HomePage_Banner
HomePage_Banner
HomePage_Banner

ವಿಹಿಂಪ, ಬಜರಂಗದಳ, ಮಾತೃಶಕ್ತಿ ಆಂಜನೇಯ ಶಾಖೆಯ ನೇತೃತ್ವ ಬೊಳುವಾರಿನಲ್ಲಿ 4ನೇ ವರ್ಷದ ಸಾಮೂಹಿಕ ಗೋ ಪೂಜೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ವಿಶ್ವಹಿಂದೂ ಪರಿಷತ್, ಬಜರಂಗದಳ, ಮಾತೃಶಕ್ತಿ ಆಂಜನೇಯ ಶಾಖೆಯ ನೇತೃತ್ವ ಮತ್ತು ಬಿಜೆಪಿ ನಗರ ಮಂಡಲದ ಮಹಿಳಾ ಮೋರ್ಚಾದ ಸಹಯೋಗದೊಂದಿಗೆ ಬೊಳುವಾರು ಶ್ರೀ ಸಾರ್ವಜನಿಕ ಸತ್ಯನಾರಾಯಣ ಪೂಜಾ ಕಟ್ಟೆಯ ಮುಂಭಾಗ 4ನೇ ವರ್ಷದ ಸಾಮೂಹಿಕ ಗೋ ಪೂಜೆ ಕಾರ್ಯಕ್ರಮ ನ.20ರಂದು ಬೆಳಿಗ್ಗೆ ನಡೆಯಿತು.

ಗೋವುಗಳಿಗೆ ಅವಲಕ್ಕಿ, ಬಾಳೆಹಣ್ಣು, ಆಹಾರಗಳನ್ನು ನೀಡಿ ಆರತಿ ಬೆಳಗಿಸಿ ಪೂಜೆ ಮಾಡಲಾಯಿತು. ಈ ಸಂದರ್ಭದಲ್ಲಿ ವಿಶ್ವಹಿಂದೂ ಪರಿಷತ್ ಪ್ರಖಂಡ ಅಧ್ಯಕ್ಷ ಜನಾರ್ದನ ಬೆಟ್ಟ ಅವರು ದಿಕ್ಸೂಚಿ ಭಾಷಣ ಮಾಡಿದರು.

ನಗರಸಭಾ ಸದಸ್ಯರಾದ ಪಿ.ಜಿ.ಜಗನ್ನಿವಾಸ ರಾವ್, ಸಂತೋಷ್ ಬೊಳುವಾರು, ಬಿಜೆಪಿ ಮಹಿಳಾ ಮೋರ್ಚಾದ ಅದ್ಯಕ್ಷೆ ಶರಾವತಿ ರವಿನಾರಾಯಣ, ಕಾರ್ಯದರ್ಶಿ ಪ್ರಭಾವತಿ, ವಿಶ್ವಹಿಂದೂ ಪರಿಷತ್ ಮಾತೃಶಕ್ತಿಯ ಜಿಲ್ಲಾ ಉಪಾಧ್ಯಕ್ಷೆ ಪ್ರೇಮಲತಾ ರಾವ್, ಪ್ರಖಂಡದ ಅಧ್ಯಕ್ಷೆ ಮೋಹಿನಿ ದಿವಾಕರ್, ವಿಶ್ವಹಿಂದೂ ಪರಿಷತ್ ಗೋ ರಕ್ಷಾ ಪ್ರಮುಖ್ ಕಿರಣ್ ರಾಮಕುಂಜ, ಬಜರಂಗದಳ ಪ್ರಖಂಡ ಸಂಚಾಲಕ ಹರೀಶ್ ದೋಳ್ಪಾಡಿ, ಸಹಸಂಚಾಲಕ ಜಯಂತ್ ಕುಂಜೂರುಪಂಜ, ನಗರ ಸಂಚಾಲಕ ಚೇತನ್ ಬೊಳುವಾರು, ವಿಹಿಂಪ ಸಹಕಾರ್ಯದರ್ಶಿ ವಿಶಾಖ್ ಸಸಿಹಿತ್ಲು, ಆಂಜನೇಯ ಘಟಕದ ವಿಹಿಂಪ ಅಧ್ಯಕ್ಷ ಭರತ್ ನವೀನ್ ಬೊಳುವಾರು, ಬಿಜೆಪಿ ಕೊಂಬೆಟ್ಟು ವಾರ್ಡ್‌ನ ನವೀನ್ ಪಡಿವಾಳ್, ಅನುಪಮ, ರೂಪಾ, ಜ್ಯೋತಿ ಆರ್ ನಾಯಕ್, ಜಯಲತಾ, ಪದ್ಮಾವತಿ, ಸುಧ, ಶ್ಯಾಮಲ, ಇಂದಿರಾ, ಪ್ರೆಮ ಕೆಮ್ಮಾಯಿ ಮತ್ತಿತರರು ಉಪಸ್ಥಿತರಿದ್ದರು. ನೀಲಂತ್ ಬೊಳುವಾರು ಕಾರ್ಯಕ್ರಮ ನಿರೂಪಿಸಿದರು.

ಬೆಳಿಗ್ಗೆ ಸತ್ಯನಾರಾಯಣ ಪೂಜೆ:
ಕೋವಿಡ್ ಸಂದರ್ಭದಲ್ಲಿ ಮುಂದೂಡಲ್ಪಟ್ಟಿದ್ದ ಬೊಳುವಾರು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಕಟ್ಟೆಯಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿದ್ದ ೩೩ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯನ್ನು ಬೆಳಿಗ್ಗೆ ಸಮಿತಿ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ನೆರವೇರಿಸಲಾಯಿತು. ಕುಂಜಾರು ಪುರೋಹಿತ ನರಸಿಂಹ ಮಯ್ಯ ಅವರು ಸತ್ಯನಾರಾಯಣ ಪೂಜೆ ವೈದಿಕ ಕಾರ್ಯಕ್ರಮ ನೆರವೇರಿಸಿದರು. ಈ ಸಂದರ್ಭದಲ್ಲಿ ಸಮಿತಿ ಗೌರವಾಧ್ಯಕ್ಷ ಗಣಪತಿ ನಾಯಕ್, ಅಧ್ಯಕ್ಷ ದಿವಾಕರ ಹೆಗ್ಡೆ, ಕಾರ್ಯದರ್ಶಿ ಸಂತೋಷ್ ಕುಮಾರ್, ಖಜಾಂಜಿ ನೀಲಂತ್, ಕೋಶಾಧಿಕಾರಿ ರಾಮಕೃಷ್ಣ, ಶ್ಯಾಮಸುಂದರ, ಹರಿಪ್ರಸಾದ್ ಆಚಾರ್ಯ, ವಸಂತ ಆಚಾರ್ಯ, ಹರೀಶ್ ನಾಯ್ಕ್, ಪ್ರವೀಣ್ ಕುಮಾರ್, ಡಾ. ಎಂ.ಕೆ.ಪ್ರಸಾದ್, ಮನೋರಮ, ಶ್ಯಾಮಲ, ಗಣೇಶ್ ಬಾಳಿಗ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.