HomePage_Banner
HomePage_Banner
HomePage_Banner

ಕೇರಳ ಕಲಾ ಶೈಲಿ ಸಿಂಗರಿ ಮೇಳ ಚೆಂಡೆ ಕಲಾವಿದರ ಮಹಿಳಾ ತಂಡ ಚಾರ್ವಾಕದಲ್ಲೂ ರೆಡಿ.. | ಸದ್ದಿಲ್ಲದೆ ಸಜ್ಜಾಗುತ್ತಿದೆ ಚಾರ್ವಾಕ ಶ್ರೀ ಕಪಿಲೇಶ್ವರ ಮಹಿಳಾ ಸಿಂಗಾರಿ ಮೇಳ…

Puttur_Advt_NewsUnder_1
Puttur_Advt_NewsUnder_1

ಸುಧಾಕರ ಆಚಾರ್ಯ ಕಾಣಿಯೂರು

ಕಾಣಿಯೂರು: ಕೇರಳ ಕಲಾ ಶೈಲಿಯ ಸಿಂಗಾರಿ ಮೇಳ ಚೆಂಡೆ ಕಲಾವಿದರ ನೂತನ ಮಹಿಳಾ ತಂಡ ಚಾರ್ವಾಕ ಗ್ರಾಮದಲ್ಲೂ ಸಜ್ಜಾಗುತ್ತಿದೆ. ತಾಲೂಕಿನ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಗ್ರಾಮೀಣ ಪ್ರದೇಶವಾದ ಚಾರ್ವಾಕ ಗ್ರಾಮದಲ್ಲಿ ಚಾರ್ವಾಕ ಶ್ರೀ ಕಪಿಲೇಶ್ವರ ಸಿಂಗಾರಿ ಮೇಳ ಚೆಂಡೆ ಮಹಿಳಾ ಕಲಾವಿದರ ನೂತನ ತಂಡ ಪ್ರಾರಂಭವಾಗುತ್ತಿದ್ದು, ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಲು ಸಿದ್ಧವಾಗುತ್ತಿದೆ.

ಸೈ ಎನಿಸಿಕೊಂಡ ಸಿಂಗಾರಿಮೇಳ ತಂಡ
ಚಾರ್ವಾಕ ಶ್ರೀ ಕಪಿಲೇಶ್ವರ ಸಿಂಗಾರಿ ಮೇಳ ಕಳೆದ ಒಂದುವರೆ ವರ್ಷದಿಂದ ರಾಜ್ಯಾದ್ಯಂತ ಅತ್ಯುತ್ತಮ ಕಲಾ ಪ್ರದರ್ಶನ ನೀಡುತ್ತಿದ್ದು, ೫೦ಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಜನರ ಮುಂದೆ ಸೈ ಎನಿಸಿಕೊಂಡಿದೆ. ಕೋವಿಡ್ ಹಿನ್ನಲೆಯಿಂದ ಕೆಲವು ತಿಂಗಳಿನಿಂದ ಕಲಾವಿದರಿಗೆ ರಜೆ ನೀಡಲಾಗಿದ್ದು, ಮುಂಎ ಕಾರ್ಯಕ್ರಮ ನೀಡಲು ಸಿದ್ದವಾಗಿದೆ.
ಪುತ್ತೂರು, ಕಡಬ, ಬೆಳ್ತಂಗಡಿ ತಾಲೂಕಿಗೆ ಏಕೈಕ ಸಿಂಗಾರಿ ಮೇಳ ತಂಡ ಇದಾಗಿದ್ದು, ಇದೀಗ ಮಹಿಳಾ ಕಲಾವಿದರ ಬೇಡಿಕೆ ಇರುವುದರಿಂದ ಕಪಿಲೇಶ್ವರ ಮಹಿಳಾ ಸಿಂಗಾರಿ ಮೇಳ ತಂಡವನ್ನು ಆರಂಭಿಸಿ ಕಳೆದ ಒಂದು ವರ್ಷದಿಂದ ತರಬೇತಿ ನೀಡಲಾಗುತ್ತಿದೆ. ತಂಡದಲ್ಲಿ 20 ಜನ ಮಹಿಳಾ ಕಲಾವಿದರಿದ್ದು, ಪ್ರತಿದಿನ ಶ್ರೀ ಮಹಿಷಮರ್ಧಿನಿ ದೇವಸ್ಥಾನ ಕೇರ್ಪಡ ಇಲ್ಲಿ ತರಬೇತಿ ಕೇಂದ್ರ ಸ್ಥಾಪಿಸಿ ತರಬೇತಿಯನ್ನು ನೀಡಲಾಗುತ್ತಿದೆ.

ರಂಗಪ್ರವೇಶಕ್ಕೆ ಸಿದ್ಧತೆ
ಕೇರಳದ ಖ್ಯಾತ ಚೆಂಡೆ ಕಲಾವಿದರಾದ ಚಂದ್ರನ್ ಇವರ ಮಾರ್ಗದರ್ಶನದಲ್ಲಿ ತರಬೇತಿ ನೀಡಲಾಗುತ್ತಿದೆ. ಮಹಿಳಾ ಸಿಂಗಾರಿ ಮೇಳದ ಗೌರವಾಧ್ಯಕ್ಷೆ ಡಾ| ಆಶಾ ಅಬಿಕಾರ್ ಸಹಕರಿಸುತ್ತಿದ್ದಾರೆ. ಕಪಿಲೇಶ್ವರ ಸಿಂಗಾರಿ ಮೇಳದ ಪುರುಷ ಕಲಾವಿದರಿಂದಲೂ ಇವರಿಗೆ ತರಬೇತಿ ನೀಡಲಾಗುತ್ತಿದ್ದು, ಇವರ ಜೊತೆಗೆ ತಂಡದ ವ್ಯವಸ್ಥಾಪಕರಾಗಿ ಶಿವಪ್ರಸಾದ್ ಬಾರೆಂಗಳ ಹಾಗೂ ಉಸ್ತುವಾರಿಯಾಗಿ ಶುಭ ಅವರು ಸಹಕರಿಸುತ್ತಿದ್ದಾರೆ. ಡಿಸೆಂಬರ್ ೨ನೇ ವಾರದಲ್ಲಿ ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನದಲ್ಲಿ ರಂಗಪ್ರವೇಶ್ಕ್ಕೆ ಸಿದ್ಧತೆ ನಡೆದಿದೆ.

ಚಾರ್ವಾಕ ಶ್ರೀ ಕಪಿಲೇಶ್ವರ ಸಿಂಗಾರಿ ಮೇಳದ ಜೊತೆಗೆ ಮಹಿಳಾ ಸಿಂಗಾರಿ ಮೇಳ ತಂಡ ಬೇಕು ಎನ್ನುವ ಅಭಿಪ್ರಾಯ ಹಲವಾರು ಕಡೆಗಳಲ್ಲಿ ಕೇಳಿ ಬಂತು. ಈ ನಿಟ್ಟಿನಲ್ಲಿ ಕಳೆದ ಒಂದು ವರ್ಷದಿಂದ ನಮ್ಮ ಸಿಂಗಾರಿ ಮೇಳದ ಕಲಾವಿದರ ಸಹಕಾರದಿಂದ ರಂಗಪ್ರವೇಶಕ್ಕೆ ಸಿದ್ಧವಾಗಿದ್ದು, ಕಡಬ,ಪುತ್ತೂರು ತಾಲೂಕಿನ ಏಕೈಕ ಸಿಂಗಾರಿ ಮೇಳ ಅನ್ನಿಸಿದ್ದು ಹೆಮ್ಮೆಯ ವಿಚಾರ. 
ಶಿವಪ್ರಸಾದ್ ಬಾರೆಂಗಳ
ವ್ಯವಸ್ಥಾಪಕರು, ಶ್ರೀ ಕಪಿಲೇಶ್ವರ ಸಿಂಗಾರಿ ಮೇಳ ಚಾರ್ವಾಕ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.