HomePage_Banner
HomePage_Banner
HomePage_Banner

ಹಿಂದೂ ದೇವಿ ದೇವತೆಗಳ ಅವಹೇಳನ | ಹಿಂಜಾವೇಯಿಂದ ವಿಟ್ಲ ಠಾಣೆಗೆ ದೂರು – ಪ್ರಕರಣ ದಾಖಲು

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಹಿಂದೂ ದೇವಿ ದೇವತೆಗಳನ್ನು ಅವಹೇಳನ ಮಾಡುವ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟ ಕಂಬಳಬೆಟ್ಟುವಿನ ವ್ಯಕ್ತಿಯೊಬ್ಬರ ವಿರುದ್ಧ ಹಿಂದೂ ಜಾಗರಣಾ ವೇದಿಕೆ ವಿಟ್ಲ ಪೊಲೀಸರಿಗೆ ದೂರು ನೀಡಿದ್ದಾರೆ. ಕಂಬಳಬೆಟ್ಟುವಿನ ರಿಜ್ವಾನ್ ಎಂಬವರು ಹಿಂದೂ ದೇವಿ ದೇವತೆಗಳನ್ನು ಅವಹೇಳನ ಮಾಡುವ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹರಿಯಬಿಟ್ಟು ಕೋಮುಗಲಭೆ ವಾತಾವಣ ಸೃಷ್ಟಿ ಮಾಡುತ್ತಿರುವ ಹುನ್ನಾರ ನಡೆಸಿದ್ದಾರೆ. ಹಿಂದೂ ದೇವರನ್ನು, ಹಿಂದೂ ಶಬ್ದಗಳನ್ನು ಉಲ್ಲೇಖಿಸಿ ಅವಹೇಳನ ಮಾಡಿರುವ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಹರಿಯುತ್ತಿದ್ದು, ಈ ಕುರಿತು ಹಿಂದೂಜಾಗರಣಾ ವೇದಿಕೆಯ ವಿಟ್ಲ ತಾಲೂಕು ಕಾರ್ಯದರ್ಶಿ ಹರ್ಷೇಂದ್ರ ಅವರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ಸ್ವೀಕರಿಸಿದ ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ಸಂದರ್ಭದಲ್ಲಿ ಹಿಂಜಾವೇ ಪುತ್ತೂರು ಜಿಲ್ಲಾ ಸಂಪರ್ಕ ಪ್ರಮುಖ್ ನರಸಿಂಹ ಮಾಣಿ, ವಿಟ್ಲ ಉಪಾಧ್ಯಕ್ಷ ರಾಜೇಶ್ ಕರೋಪಾಡಿ, ಚೇತನ್ ಕಡಂಬು ಮತ್ತಿತರರು ಉಪಸ್ಥಿತರಿದ್ದರು.

ತಕ್ಷಣ ಬಂಧನಕ್ಕೆ ಆಗ್ರಹ:
ಹಿಂದೂ ದೇವಿ ದೇವತೆಗಳಿಗೆ ಅವಹೇಳನಕಾರಿಯಾಗಿ ನಿಂಧಿಸಿದ ರಿಜ್ವಾನ್‌ನನ್ನು ತಕ್ಷಣ ಬಂಧಿಸಿ ಸೂಕ್ತ ಕಾನುನು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಉಗ್ರವಾದ ಪ್ರತಿಭಟನೆ ಜಿಲ್ಲೆಯಾದ್ಯಂತ ನಡೆಯಲಿದೆ ಎಂದು ಹಿಂಜಾವೇ ಪುತ್ತೂರು ಜಿಲ್ಲಾ ಸಂಪರ್ಕ ಪ್ರಮುಖ್ ನರಸಿಂಹ ಮಾಣಿ ಅವರು ಆಗ್ರಹಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.