭಿಪ್ರಾಯಪಟ್ಟರು. ಯುವ ಜನತೆ ನಮ್ಮ ಹಿರಿಯರಿಗೆ ಜಮೀನು ಹೇಗೆ ಬಂದಿದೆ ಎಂಬ ಇತಿಹಾಸ ತಿಳಿದುಕೊಳ್ಳಬೇಕು ಎಂದು ರಮಾನಾಥ ರೈ ಹೇಳಿದರು. ಇಂದಿರಾ ಗಾಂಧಿಯವರು ಭೂ ಮಸೂದೆ ಎಂಬ ಕಾನೂನು ಜಾರಿಗೆ ತರದೇ ಇರುತ್ತಿದ್ದಲ್ಲಿ ಇಂದಿಗೂ ದೇಶದ ಬಹುಪಾಲು ಭೂಮಿ ಉಳ್ಳವರ ಪಾಲಾಗುತ್ತಿತ್ತು, ಜನ ಇಂದಿಗೂ ಜೀತದಾಳುಗಳಾಗಿ ಬದುಕಬೇಕಿತ್ತು. ಇಂದಿನ ಯುವ ಜನತೆಗೆ ಇದು ಅರ್ಥವಾಗಲಿಲ್ಲ, ನಮ್ಮ ಕುಟುಂಬಕ್ಕೆ ಭೂಮಿ ಹೇಗೆ ಬಂತು ಎಂಬುದನ್ನು ಒಮ್ಮೆ ಅವಲೋಕಿಸಿಕೊಳ್ಳಬೇಕು. ದೇಶದ ಪ್ರತೀಯೊಬ್ಬ ನಾಗಕರಿನೂ ಇಂದಿರಾಗಾಂಧಿಯವನ್ನು ಸ್ಮರಣೆ ಮಾಡುತ್ತಲೇ ಇರಬೇಕಾಗಿದೆ ಎಂದು ಹೇಳಿದರು.

ಭೂಮಸೂದೆಯ ಫಲಾನುಭವಿ ಹಿರಿಯರಾದ ಬಪ್ಪಳಿಗೆ ಕಿಟ್ಟಣ್ಣ ಗೌಡರು ಮಾತನಾಡಿ ಇಂದಿರಾಗಾಂಧಿಯ ದೊಡ್ಡ ಮನಸಿನ ಫಲವಾಗಿ ನಾವು ಹಿಡುವಳಿದಾರರಾಗಿದ್ದೇವೆ. ನಾವೆಂದಿಗೂ, ಸಾಯುವವರೆಗೂ ಅವರನ್ನು ಮರೆಯಲು ಸಾಧ್ಯವಿಲ್ಲ. ಮರೆತರೆ ನಮಗೆ ಶ್ರೇಯಸ್ಸಾಗಲಿಕ್ಕಿಲ್ಲ ಎಂದು ಹೇಳಿದರು.

ಪ್ರಗತಿಪರ ಕೃಷಿಕ ರಾಜೇಶ್ ಬಾಳೆಕಲ್ಲು ಮಾತನಾಡಿ ನಾವು ಇಂದಿರಾಗಾಂಧಿಯವರು ಜಾರಿಗೊಳಿಸಿರುವ ಕಾನೂನಿಂದಾಗಿ ಒಳ್ಳೆಯ ಸಾಧನೆ ಮಾಡಲು ಸಾಧ್ಯವಾಗಿದೆ. ಅವರ ಋಣ ನಮ್ಮಮೇಲಿದೆ ಎಂದು ಹೇಳಿದರು. ಜಿಲ್ಲಾ ಪಂಚಾಯತ್ ಸದಸ್ಯ ಎಂ ಎಸ್ ಮಹಮ್ಮದ್ ,ಕಿಸಾನ್ ಘಟಕದ ಜಿಲ್ಲಾ ಅಧ್ಯಕ್ಷ ಮೊಹನ್ ಗೌಡ ಕಲ್ಮಂಜ ಸಂದರ್ಭೋಚಿತವಾಗಿ ಮಾತನಾಡಿದರು.

ಜನತೆಗೆ ಸ್ವಾಭಿಮಾನದ ಬದುಕು ಕೊಟ್ಟಿದ್ದ ಇಂದಿರಾಗಾಂಧಿ – ಹೇಮನಾಥ ಶೆಟ್ಟಿ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾವು ಹೇಮನಾಥ್ ಶೆಟ್ಟಿ ಯವರು ಕರಾವಳಿ ಜಿಲ್ಲೆಯ ಜನ ಸ್ವಾಭಿಮಾನದಿಂದ ಬದುಕುಕಟ್ಟಿಕೊಂಡಿದ್ದಾರೆ ಅದು ಇಂದಿರಾಗಾಂಧಿಯವರ ಭೂಮಸೂದೆ ಕಾಯ್ದೆಯ ಫಲ ಎಂದರು. ಬೆಳ್ಳಿಪ್ಪಾಡಿ ರಮಾನಾಥ ರೈ ಯಂತವರು ಭೂಹಿಡುವಳಿದಾರರಾಗಿದ್ದರೂ, ಕಾಯ್ದೆ ಜಾರಿಗೆ ಬಂದಾಗ ಅದರ ಪರ ನಿಂತು ಮನುಷ್ಯತ್ವ,ಸಾಮಾಜಿಕ ನ್ಯಾಯದಪರ ನಿಂತು ಆದರ್ಶತೆ ಮೆರೆದರು. ಕಿಟ್ಟಣ್ಣಗೌಡರು ಅಂದಿನಿಂದ ಇಂದಿನವರೆಗೆ ಇಂದಿರಾಗಾಂಧಿಯವರ ಕಾಯ್ದೆಯಿಂದಾಗಿ ಗೇಣಿದಾರನಾಗಿದ್ದ ನಾನು ಹಿಡುವಳಿದಾರನಾದೆ ಎಂದು ಹೇಳುತ್ತಿರುವುದು ಇಂದಿರಾಗಾಂಧಿಯವರ ನಿರ್ಧಾರಕ್ಕೆ ಕೃತಘ್ನರಾಗಿರುವುದಕ್ಕೆ ಅವರನ್ನು ಶ್ಲಾಘಿಸುತ್ತೇನೆ ಎಂದರು.ನಾವು ಇಂದು ಕನಿಷ್ಠ ಭೂಮಿಯನ್ನಾದರೂ ಹೊಂದಿ ಸ್ವಾಬಿಮಾನದ ಜೀವನ ನಡೆಸುತ್ತಿದ್ದರೆ ಅದಕ್ಕೆ ಇಂದಿರಾ ಗಾಂಧಿ ಕಾರಣರಾಗಿದ್ದಾರೆ. ಅಂದು ಅವರು ಮಾಡಿದ ದಿಟ್ಟ ಕಾನೂನು ದೇಶದ ಕೋಟ್ಯಂತರ ಜನತೆಯ ಕಣ್ಣೀರೊರೆಸಿದೆ ಅದರ ಫಲ ಇಂದಿಗೂ ಅವರ ಕುಟುಂಬ ಅನುಭವಿಸುತ್ತಿದೆ ಆದರೆ ಅದೇ ಕುಟುಂಬದ ತಲೆಮಾರು ಇಂದಿರಾ ಗಾಂಧಿಯನ್ನು ಮರೆತಿದೆ ಎಂದು ಹೇಳಿದರು.

ಜಿಲ್ಲಾ ಪಂಚಾಯತ್ ಸದಸ್ಯೆ ಅನಿತಾ ಹೇಮನಾಥ್ ಶೆಟ್ಟಿ ಗ್ರಾಮ ಪಂಚಾಯತ್ ಸದಸ್ಯ ಸಾಬಾ ಕಬಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರೈತ ಜಾಗೃತಿ ಕಾರ್ಯಕ್ರಮಕ್ಕೆ ಸಹಕರಿಸಿದ ಜಗನ್ಮೋಹನ್ ರೈ ಕೆದಂಬಾಡಿ,ಉದಯಕುಮಾರ್ ರೈ ಸೂರಂಬೈಲು, ಅಬೂಬಕ್ಕರ್ ಶಾಫಿ ಕಂಚಲ್ ಕುಂಜ ರಿಗೆ ರಮಾನಾಥ ರೈವರು ಸ್ಮರಣಿಕೆ ನೀಡಿ ಗೌರವಿಸಿದರು. ಪಿ ಕೆ ಅಣ್ಣು, ಅಣ್ಣು,ನಾರಾಯಣ ನಾಯ್ಕ ಅಪಿನಿಮೂಲೆ,ಮಹಾಬಲ ಜೈ ಹಿಂದ್ ರಿಕ್ಷಾಚಾಲಕ ಮಾಲಕರ ಸಂಘದ ಅಧ್ಯಕ್ಷ, ಕೇಶವ ಕೊಡಿಪ್ಪಾಡಿ,ಮಹಾಲಿಂಗ ನಾಯ್ಕ,ಕೆ ಸಿ ಅಶೋಕ್ ಶೆಟ್ಟಿ, ರವಿಪ್ರಸಾದ್ ಶೆಟ್ಟಿ ಅಥಿತಿಗಳಿಗೆ ಹೂ ನೀಡಿ ಸ್ವಾಗತಿಸಿದರು.

ಪುತ್ತೂರು ಪುರಸಭೆ ಮಾಜಿ ಉಪಾಧ್ಯಕ್ಷ ಲ್ಯಾನ್ಸಿ ಮಸ್ಕರೇನಸ್, ಮಾಜಿ ಸದಸ್ಯ ಅನ್ವರ್ ಖಾಸಿಂ ಕೆಪಿಸಿಸಿ ಸಾಮಾಜಿಕ ಜಾಲತಾಣ ಕಾರ್ಯದರ್ಶಿ ಕೆಸಿ ಅಶೋಕ್ ಶೆಟ್ಟಿ,ಇಸಾಕ್ ಸಾಲ್ಮರ, ಕಾರ್ಮಿಕ ಘಟಕದ ರಾಜ್ಯ ಕಾರ್ಯದರ್ಶಿ ಹನೀಫ್ ಬಗ್ಗು ಮೂಲೆ,ಜಯಪ್ರಕಾಶ್ ರೈ ನೂಜಿಬೈಲು, ಬಾಬು ರೈ ಕೋಟೆ,ಶಾಹುಲ್ ಹಮೀದ್ ಜಾಲಗದ್ದೆ,ಯುವಕ ಕಾಂಗ್ರೆಸ್ ನಾಯಕರಾದ ಬಶೀರ್ ಪರ್ಲಡ್ಕ, ಹನೀಫ್ ಪುಣ್ಚತ್ತಾರ್, ರೆಹಮಾನ್ ಸಂಪ್ಯ, ಕಮಲ್ ಕಬಕ,ಚಂದ್ರಶೇಖರ ಕಬಕ, ಮೊಯಿದು ಕುಂಞು ಕಬಕ, ಜೈಹಿಂದ್ ರಿಕ್ಷಾ ಚಾಲಕ ಮಾಲಕ ಸಮಿತಿ ಮತ್ತು ಫ್ರೆಂಡ್ಸ್ ಕಬಕ ರಿಕ್ಷಾ ಚಾಲಕ ಮಾಲಕರು ಸಹಕರಿಸಿದರು. ಶ್ರೀ ಪ್ರಸಾದ್ ಯಾದವ್ ಪಾಣಾಜೆ ಕಾರ್ಯಕ್ರಮ ನಿರೂಪಿಸಿದರು. ನವೀನ್ ರೈ ಚೆಲ್ಯಡ್ಕ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಮೂಸೆ ಕಬಕ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.