HomePage_Banner
HomePage_Banner
HomePage_Banner

ಕಾಣಿಯೂರಿನಲ್ಲಿ ಶ್ರೀ ಮಾನ್ಯ ಡ್ರೆಸ್ಸಸ್ ಶುಭಾರಂಭ

Puttur_Advt_NewsUnder_1
Puttur_Advt_NewsUnder_1

ಚಿತ್ರ: ಸುಧಾಕರ್ ಕಾಣಿಯೂರು


ಕಾಣಿಯೂರು: ಸದಾ ನಗುಮುಖದ ಸೇವೆಯಿಂದ ಉದ್ಯಮಿ ಯಶಸ್ವಿಯಾಗಲು ಸಾಧ್ಯ. ನೂತನವಾಗಿ ಶುಭಾರಂಭಗೊಂಡಿರುವ ಸಂಸ್ಥೆಯು ಕಾಣಿಯೂರು ಪರಿಸರದ ಎಲ್ಲಾ ಜನತೆಗೆ ಉತ್ತಮ ಸೇವೆ ನೀಡುವುದರ ಜೊತೆಗೆ ಹೆಚ್ಚಿನ ಅಭಿವೃದ್ಧಿ ಹೊಂದಿ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ತರುವಂತಾಗಲಿ ಎಂದು ದೈವದ ಮಧ್ಯಸ್ಥರಾದ ಶಶಾಂಕ್ ನೆಲ್ಲಿತ್ತಾಯ ಹೇಳಿದರು. ಅವರು ಕಾಣಿಯೂರಿನ ಸಮೃದ್ಧಿ ಕಾಂಪ್ಲೆಕ್ಸ್‌ನಲ್ಲಿ ನ 21ರಂದು ನೂತನವಾಗಿ ಶುಭಾರಂಭಗೊಂಡಿರುವ ಶ್ರೀ ಮಾನ್ಯ ಡ್ರೆಸ್ಸಸ್ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿದರು. ಅರ್ಚಕರಾದ ಸುಬ್ರಹ್ಮಣ್ಯ ಉಪಾಧ್ಯಾಯ ಬೊಬ್ಬೆಕೇರಿಯವರ ನೇತೃತ್ವದಲ್ಲಿ ಗಣಹೊಮ ಮತ್ತು ಧನಲಕ್ಷ್ಮೀ ಪೂಜೆ ನಡೆಯಿತು.

ಕಾಣಿಯೂರು ಸಮೃದ್ಧಿ ಕಾಂಪ್ಲೇಕ್ಸ್‌ನ ಮಾಲಕರು, ಕುಮಾರ್ ಕ್ಲಿನಿಕ್‌ನ ಡಾ| ಉದಯ ಕುಮಾರ್ ಅತಿಥಿಗಳಾಗಿ ಭಾಗವಹಿಸಿದ್ದರು. ಕೆಲಂಬೀರಿ ಗರಡಿಯ ಆಡಳಿತ ಸಮಿತಿ ಅಧ್ಯಕ್ಷ ಉಮೇಶ್ ಕೆ.ಎನ್, ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶೋಕ್ ಗೌಡ, ಕಾಣಿಯೂರು ರಾಶಿ ಕಾಂಪ್ಲೆಕ್ಸ್‌ನ ಮಾಲಕ ಚಂದ್ರಶೇಖರ ಬರೆಪ್ಪಾಡಿ, ನಾಗರಾಜ್ ಕಜೆ ಬೆಟ್ಟಂಪಾಡಿ, ಕಾರ್ತಿಕ್ ಆಂದ್ರಟ್ಟ, ಶೀನಪ್ಪ ಗೌಡ ಹುದೇರಿ, ಬಾಬು ಗೌಡ ಆನೆಮಜಲು, ಅಬ್ದುಲ್ ರಹಿಮಾನ್ ಬೈತಡ್ಕ, ಸಂದೀಪ್ ಆನೆಮಜಲು, ಕಮಲ ಜೈನರಗುರಿ ಸೇರಿದಂತೆ ಹಲವಾರು ಮಂದಿ ನೂತನ ಸಂಸ್ಥೆಗೆ ಆಗಮಿಸಿ ಶುಭಹಾರೈಸಿದರು. ಸಂಸ್ಥೆಯ ಮಾಲಕರಾದ ಸವಿತಾ ಹೇಮಚಂದ್ರರವರು ಅತಿಥಿಗಳನ್ನು ಸ್ವಾಗತಿಸಿ, ನಮ್ಮಲ್ಲಿ ಅತ್ಯಾಕರ್ಷಕ ವಿವಿಧ ವಿನ್ಯಾಸಗಳ ಬಟ್ಟೆಗಳ ಅಮೋಘ ಸಂಗ್ರಹವಿದ್ದು, ಸ್ಪರ್ಧಾತ್ಮಕ ದರಗಳಲ್ಲಿ ದೊರೆಯುತ್ತದೆ ಎಂದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.