HomePage_Banner
HomePage_Banner
HomePage_Banner

ಬಲ್ನಾಡು: ಮಲಗಿದ್ದ ವ್ಯಕ್ತಿ ಅಸ್ವಸ್ಥಗೊಂಡು ಮೃತ್ಯು

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಖಾಯಿಲೆಯಿಂದ ಬಳಲುತ್ತಿದ್ದ ವ್ತಕ್ತಿಯೊಬ್ಬರು ಮನೆಯಲ್ಲಿ ಮಲಗಿದ ಸ್ಥಿತಿಯಲ್ಲೇ ಮೃತ ಪಟ್ಟಿರುವ ಘಟನೆ ನ.20ರಂದು ಬೆಳಕಿಗೆ ಬಂದಿದೆ.

ಬಲ್ನಾಡು ಗ್ರಾಮದ ಪಾಂಡಿಲ್ತಡ್ಕ ನಿವಾಸಿ ಬಾಬು ಮುಗೇರ(32ವ) ರವರು ಮೃತಪಟ್ಟವರು. ಬಾಬು ಮುಗೇರ ಅವರು ಮದ್ಯ ವ್ಯಸನಿಯಾಗಿದ್ದು ಟಿ.ಬಿ ಖಾಯಿಲೆಯಿಂದ ಬಳಲುತ್ತಿದ್ದವರು ಕಳೆದ, 3 ವರ್ಷಗಳಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡಿಕೊಂಡಿದ್ದರು. ಅವರ ಪತ್ನಿ ಹೆರಿಗೆಗೆಂದು ತವರು ಮನೆಗೆ ಹೋದವರು ಬಂದಿರಲಿಲ್ಲ. ಈ ನಡುವೆ ಬಾಬು ಮುಗೇರ ಅವರು ಖಾಯಿಲೆಗೆ ಸರಿಯಾಗಿ ಚಿಕಿತ್ಸೆ ಮಾಡದೆ ಮದ್ಯ ವ್ಯಸನಿಯಾಗಿದ್ದರು. ನ.20ರಂದು ಬಾಬು ಮುಗೇರ ಅವರ ಅಣ್ಣ ಕೇಪು ಮುಗೇರ ಅವರು ಸಹೋದರನ ಮನೆಯ ಎದರು ಹಗಲು ವಿದ್ಯುತ್ ದೀಪ ಬೆಳಕನ್ನು ನೋಡಿ ಮನೆಯ ಹತ್ತಿರ ಹೋದಾಗ ಒಳಗಿನಿಂದ ವಾಸನೆ ಬರುತ್ತಿರುವುದನ್ನು ಗಮನಿಸಿ ಮನೆಯ ಕಿಟಕಿಯಿಂದ ನೋಡಿದಾಗ ಸಹೋದರ ಬಾಬು ಮುಗೇರ ಮಲಗಿದ್ದ ಸ್ಥಿತಿಯಲ್ಲಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಘಟನೆಯ ಕುರಿತು ಸ್ಥಳಕ್ಕೆ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ. ಮೃತರ ಸಹೋದರ ಅಣ್ಣು ಮುಗೇರ ಅವರು ನೀಡಿದ ದೂರಿನಂತೆ ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.