HomePage_Banner
HomePage_Banner
HomePage_Banner

‘ಉದ್ಯೋಗ ನೈಪುಣ್ಯತಾ ಶಿಬಿರಗಳ ಮೂಲಕ ಆತ್ಮ ನಿರ್ಭರ ಭಾರತ ಕನಸು ಅರ್ಥಪೂರ್ಣ’-ಮೀನಾಕ್ಷಿ ಶಾಂತಿಗೋಡು

Puttur_Advt_NewsUnder_1
Puttur_Advt_NewsUnder_1
  • ಪುಣಚದಲ್ಲಿ ಒಂದು ವಾರದ ಉದ್ಯೋಗ ನೈಪುಣ್ಯತಾ ಶಿಬಿರ ಸಮಾರೋಪ

ಪುಣಚ: ಉದ್ಯೋಗ ನೈಪುಣ್ಯತಾ ಶಿಬಿರಗಳ ಮೂಲಕ ಆತ್ಮ ನಿರ್ಭರ ಭಾರತ ಕನಸು ಅರ್ಥಪೂರ್ಣವಾಗಿ ಅನುಷ್ಠಾನಗೊಳ್ಳುತ್ತದೆ. ಮುಖ್ಯವಾಗಿ ಗ್ರಾಮೀಣ ಪ್ರದೇಶದ ವಿದ್ಯಾವಂತರು, ಮಹಿಳೆಯರು ಇಂತಹ ತರಬೇತಗಳಿಂದ ಸ್ವಾವಲಂಬನೆಯೊಂದಿಗೆ ಸಶಕ್ತರಾಗಿ ಬೆಳೆಯಬಹುದು ಎಂದು ದ.ಕ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ತಿಳಿಸಿದರು.

ಅವರು ಪುಣಚ ದೇವಿನಗರ ಶ್ರೀದೇವಿ ವಿದ್ಯಾಕೇಂದ್ರದಲ್ಲಿ ಗ್ರಾಮ ವಿಕಾಸ ಸಮಿತಿ, ಮಂಗಳೂರು ವಿಭಾಗ, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘ, ಸಹಕಾರ ಭಾರತಿ ದ.ಕ ಜಿಲ್ಲೆ ವತಿಯಿಂದ ಪುತ್ತೂರು ವಿವೇಕಾನಂದ ಪಾಲಿಟೆಕ್ನಿಕ್ ಇವರ ಸಂಯೋಜನೆಯಲ್ಲಿ ನ.9 ರಿಂದ 14ರ ತನಕ ನಡೆದ ಒಂದು ವಾರದ ಉದ್ಯೋಗ ನೈಪುಣ್ಯ ಶಿಬಿರ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ತರಬೇತಿ ಶಿಬಿರ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ ರಾಷ್ಟ್ರ ಸೇವಿಕಾ ಸಮಿತಿಯ ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಸದಸ್ಯೆ ಡಾ. ಕಮಲಾ ಪ್ರಭಾಕರ ಭಟ್ ಕಲ್ಲಡ್ಕ ಮಾತನಾಡಿ ಸ್ವಾವಲಂಬನೆಯೊಂದಿಗೆ ಸಾಮಾಜಿಕ ಕಳಕಳಿ ಪ್ರತಿಯೊಬ್ಬರ ಕರ್ತವ್ಯವಾಗಿದೆ. ದೇಶೀಯ ಸಂಸ್ಕೃತಿಗೆ ಪೂರಕವಾಗಿ ನಾವು ದೇಶ ನಿರ್ಮಾಣದ ಚಿಂತನೆಯನ್ನು ಮೈಗೂಡಿಸಿಕೊಳ್ಳಬೇಕು. ಪರವೂರುಗಳಿಗೆ ಉದ್ಯೋಗ ಅರಸಿಕೊಂಡು ಹೋಗುವ ಯುವಜನಾಂಗ ಇಂತಹ ಶಿಬಿರಗಳನ್ನು ಸದ್ವಿನಿಯೋಗಿಸಿಕೊಳ್ಳಬೇಕು. ಯುವಕಯುವತಿಯರಿಗೆ ಇಂತಹ ಶಿಬಿರಗಳು ದಾರಿದೀಪವಾಗುತ್ತವೆ ಹೊರತು ದಾರಿತಪ್ಪಿಸುದಿಲ್ಲ ಎಂದರು.

ಸಮಾರೋಪ ಭಾಷಣ ಮಾಡಿದ ರಾ. ಸ್ವ. ಸೇ. ಸಂಘದ ಮಂಗಳೂರು ಸಹ ಕಾರ್ಯವಾಹ ಜಗದೀಶ್ ಕಲ್ಲಡ್ಕ ಜೀವನ ಕೆರೆಯ ನೀರಂತಿರದೇ ಜೀವನದಿಯಂತಿರಬೇಕು. ಈಗಾಗಲೇ 27 ಶಿಬಿರಗಳಲ್ಲಿ ೨೬ ವಿಷಯಗಳಲ್ಲಿ ೮೦೦ ಕ್ಕಿತಂಲೂ ಹೆಚ್ಚು ವಿಷಯ ತಜ್ಞರು ತರಬೇತಿ ನೀಡಿದ್ದಾರೆ. ನಾವು ಬೆಳೆಯುವುದರೊಂದಿಗೆ ಇತರರನ್ನು ಬೆಳೆಸಬೇಕೆಂದರು.

ಈ ತರಬೇತಿಯಲ್ಲಿ ಯಂತ್ರೋಪಕರಣಗಳ ದುರಸ್ತಿ, ಹೈನುಗಾರಿಕೆ, ಮೀನುಗಾರಿಕೆ, ಕೋಳಿ ಸಾಕಣೆ, ಪ್ಲಂಬಿಂಗ್ ಮತ್ತು ಇಲೆಕ್ಟ್ರೀಷಿಯನ್, ಫುಡ್ ಟೆಕ್ನಾಲಜಿ, ಫ್ಯಾಷನ್ ಡಿಸೈನ್ ತರಬೇತಿ, ಮೊಬೈಲ್ ರಿಪೇರಿ, ದ್ವಿಚಕ್ರ ವಾಹನಗಳ ದುರಸ್ತಿ, ಬ್ಯುಟೀಷೀಯನ್, ಗಿಡಗಳಿಗೆ ಕಸಿಕಟ್ಟುವುದು, ಜೇನು ಸಾಕಾಣಿಕೆ, ರಬ್ಬರ್ ಟ್ಯಾಪಿಂಗ್ ತರಬೇತಿಗಳಲ್ಲಿ ೧೬೦ ಮಂದಿ ಶಿಬಿರಾರ್ಥಿಗಳು ಭಾಗವಹಿಸಿದ್ದರು.

ಗ್ರಾಮ ವಿಕಾಸ ಸಮಿತಿ, ಮಂಗಳೂರು ವಿಭಾಗ, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘ, ಸಹಕಾರ ಭಾರತಿ ದ.ಕ ಜಿಲ್ಲೆ ವತಿಯಿಂದ ಪುತ್ತೂರು ವಿವೇಕಾನಂದ ಪಾಲಿಟೆಕ್ನಿಕ್ ಸಂಯೋಜನೆಯಲ್ಲಿ ತರಬೇತಿ ಶಿಬಿರ ನಡೆಯಿತು. ವೇದಿಕೆಯಲ್ಲಿ ವಿವೇಕಾನಂದ ಪಾಲಿಟೆಕ್ನಿಕ್ ನಿರ್ದೇಶಕರಾದ ಮೋಹಿನಿ ದಿವಾಕರ್, ತ್ರಿವೇಣಿ ಪೆರುವೋಡಿ ಉಪಸ್ಥಿತರಿದ್ದು ಮಾರ್ಗದರ್ಶನ ನೀಡಿದರು. ಗಂಗಾ ಹರಿಕೃಷ್ಣ ಶಾಸ್ತ್ರಿ ಸ್ವಾಗತಿಸಿದರು. ಅಜಯ್‌ಶಾಸ್ತ್ರಿ ವಂದಿಸಿದರು. ಕು.ಆಶಾ ಮಣಿಲಾ ವೈಯಕ್ತಿಕ ಗೀತೆ ಹಾಡಿದರು. ರಾಮಕೃಷ್ಣ ಮೂಡಂಬೈಲು ಕಾರ್ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.