HomePage_Banner
HomePage_Banner
HomePage_Banner

ನೆಕ್ಕಿಲಾಡಿಯಲ್ಲಿ ಸಂತೆ ಮೇಳ.!! – ಕಡಿಮೆ ದರದಲ್ಲಿ ತರಕಾರಿ, ಗ್ರಾಹಕರ ಮುಗಿಲು..!!!

Puttur_Advt_NewsUnder_1
Puttur_Advt_NewsUnder_1
  • ಬೀನ್ಸ್, ಟೊಮೆಟೋ-20, ಸೌತೆಗೆ-15.
  • ಯಶಸ್ವಿ ಮೂರನೇ ವಾರದಲ್ಲಿ ಹೆಚ್ಚಿದ ವ್ಯಾಪಾರ, ವ್ಯವಹಾರ.
  • ಲಾಕ್‌ಡೌನ್ ಬಳಿಕ ಸಂತೆಯಿಂದ ದೂರ ಇದ್ದ ಗ್ರಾಹಕರನ್ನು ಸೆಳೆಯಲು ಯೋಜನೆ-ರಶೀದ್

ಉಪ್ಪಿನಂಗಡಿ: ಸಾಲ ಮೇಳ, ಉದ್ಯೋಗ ಮೇಳವನ್ನು ನೋಡಿದ್ದೇವೆ. ಇದು ಸಂತೆ ಮೇಳ. ೩೪-ನೆಕ್ಕಿಲಾಡಿ ಸಂತೆಕಟ್ಟೆಯಲ್ಲಿ ಗುರುವಾರ ಸಂತೆ ಮೇಳ ನಡೆಯಿತು. ಸಂತೆ  ವ್ಯಾಪಾರದಿಂದ ದೂರ ಇದ್ದ ಗ್ರಾಹಕರು ಮತ್ತೆ ಸಂತೆಯತ್ತ ಮುಖಮಾಡಿದ್ದು, ಇದೀಗ ಇಲ್ಲಿನ ಸಂತೆಯಲ್ಲಿ ಗ್ರಾಹಕರು ತರಕಾರಿ, ಕಾಯಿಪಲ್ಯ ಖರೀದಿಗೆ ಮುಗಿ ಬೀಳುವ ದೃಶ್ಯ ಕಾಣಲಾರಂಭಿಸಿದೆ.

ಸಂತೆ ಮೇಳದಲ್ಲಿ ತರಕಾರಿಗಳನ್ನು ಕಡಿಮೆ ದರದಲ್ಲಿ ಮಾರಾಟ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದ್ದು, ಸೂಪರ್ ಮಾರ್ಕೇಟ್, ದಿನಸಿ ಅಂಗಡಿಯಲ್ಲಿ ತರಕಾರಿ ಖರೀದಿ ಮಾಡುತ್ತಿದ್ದ ಉಪ್ಪಿನಂಗಡಿ ಪರಿಸರದ ಮಂದಿ ವಾರಕ್ಕೊಮ್ಮೆ ಸಂತೆಗೆ ಬಂದು ತರಕಾರಿ ಖರೀದಿ ಮಾಡುವ ಅಭ್ಯಾಸ ಮಾಡಿಕೊಂಡಿದ್ದು, ಕಳೆದ ೩ ವಾರದಿಂದ ಇಲ್ಲಿನ ಸಂತೆಯಲ್ಲಿ ತರಕಾರಿ  ವ್ಯಾಪಾರ ಭರಪೂರವಾಗಿ ನಡೆಯಲಾರಂಭಿಸಿದೆ.

ಬೀನ್ಸ್, ಟೊಮೆಟೋ-20, ಸೌತೆಗೆ-15:
ಸಾಮಾನ್ಯವಾಗಿ ಪೇಟೆಯ ಅಂಗಡಿ, ಸೂಪರ್ ಮಾರ್ಕೇಟ್‌ಗಳಲ್ಲಿ ಬೀನ್ಸ್‌ಗೆ 40 ಟೊಮೆಟೋ 35 ಇದೆ, ಆದರೆ ಗುರುವಾರ ಉಪ್ಪಿನಂಗಡಿಯಲ್ಲಿ ನಡೆದ ಸಂತೆ ಮೇಳದಲ್ಲಿ ಬೀನ್ಸ್ ಕೆ.ಜಿ.ಗೆ 20 ರೂಪಾಯಿ, ಟೊಮೆಟೋ-20, ಸೌತೆಗೆ-15 ರೂಪಾಯಿ ನಿಗದಿ ಆಗಿತ್ತು. 1 ಮೀನು ಮಾರುಕಟ್ಟೆಯಲ್ಲಿ ಕೆ.ಜಿ.ಗೆ 100 ಇದ್ದ ಬಂಗುಡೆ ಮೀನು ಸಂತೆ ಮೇಳದಲ್ಲಿ ೧೦೦ ರೂಪಾಯಿಗೆ ಒಂದೂವರೆ ಕೆ.ಜಿ. ಮೀನು ದರ ನಿಗದಿಯಾಗಿತ್ತು. ಒಟ್ಟಿನಲ್ಲಿ ಸಂತೆ ಮೇಳೆ ದರ ಕಡಿತದಿಂದಾಗಿ ಗ್ರಾಹಕರನ್ನು ಆಕರ್ಷಿಸುತ್ತಿದ್ದುದು ಕಂಡು ಬಂತು.

ಗ್ರಾಹಕರನ್ನು ಸಂತೆಯತ್ತ ಸೆಳೆಯಲು ಯೋಜನೆ-ರಶೀದ್
ಸಾಮಾನ್ಯವಾಗಿ ಉಪ್ಪಿನಂಗಡಿ ಆಸುಪಾಸಿನ ಮಂದಿ ಗುರುವಾರ ನೆಕ್ಕಿಲಾಡಿಯಲ್ಲಿ ನಡೆಯುವ ವಾರದ ಸಂತೆಗೆ ಬಂದು ತರಕಾರಿ, ಕಾಯಿಪಲ್ಯ ಖರೀದಿ ಮಾಡುತ್ತಿದ್ದರು. ಆದರೆ  ಕೊರೊನಾ ಹರಡುವಿಕೆ ತಡೆಯುವ ಲಾಕ್‌ಡೌನ್ ಬಳಿಕ ಜನರು ಸಂತೆ ಬರುವುದನ್ನೇ ಬಿಟ್ಟಿದ್ದರು. ಸಂತೆ ವ್ಯಾಪಾರ ತೀರಾ ಕಡಿಮೆಯಾಗಿ ತರಕಾರಿ ತಂದ ರೈತರು ಕಂಗಾಲಾಗಿದ್ದರು. ಈ ವ್ಯಾಪಾರವನ್ನು ಮರು ಸೃಷ್ಠಿಸುವ ಸಲುವಾಗಿ ರೈತರು ಮತ್ತು ತರಕಾರಿ ವ್ಯಾಪಾರಿಗಳೊಂದಿಗೆ ಮಾತುಕತೆ ನಡೆಸಿ, ಯಾರಿಗೂ ನಷ್ಟ ಆಗದ ರೀತಿಯಲ್ಲಿ ಕಡಿಮೆ ಲಾಭಾಂಶವನ್ನು ಇಟ್ಟುಕೊಂಡು ತರಕಾರಿ ಮಾರಾಟ ಮಾಡುವ ಬಗ್ಗೆ ತಿಳಿಸಲಾಯಿತು. ಅದಕ್ಕೆ ಎಲ್ಲರೂ ಸಮ್ಮತಿಸಿದ್ದು, ಅದರಂತೆ ಸಂತೆ ಮೇಳವನ್ನು ಆಯೋಜಿಸಲಾಗಿದೆ ಎಂದು 34-ನೆಕ್ಕಿಲಾಡಿ ಸಂತೆ ಮಾರುಕಟ್ಟೆಯ ಏಲಂ ಬಿಡ್‌ದಾರ ರಶೀದ್ ಉಪ್ಪಿನಂಗಡಿ ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.