HomePage_Banner
HomePage_Banner
HomePage_Banner

ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ | ಅಧ್ಯಕ್ಷರಾಗಿ ಚಂದ್ರಶೇಖರ ರಾವ್ ನಿಧಿಮುಂಡ ಆಯ್ಕೆ

Puttur_Advt_NewsUnder_1
Puttur_Advt_NewsUnder_1

 
ವರದಿ: ಸುನೀಲ್ ನಿಧಿಮುಂಡ

ಕಾವು: ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ನಿಧಿಮುಂಡ ಚಂದ್ರಶೇಖರ್ ರಾವ್‌ರವರು ಆಯ್ಕೆಯಾಗಿದ್ದಾರೆ. ನ.20ರಂದು ಕಾವು ದೇವಸ್ಥಾನದ ಸಭಾಂಗಣದಲ್ಲಿ ಆಡಳಿತಾಧಿಕಾರಿ ರವಿ ಕುಮಾರ್‌ರವರ ಅಧ್ಯಕ್ಷತೆಯಲ್ಲಿ ಆಯ್ಕೆ ಪ್ರಕ್ರಿಯೆ ಸಭೆ ನಡೆಯಿತು.
ಸಭೆಯಲ್ಲಿ ವ್ಯವಸ್ಥಾಪನಾ ಸಮಿತಿ ನೂತನ ಸದಸ್ಯರಾದ ಮಳಿ ರಾಮಚಂದ್ರ ಭಟ್, ಕೃಷ್ಣಪ್ರಸಾದ್ ಕೊಚ್ಚಿ, ಭಾಸ್ಕರ ಬಲ್ಯಾಯ, ಹೊನ್ನಪ್ಪ ಪೂಜಾರಿ ಪಿಲಿಪಂಜರ, ಧನಂಜಯ ನಾಯ್ಕ ಕುಂಞಿಕುಮೇರು, ನಿರ್ಮಲಾ ರೈ ಮದ್ಲ, ಪ್ರೇಮಾ ಗಂಗಾಧರ ಚಾಕೋಟೆ, ಪ್ರಧಾನ ಅರ್ಚಕ ಶಿವಪ್ರಸಾದ್ ಕಡಮಣ್ಣಾಯರವರು ಉಪಸ್ಥಿತರಿದ್ದರು. ನೂತನ ಅಧ್ಯಕ್ಷರ ಹೆಸರನ್ನು ಮಳಿ ರಾಮಚಂದ್ರ ಭಟ್‌ರವರು ಸೂಚಿಸಿ ಭಾಸ್ಕರ ಬಲ್ಯಾಯರವರು ಅನುಮೋದಿಸಿದರು.

ಶುಭಾಶಂಸನೆ:

ಕಾವು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ, ಪವಿತ್ರಪಾಣಿಯೂ ಆಗಿರುವ ನನ್ಯ ಅಚ್ಚುತ ಮೂಡೆತ್ತಾಯರವರು ವ್ಯವಸ್ಥಾಪನಾ ಸಮಿತಿಯ ನೂತನ ಸದಸ್ಯರುಗಳಿಗೆ ಮತ್ತು ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿ ಧಾರ್ಮಿಕ ಸೇವೆಯ ಬಗ್ಗೆ ಮಾರ್ಗದರ್ಶನ ನೀಡಿ ಮಾತನಾಡಿದರು. ಕೃಷ್ಣಪ್ರಸಾದ್ ಕೊಚ್ಚಿರವರು ವಂದಿಸಿದರು. ಬಾಲಕೃಷ್ಣ ಕೆದಿಲಾಯರವರು ಸಹಕರಿಸಿದರು.

ನೂತನ ಅಧ್ಯಕ್ಷರ ಪರಿಚಯ:
ನಿಧಿಮುಂಡ ನಿವಾಸಿ ದಿವಂಗತ ವೆಂಕಟ್ರಾವ್ ನಿಧಿಮುಂಡ ಮತ್ತು ಕಾವೇರಿಯಮ್ಮ ದಂಪತಿಗಳ ಪುತ್ರನಾಗಿರುವ ಚಂದ್ರಶೇಖರ ರಾವ್‌ರವರು ಧಾರ್ಮಿಕ, ಸಾಮಾಜಿಕ, ಸಹಕಾರಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಧಾರ್ಮಿಕ ಚಟುವಟಿಕೆಯಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಳ್ಳುವ ಚಂದ್ರಶೇಖರ ರಾವ್‌ರವರು ಈ ಹಿಂದೆ ನನ್ಯ ಅಚ್ಚು ಮೂಡೆತ್ತಾಯ ಮತ್ತು ಶ್ರೀಪತಿ ಮೂಡೆತ್ತಾಯರವರ ಅಧ್ಯಕ್ಷ ಅವಧಿಯ ವ್ಯವಸ್ಥಾಪನಾ ಸಮಿತಿಯಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಕಾವು ದೇವಸ್ಥಾನದಲ್ಲಿ 2003 ಮತ್ತು 2013ರಲ್ಲಿ ನಡೆದ ಬ್ರಹ್ಮಕಲಶೋತ್ಸವ ಸಮಿತಿಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಕಾವು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಲ್ಲಿ ಅಧ್ಯಕ್ಷರಾಗಿ ಪ್ರಸ್ತುತ ಗೌರವ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಹಕಾರಿ ಕ್ಷೇತ್ರದಲ್ಲೂ ಸೇವೆ ಸಲ್ಲಿಸಿರುವ ಚಂದ್ರಶೇಖರ ರಾವ್‌ರವರು ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಹಲವು ಬಾರಿ ನಿರ್ದೇಶಕರಾಗಿ, ಎರಡು ಬಾರಿ ಉಪಾಧ್ಯಕ್ಷರಾಗಿ ಜವಾಬ್ದಾರಿ ನಿರ್ವಹಿಸಿದ್ದಾರೆ. ಮಾಡ್ನೂರು ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಭಜನೆಯ ಬಗ್ಗೆಯೂ ಅಪಾರ ಆಸಕ್ತಿ ಹೊಂದಿರುವ ಚಂದ್ರಶೇಖರ ರಾವ್‌ರವರು ಕಾವು ನನ್ಯ ತುಡರ್ ಯುವಕ ಮಂಡಲದ ಅಧೀನದಲ್ಲಿರುವ ಭಜನಾ ಸಂಘದ ಗೌರವ ಮಾರ್ಗದರ್ಶಕರಾಗಿ, ಕಾಟುಕುಕ್ಕೆ ಭಜನಾ ಶಿಷ್ಯವೃಂದ ನನ್ಯ ಇದರ ಸಕ್ರಿಯ ಸದಸ್ಯರಾಗಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.