HomePage_Banner
HomePage_Banner
HomePage_Banner

ಸಂತ ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರವೀಣ್ ಪ್ರಕಾಶ್ ಡಿಸೋಜಾರವರಿಗೆ ಡಾಕ್ಟರೇಟ್ ಪದವಿ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಯಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಪ್ರವೀಣ್ ಪ್ರಕಾಶ್ ಡಿಸೋಜಾರವರಿಗೆ ಡಾಕ್ಟರೇಟ್ ಪದವಿ ಲಭಿಸಿದೆ.

ಇವರು ಮಂಗಳೂರು ವಿಶ್ವವಿದ್ಯಾನಿಲಯದ ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ। ಡಾ। ಕೆ. ಬಿ. ವಿಜಯ ಕುಮಾರ್ ಇವರ ಮಾರ್ಗದರ್ಶನದಲ್ಲಿ “Heavy Quarkonium Spectra and its Decays in the Framework of Quark Models” ಎಂಬ ವಿಷಯದ ಕುರಿತು ತಮ್ಮ ಡಾಕ್ಟರೇಟ್ (Ph.D.) ಪದವಿಗಾಗಿ ಮಹಾ ಪ್ರಬಂಧವನ್ನು ಮಂಡಿಸಿರುವರು. ಸೈದ್ಧಾಂತಿಕ ಕಣ ಭೌತಶಾಸ್ತ್ರ ಕ್ಷೇತ್ರದಲ್ಲಿ ಇವರ ಸಂಶೋಧನೆಗಳು ಅನೇಕ ರಾಷ್ಟೀಯ, ಅಂತರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿರುತ್ತದೆ. ಸಂಶೋಧನೆಗೆ ಪೂರಕವಾಗಿ ಸಾಹಾ ಇನ್ಸ್ಟಿಟ್ಯೂಟ್ ಆಫ್ ನ್ಯೂಕ್ಲಿಯಾರ್ ಫಿಸಿಕ್ಸ್, ಕೋಲ್ಕತ್ತಾ; ಥಾಪರ್ ಯೂನಿವರ್ಸಿಟಿ, ಪಟಿಯಾಲಾ; ಭಾಭಾ ಅಟಾಮಿಕ್ ರಿಸರ್ಚ್ ಸೆಂಟರ್, ಮುಂಬೈ; ಲಕ್ನೋ ಯೂನಿವರ್ಸಿಟಿ, ಲಕ್ನೋ; ಇವುಗಳಲ್ಲಿ ನಡೆದ ರಾಷ್ಟ್ರೀಯ – ಅಂತರಾಷ್ಟ್ರೀಯ ನ್ಯೂಕ್ಲಿಯಾರ್ ಫಿಸಿಕ್ಸ್ ಸಮ್ಮೇಳನಗಳಲ್ಲಿ ಅನೇಕ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿರುತ್ತಾರೆ.

ಕಾಸರಗೋಡಿನ ಸರಕಾರಿ ಪದವಿ ಕಾಲೇಜಿನಲ್ಲಿ ಬಿ.ಎಸ್ಸಿ. ಪದವಿ, ಎಸ್.ಡಿ.ಎಮ್ ಕಾಲೇಜು ಉಜಿರೆಯಲ್ಲಿ ಎಂ.ಎಸ್ಸಿ ಪದವಿಯನ್ನು ಭೌತಶಾಸ್ತ್ರ ವಿಷಯದಲ್ಲಿ ಉನ್ನತ ಶ್ರೇಣಿಯೊಂದಿಗೆ ಪೂರೈಸಿರುತ್ತಾರೆ. ತರುವಾಯ 2012ರಿಂದ ಸಂತ ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ಭೌತಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇರಿ ಕಾಲೇಜಿನ ವಿವಿಧ ಮಹತ್ವದ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ. ಪ್ರವೀಣ್ ಡಿಸೋಜಾರವರು ಕಾಸರಗೋಡು ಜಿಲ್ಲೆಯ ನಾರಂಪಾಡಿ ಎಂಬಲ್ಲಿನ ಪಾತೇರಿಯ ಶ್ರೀ ಇಮ್ಮಾನುಯೆಲ್ ಡಿಸೋಜಾ ಹಾಗೂ ಶ್ರೀಮತಿ ಸಿಸಿಲಿಯಾ ಕ್ರಾಸ್ಟಾ ದಂಪತಿಗಳ ಪುತ್ರರಾಗಿದ್ದಾರೆ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.