HomePage_Banner
HomePage_Banner
HomePage_Banner

ರೋಟರಿ ಪುತ್ತೂರು, ರೋಟರಿ ಚಾರಿಟೇಬಲ್ ಟ್ರಸ್ಟ್, ರೋಟರಿ-ಕ್ಯಾಂಪ್ಕೊ ಬ್ಲಡ್ ಬ್ಯಾಂಕ್‌ನಿಂದ ರೋಟರಿ ಪುತ್ತೂರು ಥೆಲೆಸೀಮಿಯಾ ಕೇರ್ ಸೆಂಟರ್ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1
  • ರೋಟರಿಯಿಂದ ಥೆಲೆಸೀಮಿಯಾ ಪೀಡಿತರ ಸ್ಪಂದನೆ ಪುಣ್ಯದ ಕೆಲಸ-ಡಾ|ಯತೀಶ್

ಚಿತ್ರ: ಸಂತೋಷ್ ಮೊಟ್ಟೆತ್ತಡ್ಕ

ಪುತ್ತೂರು: ಥೆಲೆಸೀಮಿಯಾ ರೋಗ ಪೀಡಿತರ ಆರೈಕೆಗೋಸ್ಕರ ರೋಟರಿ ಕ್ಲಬ್ ಪುತ್ತೂರು ಥೆಲೆಸೀಮಿಯಾ ಕೇರ್ ಸೆಂಟರ್ ಎಂಬ ವಿಶೇಷ ಘಟಕವನ್ನು ಸ್ಥಾಪಿಸುವ ಮೂಲಕ ಈ ಪ್ರದೇಶದಲ್ಲಿನ ಕೊರತೆಯೊಂದನ್ನು ನೀಗಿಸುವ ಮೂಲಕ ರೋಟರಿ ಪುತ್ತೂರು ಸಂಸ್ಥೆಯು ನಿಜವಾಗಿಯೂ ಅಡಿಪಾಯವನ್ನು ಹಾಕಿದ್ದಾರೆ ಮಾತ್ರವಲ್ಲದೆ ಇದೊಂದು ಪುಣ್ಯದ ಕೆಲಸವಾಗಿದೆ ಎಂದು ಪುತ್ತೂರು ಸಹಾಯಕ ಆಯುಕ್ತ ಡಾ.ಯತೀಶ್ ಉಳ್ಳಾಲ್‌ರವರು ಹೇಳಿದರು.

ರೋಟರಿ ಕ್ಲಬ್ ಪುತ್ತೂರು ಆಶ್ರಯದಲ್ಲಿ ರೋಟರಿ ಚಾರಿಟೇಬಲ್ ಟ್ರಸ್ಟ್ ಮತ್ತು ರೋಟರಿ-ಕ್ಯಾಂಪ್ಕೊ ಬ್ಲಡ್ ಬ್ಯಾಂಕ್ ಪುತ್ತೂರು ಇದರ ಸಹಯೋಗದಲ್ಲಿ ನ.20ರಂದು ರೋಟರಿ ಬ್ಲಡ್‌ಬ್ಯಾಂಕ್‌ನ ರೂಫ್‌ಟಾಪ್ ಹಾಲ್‌ನಲ್ಲಿ ಜರಗಿದ ಸಾರ್ವತ್ರಿಕ(ಯೂನಿವರ್ಸಲ್) ಮಕ್ಕಳ ದಿನ ಮತ್ತು ಪೋಷಕರ ಜಾಗೃತಿ ಕಾರ್ಯಕ್ರಮದೊಂದಿಗೆ ರೋಟರಿ ಪುತ್ತೂರು ಥೆಲೆಸೀಮಿಯಾ ಕೇರ್ ಸೆಂಟರ್‌ನ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮತ್ತು ಥೆಲೆಸೀಮಿಯಾ ರೋಗ ಪೀಡಿತರಿಗೆ ಐಡಿ ಕಾರ್ಡ್‌ನ್ನು ವಿತರಿಸಿ ಮಾತನಾಡಿದರು. ಪುತ್ತೂರು ಭೌಗೋಳಿಕವಾಗಿ ಒಂದು ವಿಸ್ತಾರ ಪ್ರದೇಶವಾಗಿದ್ದು, ಇಲ್ಲಿನ ಜನರಿಗೆ ತುರ್ತು ಸಂದರ್ಭದಲ್ಲಿ ರಕ್ತದ ಪೂರೈಕೆಯನ್ನು ಮಾಡುವುದಕ್ಕೋಸ್ಕರ ಬ್ಲಡ್‌ಬ್ಯಾಂಕ್‌ನ್ನು ಸ್ಥಾಪಿಸಿ ಪುತ್ತೂರು ರೋಟರಿ ಕ್ಲಬ್ ಪುತ್ತೂರು ಈಗಾಗಲೇ ಮನೆಮಾತಾಗಿದೆ ಮಾತ್ರವಲ್ಲದೆ ಜನರ ಸಾಮಾಜಿಕ ಮತ್ತು ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸುವ ವಿಧಾನ ಶ್ಲಾಘನೀಯವಾಗಿದೆ. ಥೆಲೆಸೀಮಿಯಾ ಪೀಡಿತ ವ್ಯಕ್ತಿಗೆ ಉಚಿತ ರಕ್ತದ ಪೂರೈಕೆಯೊಂದಿಗೆ ಆರೈಕೆಯನ್ನು ಮಾಡುವುದರಿಂದ ಈಗ ಮತ್ತೊಂದು ಹೆಜ್ಜೆಯನ್ನಿಟ್ಟಿರುವುದು ಉತ್ತಮ ನಡೆಯಾಗಿದೆ. ಥೆಲೆಸೀಮಿಯಾ ಪೀಡಿತರು ತಮ್ಮ ಆಹಾರ ಪದ್ಧತಿಯನ್ನು ವೈದ್ಯರ ಸಲಹೆಯಂತೆ ಪಾಲನೆ ಮಾಡಿದಾಗ ಆರೋಗ್ಯ ಸುಧಾರಿಸಬಹುದಾಗಿದೆ ಎಂದರು.

ಭಾರತದಲ್ಲಿ ಬೀಟಾ ಥೆಲೆಸೀಮಿಯಾದವರು 1 ಲಕ್ಷ ಜನರಿದ್ದಾರೆ-ಡಾ.ಜೆ.ಸಿ ಆಡಿಗ:
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಪುತ್ತೂರು ಚೇತನಾ ಆಸ್ಪತ್ರೆಯ ವೈದ್ಯರಾದ ಡಾ.ಜೆ.ಸಿ ಆಡಿಗರವರು ಮಾತನಾಡಿ, ಥೆಲಸೀಮಿಯಾ ಎಂದರೆ ವಂಶ ಪಾರಂಪರಿಕವಾಗಿ ಬರುವ ಹಿಮೋಗ್ಲೋಬಿನ್ ತಯಾರಿಕೆಯ ತೊಂದರೆಯಿಂದ, ತಂದೆ ತಾಯಿಯಿಂದ ಮಕ್ಕಳಿಗೆ ಬರುವ ರೋಗ. ಇದರಲ್ಲಿ ಹಿಮೋಗ್ಲೋಬಿನ್‌ನ ಪ್ರೋಟಿನ್ ತಯಾರಿಕೆಯು ಸರಿಯಾಗಿ ಆಗದಿರುವುದರಿಂದ ರಕ್ತದಲ್ಲಿನ ಹಿಮೋಗ್ಲೋಬಿನ್ ಮತ್ತು ಕೆಂಪು ರಕ್ತಕಣಗಳು ಕಡಿಮೆಯಾಗಿ ರಕ್ತಹೀನತೆ ಉಂಟಾಗುತ್ತದೆ. ಮನುಷ್ಯರ ಹಿಮೋಗ್ಲೋಬಿನ್ ಪ್ರೊಟೀನ್‌ನಲ್ಲಿ 2 ಆಲ್ಫಾ ಮತ್ತು 2 ಬೀಟಾ ಸರಪಳಿಗಿರುತ್ತದೆ. ಆಲ್ಪಾ ಸರಪಳಿಯ ಕೊರತೆ ಇದ್ದಲ್ಲಿ ಆಲ್ಫಾಥೆಲೆಸೀಮಿಯಾ, ಬೀಟಾ ಸರಪಳಿ ಕೊರತೆಯಾದಲ್ಲಿ ಬೀಟಾ ಥೆಲೆಸೀಮಿಯಾ ಎಂದೂ ಕರೆಯುತ್ತಾರೆ. ಇದರಲ್ಲಿ ಸ್ವಲ್ಪ ಮಟ್ಟಿಗೆ ಕೊರತೆ ಇದ್ದಲ್ಲಿ ಇದಕ್ಕೆ ಟ್ರೈಟ್ ಎಂದೂ, ಸ್ವಲ್ಪ ಕಡಿಮೆ ಕೊರತೆ ಇದ್ದಾಗ ಇಂಟರ್ ಮೀಡಿಯಾ ಎಂದೂ, ತೀವೃ ಪ್ರೊಟೀನ್ ಕೊರತೆ ಆದಾಗ ಥೆಲೆಸೀಮಿಯಾ ಮೇಜರ್ ಎಂದು ಕರೆಯುತ್ತಾರೆ ಎಂದ ಅವರು ಮೇಜರ್ ಕಾಯಿಲೆ ತೀವ್ರ ತರಹದ ರಕ್ತವನ್ನೂ ಕುಂದಿಸುತ್ತದೆ. ಇಂಟರ್ ಮೀಡಿಯಾದಲ್ಲಿ ಸ್ವಲ್ಪ ಮಟ್ಟಿಗೆ ರಕ್ತದ ಕೊರತೆ ಇದ್ದು ಅಲ್ಪರೋಗ ಲಕ್ಷಣಗಳಿರುತ್ತದೆ. ಇಂಟರ್‌ಮೀಡಿಯಾದಲ್ಲಿ ಏನೂ ಲಕ್ಷಣಗಳಿಲ್ಲದೇ ಇವರು ರೋಗವನ್ನು ವಂಶವಾಹಿನಿಯಿಂದ ಮಕ್ಕಳಿಗೆ ಹರಡಬಲ್ಲರು. ಭಾರತದಲ್ಲಿ ಸುಮಾರು 900 ಮಕ್ಕಳು ಈ ಕಾಯಿಲೆಯಿಂದ ಹುಟ್ಟುತ್ತಾರೆ. ಭಾರತದಲ್ಲಿ ಬೀಟಾ ಥೆಲೆಸೀಮಿಯಾದವರು 1 ಲಕ್ಷ ಜನರಿದ್ದಾರೆ ಎಂದು ಅವರು ಹೇಳಿದರು.

ಪ್ರತಿ ವರ್ಷ ಮೇ.೧೮ರಿಂದ ವಿಶ್ವ ಥೆಲೆಸೀಮಿಯಾ ಆಚರಣೆ-ಡಾ.ಶ್ರೀಕಾಂತ್ ರಾವ್:
ಮತ್ತೋರ್ವ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಮತ್ತು ಪ್ರಾಜೆಕ್ಟ್ ಕೋ-ಆರ್ಡಿನೇಟರ್ ಆಗಿರುವ ಪುತ್ತೂರು ಚೇತನಾ ಆಸ್ಪತ್ರೆಯ ವೈದ್ಯರಾದ ಡಾ.ಶ್ರೀಕಾಂತ್ ರಾವ್‌ರವರು ಮಾತನಾಡಿ, ಥೆಲೆಸೀಮಿಯಾ ಮೈನರ್‌ನಲ್ಲಿ ಸ್ವಲ್ಪ ರಕ್ತ ಕಡಿಮೆ ಇರುವುದು, ಇಂಟರ್‌ಮೀಡಿಯಾದಲ್ಲಿ ಇನ್ನೂ ಸ್ವಲ್ಪ ಜಾಸ್ತಿ ರಕ್ತದ ಕೊರತೆಯಾಗಬಹುದು. ಥೆಲಸೀಮಿಯಾ ಮೇಜರ್‌ನಲ್ಲಿ `ಲಿವರ್ ಮತ್ತು ಸ್ಪ್ಲೀನ್ ದೊಡ್ಡದಾಗುವುದು, ನಿರ್ನಾಳ ಗ್ರಂಥಿಗಳು ಸರಿಯಾಗಿ ಕೆಲಸ ಮಾಡದಿರುವುದು, ಎಲುಬಿನಲ್ಲಿ ತೊಂದರೆಯಿಂದ ತಲೆಯ ಎಲುಬು ದೊಡ್ಡದಾಗಿ ಕಾಣುವುದು, ದೊಡ್ಡ ಎಲುಬುಗಳಲ್ಲಿ ಮುರಿತ ಕಂಡುಬರುತ್ತದೆ. ತೀವೃ ತರಹದ ಸೋಂಕಿನಿಂದ ೧೦ ವರ್ಷದೊಳಗೆ ಕೆಲವರು ಮರಣ ಹೊಂದುತ್ತಾರೆ. ಪುನಃ ಪುನಃ ರಕ್ತಕೊಡುವುದರಿಂದ ಹಿಮೋಸಿಡೆರಿನ್, ಲಿವರ್ ಮತ್ತು ಹೃದಯದಲ್ಲಿ ಶೇಖರಣೆಗೊಂಡು ಸಿರೋಸಿಸ್ ಹೃದಯ ಮಾಂಸ ಖಂಡಗಳ ವಿಫಲತೆಯಿಂದ, ಸಿಹಿಮೂತ್ರ ರೋಗ, ಥೈರಾಯಿಡ್‌ನ, ಪಾರಾಥೈರಾಯಿಯ್ಡ್ ಗ್ರಂಥಿಯ ವಿಫಲತೆ ಹಾಗೂ ಕಾಮಗ್ರಂಥಿಗಳ ವಿಫಲತೆ ಕೂಡ ಕಂಡು ಬರುತ್ತದೆ ಎಂದ ಅವರು ಹಿಮೋಗ್ಲೋಬಿನ್‌ನ ಪ್ರಕಾರಗಳನ್ನು ಹಿಮೋಗ್ಲೊಬಿನ್ ಇಲೆಕ್ಟ್ರೋಪೋರೆಸಿಸ್ ಮೂಲಕ ಕಂಡು ಹಿಡಿಯಬಹುದು. ಪ್ರಸವಪೂರ್ವ ಪರೀಕ್ಷೆಯಿಂದ ೧೦-೧೨ವಾರದ ಗರ್ಭಿಣಿ ಈ ರೋಗದ ಮಗುವನ್ನೂ ಪತ್ತೆ ಮಾಡಬಹುದು. ಆಮ್ನೀಯಟಿಕ್ ದ್ರವದ ಪರೀಕ್ಷೆಯಿಂದ ೧೮-೧೯ ವಾರದ ಪ್ರಸವದಲ್ಲಿ ಈ ರೋಗವನ್ನು ಗುರುತಿಸಬಹುದು. ಪ್ರತೀ ವರ್ಷ ಮೇ.18ರಿಂದ ವಿಶ್ವ ಥೆಲೆಸೀಮಿಯಾ ದಿನವೆಂದು ಆಚರಿಸಲಾಗುತ್ತದೆ ಎಂದು ಅವರು ಹೇಳಿದರು.

35 ಮಂದಿಗೆ ಬ್ಲಡ್‌ಬ್ಯಾಂಕಿನಿಂದ ಉಚಿತ ರಕ್ತದ ಪೂರೈಕೆ-ಪ್ರೊ|ಝೇವಿಯರ್:
ಅಧ್ಯಕ್ಷತೆ ವಹಿಸಿದ ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಪ್ರೊ|ಝೇವಿಯರ್ ಡಿ’ಸೋಜರವರು ಸ್ವಾಗತಿಸಿ, ಮಾತನಾಡಿ, ಮಂಗಳೂರಿನಿಂದ ಮಡಿಕೇರಿ ತನಕ ರಕ್ತವನ್ನು ಪೂರೈಕೆ ಮಾಡುವ ಯಾವುದೇ ಬ್ಲಡ್‌ಬ್ಯಾಂಕ್‌ಗಳು ಇಲ್ಲದೇ ಇದ್ದ ಪಕ್ಷದಲ್ಲಿ ೫೬ ವರುಷಗಳ ಹರೆಯದ ಹಿರಿಯ ಕ್ಲಬ್ ಆಗಿರುವ ಪುತ್ತೂರು ರೋಟರಿ ಕ್ಲಬ್ ಕಳೆದ ೨೨ ವರುಷಗಳಿಂದ ಅಗತ್ಯ ಫಲಾನುಭವಿಗಳಿಗೆ ರಕ್ತದ ನೆರವು ನೀಡುವ ಮೂಲಕ ಬ್ಲಡ್‌ಬ್ಯಾಂಕ್ ಕಾರ್ಯನಿರ್ವಹಿಸುತ್ತಿದೆ ಮಾತ್ರವಲ್ಲದೆ ರೋಟರಿ ಚಾರಿಟೇಬಲ್ ಟ್ರಸ್ಟ್ ಮುಖೇನ ಪುತ್ತೂರು ಬ್ಲಡ್‌ಬ್ಯಾಂಕ್ ಇದೀಗ ಕಳೆದ ಮೂರು ವರ್ಷಗಳ ಹಿಂದೆ ಮೇಲ್ದರ್ಜೆಗೇರಿದೆ ಕೂಡ ಎಂದ ಅವರು ದಾಖಲೆಗಳ ಪ್ರಕಾರ ಪುತ್ತೂರು ಬ್ಲಡ್‌ಬ್ಯಾಂಕಿನಿಂದ ಆರ್ಥಿಕ ಪರಿಸ್ಥಿತಿಯಿಂದ ಹಿನ್ನೆಡೆ ಅನುಭವಿಸುವ ಸುಮಾರು ೩೫ ಮಂದಿಗೆ ಉಚಿತ ರಕ್ತವನ್ನು ನೀಡುವ ಮೂಲಕ ಸಹಾಯಹಸ್ತವನ್ನು ಚಾಚಿದೆ. ಇದೀಗ ಬ್ಲಡ್‌ಬ್ಯಾಂಕಿನ ಸಹಘಟಕವಾಗಿರುವ ಥೆಲೆಸೀಮಿಯಾ ಕೇರ್ ಸೆಂಟರ್ ಅಗತ್ಯ ಫಲಾನುಭವಿಗಳಿಗೆ ಅಗತ್ಯ ನೆರವು ನೀಡುತ್ತಿರುವುದು ಶ್ಲಾಘನೀಯ ಎಂದು ಅವರು ಹೇಳಿದರು.

ಪುತ್ತೂರು ಬ್ಲಡ್‌ಬ್ಯಾಂಕಿನ ವೈದ್ಯಾಧಿಕಾರಿ ಡಾ.ರಾಮಚಂದ್ರ ಭಟ್, ಪ್ರಾಜೆಕ್ಟ್ ಕೋ-ಆರ್ಡಿನೇಟರ್ ರಾಮಕೃಷ್ಣ ಕೆ.ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕು|ಪ್ರಾರ್ಥನಾ ಪ್ರಾರ್ಥಿಸಿದರು. ಪುತ್ತೂರು ರೋಟರಿ ಕ್ಲಬ್ ಕಾರ್ಯದರ್ಶಿ ಪ್ರೊ|ದತ್ತಾತ್ರೇಯ ರಾವ್ ವಂದಿಸಿದರು. ರೋಟರಿ ವಲಯ ಸೇನಾನಿ ಎ.ಜೆ ರೈಯವರು ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ರೋಟರಿ ಚಾರಿಟೇಬಲ್ ಟ್ರಸ್ಟ್‌ನ ಕೋಶಾಧಿಕಾರಿ ದೀಪಕ್ ಕೆ.ಪಿ ಕಾರ್ಯಕ್ರಮ ನಿರೂಪಿಸಿದರು.

ಥೆಲೆಸೀಮಿಯಾ ಮೇಜರ್‌ನ ಲಕ್ಷಣಗಳು…
ಜಾಂಡಿಸ್ ಮತ್ತು ಬಿಳಿ ಚರ್ಮ, ಅತಿಯಾದ ಆಯಾಸ ಮತ್ತು ಮಂಪರು, ಎದೆನೋವು, ತಣ್ಣಗಿನ ಕೈಕಾಲು, ಉಸಿರಾಟದ ತೊಂದರೆ, ಕಾಲು ಸ್ನಾಯುಗಳಲ್ಲಿ ನೋವು, ಜಾಸ್ತಿ ಹೃದಯ ಬಡಿತ, ಆಹಾರ ತಿನ್ನಲು ತೊಂದರೆ, ಬೆಳವಣಿಗೆ ಕುಂಠಿತಗೊಳ್ಳುವುದು, ತಲೆನೋವು, ತಲೆಸುತ್ತುವುದು ಮತ್ತು ಸ್ಮೃತಿ ತಪ್ಪುವುದು, ಸುಲಭವಾಗಿ ಬ್ಯಾಕ್ಟೀರಿಯಾ ಹಾಗೂ ಇತರ ಸೋಂಕುಗಳು ಬರುವುದು ಇತ್ಯಾದಿ..

ಆಹಾರ ಸೇವನೆ…
ಕಬ್ಬಿಣ ಸತ್ವ ಇರುವ, ಸಸ್ಯಹಾರ ಹಾಗೂ ಮಾಂಸಾಹಾರ ಸೇವನೆ ಕಡಿಮೆ ಮಾಡಬೇಕು. ವಿಟಮಿನ್ `ಸಿ’ಯುಕ್ತ ಆಹಾರದಿಂದ ಕಬ್ಬಿಣದ ಅಂಶ ಜಾಸ್ತಿ ಆಗುವುದರಿಂದ ಈ ವಿಟಮಿನ್ ಇರುವ ವಸ್ತುಗಳನ್ನು ಕಡಿಮೆ ಸೇವಿಸಬೇಕು. ಏಕದಳ, ದ್ವಿದಳ ದಾನ್ಯ, ಮಾಂಸ, ಓಯ್‌ಸ್ಟರ್, ಲಿವರ್, ಪೋರ್ಕ್, ಬೀನ್ಸ್, ನೆಲಗಡಲೆ ಎಣ್ಣೆ ಚೋಪ್ಸ್, ಹಾಲು, ಬಸಳೆ, ಪಾಲಕ್‌ಸೊಪ್ಪು, ಕಡಲೆ ಉಪಯೋಗ ಕಡಿಮೆ ಮಾಡಬೇಕು. ಕ್ಯಾಲ್ಸಿಯಂ, ವಿಟಮಿನ್ ಡಿ, ಝಿಂಕ್, ವಿಟಮಿನ್ `ಇ’ಯುಕ್ತ ಆಹಾರ ಜಾಸ್ತಿ ಸೇವನೆ ಮಾಡಬೇಕು. ಟೀ, ಕಾಫಿ, ಸೇವನೆಯಿಂದ ಕಬ್ಬಿಣದ ಅಂಶ ಕಡಿಮೆ ಆಗುತ್ತದೆ ಹಾಗೂ ಪ್ರಯೋಜನಕಾರಿ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.