HomePage_Banner
HomePage_Banner
HomePage_Banner

ಪಶುಸಂಗೋಪನಾ ಇಲಾಖೆಯ ಆಡಳಿತ ವೈದ್ಯಾಧಿಕಾರಿ  ಡಾ.ಧರ್ಮಪಾಲ ಗೌಡ ಕೊಯಿಲಕ್ಕೆ ವರ್ಗಾವಣೆ, ಪುತ್ತೂರಿಗೆ ಡಾ.ಪ್ರಸನ್ನ ಕುಮಾರ್ ಹೆಬ್ಬಾರ್

Puttur_Advt_NewsUnder_1
Puttur_Advt_NewsUnder_1
ಪುತ್ತೂರು: ಪುತ್ತೂರು ಪಶುಸಂಗೋಪನಾ ಇಲಾಖೆಯ ಆಡಳಿತ ವೈದ್ಯಾಧಿಕಾರಿಯಾಗಿದ್ದ ಡಾ. ಧರ್ಮಪಾಲ ಗೌಡ ಅವರನ್ನು ಕೊಯಿಲ ಕೆ.ಸಿ.ಫಾರ್ಮ್‌ಗೆ ವರ್ಗಾವಣೆಗೊಳಿಸಲಾಗಿದ್ದು ಪುತ್ತೂರು ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕರಾಗಿ ಡಾ.ಪ್ರಸನ್ನ ಕುಮಾರ್ ಹೆಬ್ಬಾರ್ ವರ್ಗಾವಣೆಗೊಂಡಿದ್ದಾರೆ.

ನಿಯಮ ಉಲ್ಲಂಸಿ ಗೋಸಾಗಾಟ ಮಾಡುವವರಿಗೆ ವೈದ್ಯಕೀಯ ಪ್ರಮಾಣ ಕೊಟ್ಟಿರುವ ಆರೋಪದ ಕುರಿತು ಡಾ.ಧರ್ಮಪಾಲ ಗೌಡ ಅವರ ವಿರುದ್ಧ ಹಿಂದೂ ಸಂಘಟನೆ ಶಾಸಕರಿಗೆ ದೂರು ನೀಡಿದ್ದು ಶಾಸಕರು ಈ ಕುರಿತು ಸ್ಪಂದಿಸಿ ಡಾ.ಧರ್ಮಪಾಲ ಗೌಡರನ್ನು ವರ್ಗಾವಣೆ ಮಾಡಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ರವಾನೆಯಾಗುತ್ತಿದೆ.ಈ ಕುರಿತು ಡಾ. ಧರ್ಮಪಾಲ ಗೌಡರನ್ನು ‘ಸುದ್ದಿ’ಸಂಪರ್ಕಿಸಿದಾಗ ‘ನನಗೆ ವರ್ಗಾವಣೆ ಆಗಿರುವುದು ನಿಜ.ಆದರೆ ಸದ್ಯ ನಾನು ನ.30ರ ತನಕ ರಜೆಯಲ್ಲಿ ಇದ್ದೇನೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ಡಾ.ಪ್ರಸನ್ನ ಕುಮಾರ್ ಹೆಬ್ಬಾರ್ ಪುತ್ತೂರಿಗೆ: ಬಡಕ್ಕೋಡಿ ಮತ್ತು ನರಿಮೊಗರು ವ್ಯಾಪ್ತಿಯ ಪಶು ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಪುತ್ತೂರು ಎಪಿಎಂಸಿ ರಸ್ತೆಯ ನಿವಾಸಿ ಡಾ.ಪ್ರಸನ್ನ ಕುಮಾರ್ ಹೆಬ್ಬಾರ್ ಪುತ್ತೂರು ಪಶುಸಂಗೋಪನಾ ಇಲಾಖೆಯ ಆಡಳಿತ ವೈದ್ಯಾಧಿಕಾರಿಯಾಗಿ ನೇಮಕಗೊಂಡು ವರ್ಗಾವಣೆಗೊಂಡು ಅಧಿಕಾರ ವಹಿಸಿಕೊಂಡಿದ್ದಾರೆ.ಪಾಣಾಜೆ ಪಶುವೈದ್ಯಾಧಿಕಾರಿ ಡಾ.ಪ್ರಕಾಶ್ ಅವರು ಬಡಕ್ಕೋಡಿ ಮತ್ತು ನರಿಮೊಗರು ಪ್ರಭಾರ ವಹಿಸಿಕೊಳ್ಳಲಿದ್ದಾರೆ. 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.