HomePage_Banner
HomePage_Banner
HomePage_Banner

ಫಿಲೋಮಿನಾ ಪ್ರೌಢಶಾಲೆಯಲ್ಲಿ ಎನ್‌ಸಿಸಿ ಡೇ ದಿನಾಚರಣೆ – ಸನ್ಮಾನ ಪ್ರತಿಭಾ ಪುರಸ್ಕಾರ

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಪುತ್ತೂರು ಸಂತ ಫಿಲೋಮಿನಾ ಅನುದಾನಿತ ಪ್ರೌಢಶಾಲೆಯಲ್ಲಿ ಎನ್‌ಸಿಸಿ ಡೇ ದಿನಾಚರಣೆಯನ್ನು ಕೋವಿಡ್‌ನ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಎನ್‌ಸಿಸಿಯಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಹಾಗೂ ಎನ್‌ಸಿಸಿಯಲ್ಲಿ ತೊಡಗಿಸಿಕೊಂಡು ಎಸ್‌ಎಲ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ಶಾಲಾ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶಾಲಾ ಸಂಚಾಲಕರು ಮಾಯಿದೆ ದೇವುಸ್ ಚರ್ಚಿನ ಪ್ರಧಾನ ಗುರುಗಳಾದ ರೇ. ಫಾ.| ಜೆರೋಮ್ ಲಾರೆನ್ಸ್ ಮಸ್ಕರೇನಸ್‌ರವರು ಮಾತನಾಡಿ ಎನ್‌ಸಿಸಿ ಶಿಸ್ತುಬದ್ದ ಜೀವನ ನಮ್ಮನ್ನು ಭಾವಿ ಭವಿಷ್ಯದ ಕಡೆಗೆ ಕೊಂಡಯ್ಯಲಿದೆ. ವಿದ್ಯಾರ್ಥಿಗಳು ಎನ್‌ಸಿಸಿಯಲ್ಲಿ ತೊಡಗಿಸಿಕೊಳ್ಳುವ ಮೂಲಕ ದೇಶದ ರಕ್ಷಣೆಗಾಗಿ ಮುಂದೆ ಬರುವ ಅವಶ್ಯಕತೆಯಿದೆ ಎಂದು ಅವರು ಹೇಳಿದರು. ನಾವು ಪರಸ್ಪರ ಸ್ನೇಹ, ಪ್ರೀತಿ, ವಿಶ್ವಾಸದ ಮೂಲಕ ಇನ್ನೊಬ್ಬರ ಮನ್ನಸ್ಸನ್ನು ಗೆಲ್ಲುವಂತಾಗಬೇಕು ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಫಿಲೋಮಿನಾ ಅನುದಾನಿತ ಪ್ರೌಢಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎನ್. ಕೆ. ಜಗನ್ನಿವಾಸ್ ರಾವ್, ಮಾಯಿದೆ ದೇವುಸ್ ಚರ್ಚ್ ಆಡಳಿತ ಮಂಡಳಿಯ ಉಪಾಧ್ಯಕ್ಷ ಮೌರಿಸ್ ಮಸ್ಕರೇನಸ್, ಶಾಲಾ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷ ಲ್ಯಾನ್ಸಿ ಮಸ್ಕರೇನಸ್, ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ವಿಭಾಗದ ಉಪನ್ಯಾಸಕ ರೇ. ಫಾ| ಅಶೋಕ್ ಕ್ರಾಸ್ತಾ, ರೇ. ಫಾ| ಸುನಿಲ್ ಡಿಸೋಜ, ಫಿಲೋಮಿನಾ ಹಿರಿಯ ಪ್ರಾಥಮಿಕ ಶಾಲಾ ಮುಖ್ಯಗುರು ಸಿಸ್ಟರ್ ಲೋರಾ ಅತಿಥಿಗಳಾಗಿ ಆಗಮಿಸಿದ್ದರು.


ವೇದಿಕೆಯಲ್ಲಿ ಫಿಲೋಮಿನಾ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಜೋನ್ ಕುಟಿನ್ಹಾ, ಕಾರ್‍ಯದರ್ಶಿ ರಿಚರ್ಡ್ ವೇಗಸ್, ಲಾರೆನ್ಸ್ ಗೋನ್ಸ್‌ಲಾರಿಸ್, ಜಯಕುಮಾರ್ ರೈ ಎಮ್. ಆರ್, ಜೀವನ್ ದಾಸ್ ರೈ, ಫಿಲೋಮಿನಾ ಶಾಲಾ ಮುಖ್ಯ ಗುರು ಲಿಯೋ ನಿಲ್ಲಾ ವೇಗಸ್ ಮೊದಲಾದವರು ಉಪಸ್ಥಿತರಿದ್ದರು.

ಸನ್ಮಾನ : ಶಾಲಾ ಹಳೆ ವಿದ್ಯಾರ್ಥಿಯಾಗಿದ್ದು ದೆಹಲಿಯಲ್ಲಿ ನಡೆದ ಎನ್‌ಸಿಸಿ ಪೆರಡ್‌ನಲ್ಲಿ ಭಾಗವಹಿಸಿ ಶಾಲೆಗೆ ಕೀರ್ತಿ ತಂದ ಚೇತನ್ ಹಾಗೂ ಫಿಲೋಮಿನಾ ಕಾಲೇಜಿನ ಎನ್‌ಸಿಸಿ ಅಧಿಕಾರಿಯಾಗಿರುವ ಲೆಪ್ಟಿನೆಂಟ್ ಜಾನ್ಸನ್ ಸಿಕ್ವೇರಾ ಮತ್ತು ನಿವೃತ್ತ ಎನ್‌ಸಿಸಿ ಅಧಿಕಾರಿಯಾಗಿರುವ ಲೂಯಿಸ್ ಮಸ್ಕರೇನಸ್ ಇದೇ ಸಂದರ್ಭದಲ್ಲಿ ಶಾಲಾ ಸಂಚಾಲಕರಾದ ರೇ ಫಾ.| ಜೆರೋಮ್ ಲಾರೆನ್ಸ್ ಮಸ್ಕರೇನಸ್‌ರವರು ಶಾಲು ಹೊದಿಸಿ ಸನ್ಮಾನಿಸಿದರು.

ಪ್ರತಿಭಾ ಪುರಸ್ಕಾರ : ಶಾಲೆಯ ವಿದ್ಯಾರ್ಥಿಯಾಗಿದ್ದು ಎನ್‌ಸಿಸಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಕಳೆದ ಎಸ್‌ಎಲ್‌ಸಿಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಿ ಶಾಲೆಗೆ ಕೀರ್ತಿ ತಂದ ವಿಶಾಲ್ ಪ್ರಭು, ಅದ್ವೀತ್ ರೈ, ಅನನ್ಯ ಕೆ, ಮೃದುಲ್ ಮಸ್ಕರೇನಸ್, ಬೆನ್ಹರ್ ಜೆರೋಮ್ ವೇಗಸ್, ಅಶ್ವಿನಿ ಕೆ, ಜೇಷ್ಟನ್ ಮಿನೇಜಸ್, ಪ್ರಣಮ್ ಜಿ. ಎಸ್, ಜೆನೀಸ್, ನಂದನ, ವಿಕ್ರಂ ಚಂದ್ರ, ರೋಹನ್ ಎಲ್. ಕೆ, ಹೇಡನ್ ಆಂಟನ್, ಪ್ರಣೀಲ್ ಮಸ್ಕರೇನಸ್‌ರವರರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಫಿಲೋಮಿನಾ ಪ್ರೌಢಶಾಲೆಯ ಎನ್‌ಸಿಸಿ ಹೇರ್‌ಪೋರ್ಸ್‌ನ ದ್ವಿತೀಯ ಅಧಿಕಾರಿ ರೋಶನ್ ಸಿಕ್ವೇರಾ ಕಾರ್ಯಕ್ರಮ ನಿರ್ವಹಿಸಿದರು. ಫಿಲೋಮಿನಾ ಪ್ರೌಢಶಾಲಾ ಎನ್‌ಸಿಸಿ ನೇವಿ ವಿಭಾಗದ ದ್ವಿತೀಯ ಅಧಿಕಾರಿ ಕ್ಲೈಮೆಂಟ್ ಪಿಂಟೋ ಸ್ವಾಗತಿಸಿದರು. ಆರ್ಮಿ ವಿಭಾಗದ ಪ್ರಥಮ ಅಧಿಕಾರಿ ಪೀಟರ್ ನರೇಶ್ ಲೊಗೋ ವಂದಿಸಿದರು. ಶಿಕ್ಷಕರಾದ ರೇಶ್ಮಾ ಮೇರಿ ರೆಬೆಲ್ಲೊ, ಮೋಲಿ ಪೆರ್ನಾಂಡೀಸ್, ಪ್ರಸನ್ನ ಕುಮಾರಿ, ಕಾರ್ಮಿನ್ ಪಾಯಸ್, ಜೋಸೆಫ್ ಡಿಮೆಲೊ, ರಾಜಶೇಖರ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.