HomePage_Banner
HomePage_Banner
HomePage_Banner

ದೋಳ್ಪಾಡಿ ಗ್ರಾಮವನ್ನು ಕಸ್ತೂರಿ ರಂಗನ್ ವರದಿಯ ಯೋಜನೆಯಿಂದ ಕೈ ಬಿಡಿ – ಗ್ರಾಮಸ್ಥರಿಂದ ಕಾಣಿಯೂರು ಗ್ರಾಮ ಪಂಚಾಯತ್‌ಗೆ ಮನವಿ

Puttur_Advt_NewsUnder_1
Puttur_Advt_NewsUnder_1

ಚಿತ್ರ: ಸುಧಾಕರ್ ಕಾಣಿಯೂರು

ಕಾಣಿಯೂರು: ಕಸ್ತೂರಿ ರಂಗನ್ ವರದಿ ಆಧಾರದಲ್ಲಿ ಪರಿಸರ ಸೂಕ್ಮ ವಲಯ ಎಂಬ ಯೋಜನೆಯಿಂದ ದೋಳ್ಪಾಡಿ ಗ್ರಾಮವನ್ನು ಕೈಬಿಡಬೇಕೆಂದು ಆಗ್ರಹಿಸಿ ದೋಳ್ಪಾಡಿ ಮಲೆನಾಡು ಜನ ಹಿತ ರಕ್ಷಣಾ ವೇದಿಕೆಯ ವತಿಯಿಂದ ಕಾಣಿಯೂರು ಗ್ರಾ.ಪಂ, ಎದುರು ಗ್ರಾ.ಪಂ, ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಅವರ ಮುಖಾಂತರ ಜಿಲ್ಲಾಧಿಕಾರಿಗೆ ನ ೨೧ರಂದು ಮನವಿ ಸಲ್ಲಿಸಲಾಯಿತು.

ಕಡಬ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಸಂಚಾಲಕ ಧನಂಜಯ ಕೊಡಂಗೆ ಮಾತನಾಡಿ, ತಲೆ ತಲಾಂತರಗಳಿಂದ ತಮ್ಮ ಜೀವನಾಡಿಯಾದ ಕೃಷಿಯನ್ನೇ ತಮ್ಮ ಕುಲಕಸುಬಾಗಿ ಜೀವನ ನಡೆಸುತ್ತಿದ್ದಾರೆ. ಆದರೆ ಕಸ್ತೂರಿ ರಂಗನ್ ಯೋಜನೆ ಜಾರಿಗೊಂಡರೆ ಈ ಭಾಗದ ರೈತರು ಕೃಷಿ ಕೂಲಿ ಕಾರ್ಮಿಕರು ಹಾಗೂ ಎಲ್ಲಾ ನಾಗರೀಕರು ಅತಂತ್ರಗೊಂಡು ನಿರ್ಗತಿಕರಾಗುವ ಆತಂತಕ್ಕೆ ಒಳಗಾಗುತ್ತಾರೆ. ವರದಿಯ ಪ್ರಕಾರ ದೋಳ್ಪಾಡಿ ಗ್ರಾಮವು ಕೂಡ ಇದರ ವ್ಯಾಪ್ತಿಗೆ ಒಳಪಟ್ಟಿದೆ ಎಂದ ಅವರು ಈ ಬಗ್ಗೆ ನಾವು ಈಗಾಗಲೇ ವಿರೋಧ ವ್ಯಕ್ತ ಪಡಿಸಿ ಪಂಚಾಯತ್ ಮಟ್ಟ ಹಾಗೂ ತಾಲೂಕು ಮಟ್ಟದಲ್ಲಿ ಪ್ರತಿಭಟನೆಯನ್ನು ೨೦೧೫ರಲ್ಲಿ ನಡೆಸಿದ ಪರಿಣಾಮ ವಿಶೇಷ ಗ್ರಾಮ ಸಭೆಯನ್ನು ಕರೆದು ಕಸ್ತೂರಿ ರಂಗನ್ ವರದಿಯ ಬಗ್ಗೆ ಗ್ರಾಮ ಸಭೆಯ ಜನರ ಅಭಿಪ್ರಾಯವನ್ನು ನಿರ್ಣಯಿಸಿ ವರದಿ ಮಾಡಲು ಸರಕಾರ ಆದೇಶಿಸಿತು.  ಆ ಪ್ರಕಾರ ದೋಳ್ಪಾಡಿ ಗ್ರಾಮದಲ್ಲಿ ಕೂಡ ಕಸ್ತೂರಿ ರಂಗನ್ ವರದಿಯ ಬಗ್ಗೆ ವಿಶೇಷ ಗ್ರಾಮ ಸಭೆಯನ್ನು ೨೦೧೫ರಲ್ಲಿ ಜನರ ನಿರ್ಣಯವನ್ನು ಪಡೆಯಲಾಗಿತ್ತು. ಆದರೆ ಇದೀಗ ಮತ್ತೆ ಕಸ್ತೂರಿ ರಂಗನ್ ವರದಿಯು ಜಾರಿಯಾಗುತ್ತಿದ್ದು, ಈ ಯೋಜನೆಯಿಂದ ದೋಳ್ಪಾಡಿ ಗ್ರಾಮವನ್ನು ತಕ್ಷಣ ಕೈ ಬಿಡಬೇಕೆಂದು ಹೇಳಿದರು.

ಈ ಸಂರ್ಭದಲ್ಲಿ ದೋಳ್ಪಾಡಿ ಮಲೆನಾಡು ಜನ ಹಿತ ರಕ್ಷಣಾ ವೇದಿಕೆಯ ಅಧ್ಯಕ್ಷ ಸೀತಾರಾಮ ಗೌಡ ಮರಕ್ಕಡಗುತ್ತು, ಮೋಹನ್‌ದಾಸ್ ರೈ ಬಲ್ಕಾಡಿ, ಲಿಂಗಪ್ಪ ಗೌಡ ಕೂರೇಲು, ರಾಜೇಶ್ ಮರಕ್ಕಡ, ವೆಂಕಪ್ಪ ಪರವ, ಲೋಕಯ್ಯ ಪರವ, ಕಮಲ ಅಕ್ಕಾಜೆ, ಲಲಿತಾ ಮರಕ್ಕಡ ಮತ್ತಿತರರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.