HomePage_Banner
HomePage_Banner
HomePage_Banner

ನ.24: ಕಸ್ತೂರಿ ರಂಗನ್ ವರದಿ ಅನುಷ್ಠಾನ ವಿರುದ್ಧ ಕಡಬದಲ್ಲಿ ಬೃಹತ್ ಪ್ರತಿಭಟನೆ

Puttur_Advt_NewsUnder_1
Puttur_Advt_NewsUnder_1

ಕಡಬ: ಸರಕಾರ ಅನುಷ್ಠಾನ ಮಾಡಲು ಉದ್ದೇಶಿಸಿರುವ ಕಸ್ತೂರಿ ರಂಗನ್ ವರದಿ ವಿರುದ್ಧ ನ.24ರಂದು ಕಡಬದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಜಿಲ್ಲಾ ಪರಿಷತ್ ಮಾಜಿ ಸದಸ್ಯ ಸಯ್ಯದ್ ಮೀರಾ ಸಾಹೇಬ್ ತಿಳಿಸಿದರು.

ಅವರು ನ.೨೧ರಂದು ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಕಡಬದ ಹದಿನೈದಕ್ಕೂ ಹೆಚ್ಚು ಸಂಘಟನೆಗಳ ಆಶ್ರಯದಲ್ಲಿ ಕಡಬ ಮೇಲಿನ ಪೇಟೆಯಿಂದ ಕಾಲ್ನಡಿಗೆ ಜಾಥಾದಲ್ಲಿ ಸಾಗಿ ಕಡಬ ತಾಲೂಕು ಕಛೇರಿ ಎದುರು ಪ್ರತಿಭಟನೆ ನಡೆಸಲಾಗುವುದು, ಬಳಿಕ ತಹಶಿಲ್ದಾರ್ ಮುಖಾಂತರ ಮನವಿ ಸಲ್ಲಿಸುವ ಕಾರ್ಯ ನಡೆಯಲಿದೆ ಎಂದರು. ಬಹಳ ವರ್ಷದಿಂದ ಕಸ್ತೂರಿ ರಂಗನ್ ವರದಿಯ ಗುಮ್ಮವನ್ನು ರೈತರ ಮೇಲೆ ಕೂರಿಸಲಾಗುತ್ತಿದೆ. ಒಂದು ವೇಳೆ ವರದಿ ಅನುಷ್ಠಾನವಾದರೆ ಬಾಧಿತ ಪ್ರದೇಶಗಳ ಜನರ ಕೃಷಿ ಭೂಮಿ ಸಂಪೂರ್ಣ ಅರಣ್ಯ ಇಲಾಖೆಯ ವಶವಾಗಲಿದೆ, ಅದಕ್ಕೆ ಸೂಕ್ತ ಪರಿಹಾರ ಏನೆಂಬುದು ಇನ್ನು ನಿಗದಿಯಾಗಿಲ್ಲ. ಭೂಮಿ ಕಳೆದುಕೊಳ್ಳುವ ಕುಟುಂಬಗಳಿಗೆ ಯಾವುದೇ ಪುನರ್‌ವಸತಿ ಘೋಷಣೆಯಾಗಿಲ್ಲ. ಈಗಾಗಲೇ ಕೆಲವೆಡೆ ಅರಣ್ಯ ಭಾಗದ ಸರಕಾರಿ ಭೂಮಿಯಲ್ಲಿ ವಾಸಿಸುತ್ತಿರುವವರನ್ನು ಒಕ್ಕಲೆಬ್ಬಿಸಲಾಗಿದೆ, ಈ ಭಾಗದಲ್ಲಿ ವಾಸಿಸುವ ಜನರಿಗೆ ಯಾವುದೇ ಮೂಲಭೂತ ಸೌಲಭ್ಯಗಳನ್ನು ನೀಡದೆ, ಅವರೇ ಬಿಟ್ಟು ಹೋಗುವಂತೆ ಮಾಡಲಾಗುತ್ತದೆ. ಕೋವಿ ಪರವಾನಿಗೆ ನೀಡುವುದನ್ನು ರದ್ದುಗೊಳಿಸಲಾಗುತ್ತದೆ. ಈಗಾಗಲೇ ಭೂಮಿಯ ಹಕ್ಕುಪತ್ರ ನೀಡಿದ್ದರೆ ಅದು ತಾನಾಗಿಯೇ ರದ್ದಾಗುತ್ತದೆ ಈ ಹಿನ್ನೆಲೆಯಲ್ಲಿ ಭಾದಿತ ಗ್ರಾಮಗಳಾದ ಕಡಬ ತಾಲೂಕಿನ ಗೋಳಿತೊಟ್ಟು, ಆಲಂತಾಯ. ಕೌಕ್ರಾಡಿ, ಬಲ್ಯ, ಇಚಿಲಂಪಾಡಿ, ದೋಳ್ಪಾಡಿ, ಶೀರಾಡಿ, ಸಿರಿಬಾಗಿಲು, ಕೊಂಬಾರು, ಬಿಳಿನೆಲೆ, ಕೊಣಾಜೆ, ಬಳ್ಪ, ಏನೆಕಲ್ಲು, ಸುಬ್ರಹ್ಮಣ್ಯ ಐನೆಕಿದು ಗ್ರಾಮಗಳಿಗೆ ಸಂಬಂಧಪಟ್ಟಂತೆ ಆಯಾ ಗ್ರಾಮ ಪಂಚಾಯಿತಿಗಳಲ್ಲಿ ಮನವಿ ಸಲ್ಲಿಸುವ ಕಾರ್ಯ ಮಾಡಲಾಗಿದೆ. ಮಂದಿನ ಹಂತವಾಗಿ ತಾಲೂಕು ಕಛೇರಿಯಲ್ಲಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಪ್ರತಿಭಟನೆಯಲ್ಲಿ ಮಲೆನಾಡು ಜನಹಿತರಕ್ಷಣಾ ವೇದಿಕೆಯ ಸಂಚಾಲಕ ಕಿಶೋರ್ ಶಿರಾಡಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಪಿ.ಪಿ.ವರ್ಗೀಸ್, ಸರ್ವೋತ್ತಮ ಗೌಡ, ಆಶಾ ತಿಮ್ಮಪ್ಪ ಗೌಡ, ಮಾಜಿ ಸದಸ್ಯ ಕೃಷ್ಣ ಶೆಟ್ಟಿ ಕಡಬ ಮತ್ತಿತರ ಪ್ರಮುಖರು ಭಾಗವಹಿಸಲಿದ್ದಾರೆ ಎಂದು ಮೀರಾ ಸಾಹೇಬ್ ವಿವರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಲೆನಾಡು ಜನಹಿತರಕ್ಷಣಾ ವೇದಿಕೆಯ ಕಡಬ ತಾಲೂಕು ಸಂಚಾಲಕ ಧನಂಜಯ ಕೊಡಂಗೆ, ಕೇಂದ್ರ ಸಮಿತಿ ಪ್ರಮುಖ್ ತು.ಚಂದ್ರಶೇಖರ ಮರ್ದಾಳ , ಎಐಎಮ್‌ಡಿಎಫ್ ಕಡಬ ತಾಲೂಕು ಅಧ್ಯಕ್ಷ ಕೆ.ಎಂ.ಹನೀಫ್, ದಲಿತ ಸಂಘರ್ಷ ಸಮಿತಿಯ ಕಡಬ ತಾಲೂಕು ಅಧ್ಯಕ್ಷ ವಸಂತ ಕುಬಲಾಡಿ, ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಕಡಬ ತಾಲೂಕು ಅಧ್ಯಕ್ಷ ಮೊದ್ದೀನ್ ಪೊರಂತು, ಮಲೆನಾಡು ಜನ ಹಿತರಕ್ಷಣಾ ವೇದಿಕೆಯ ತಾಲೂಕು ಸಮಿತಿ ಪ್ರಮುಖ್ ಮಹಮ್ಮದ್ ಆಲಿ ಮತ್ತಿತರರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.