HomePage_Banner
HomePage_Banner

ಮೆಡಿಕಲ್ ಕಾಲೇಜಿನ ಜಾಗ ಟಚ್ ಮಾಡಿದ್ದಕ್ಕೆ ನನ್ನ ವಿರೋಧ – ಪುತ್ತೂರಿಗೆ ಸೀ ಪುಡ್ ಪಾರ್ಕ್ ಬರಲೇ ಬಾರದು ಎನ್ನುವುದು ಮೂರ್ಖತನದ ಕೆಲಸ ನಗರಸಭೆ ಮಾಜಿ ವಿಪಕ್ಷ ನಾಯಕ ಹೆಚ್.ಮಹಮ್ಮದಾಲಿ ಪತ್ರಿಕಾಗೋಷ್ಠಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಬಿಜೆಪಿಗೂ ನಮಗೂ ಸೈದಾಂತಿಕ ವಿರೋಧ ಮತ್ತು ಭಿನ್ನಾಭಿಪ್ರಾಯವಿದೆ. ಆದರೆ ಅಭಿವೃದ್ಧಿಗೆ ನಾವು ಭಿನ್ನಾಭಿಪ್ರಾಯ ಮಾಡಬಾರದು. ಅದೇ ರೀತಿ ಮೆಡಿಕಲ್ ಕಾಲೇಜಿಗೆ ಇಟ್ಟಂತಹ ಜಾಗವನ್ನು ಟಚ್ ಮಾಡಿದ್ದಕ್ಕೆ ನನ್ನ ವಿರೋಧ ವಿದೆ. ಒಂದು ವೇಳೆ ಮಡಿಕಲ್ ಕಾಲೇಜು ಬರುವಾಗ ತಡ ಆಗುತ್ತದೆ ಎಂದರೆ ಬೇರೆ ಜಾಗ ನೋಡಿ ಕಾದಿರಿಸಬೇಕು. ಸೀಪುಡ್ ಪಾರ್ಕ್ ಬರಲೇ ಬಾರದು ಎಂದು ಹೇಳುವುದು ಮಾತ್ರ ಮೂರ್ಖತನದ ಕೆಲಸ ಎಂದು ಪುತ್ತೂರು ನಗರಸಭೆ ಮಾಜಿ ವಿಪಕ್ಷ ನಾಯಕರಾಗಿರುವ ಆರ್ಯಾಪು ಪಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಹೆಚ್.ಮಹಮ್ಮದ್ ಆಲಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಸೀ ಪುಡ್ ಪಾರ್ಕ್ ಯೋಜನೆ ಬಗ್ಗೆ ಬಹಳಷ್ಟು ವಿವಾದ ಎದ್ದಿದೆ. ಈ ಯೋಜನೆಯ ಕುರಿತು ವಿರೋಧಿಸುವವರಿಗೆ ಮತ್ತು ಅದರ ಪರವಾಗಿ ಮಾತನಾಡುವವರಿಗೆ ಈ ಯೋಜನೆ ಕುರಿತು ಅರಿವಿಲ್ಲ. ನಾವು ಕೂಡಾ ಮೆಡಿಕಲ್ ಕಾಲೇಜು ಖಾದಿರಿಸಿದ ಜಾಗವನ್ನು ಸೀ ಪುಡ್ ಪಾರ್ಕ್‌ಗೆ ಬದಲಾಯಿಸುತ್ತಿರುವುದಕ್ಕೆ ವಿರೋಧ ವ್ಯಕ್ತಪಡಿಸುತ್ತೇವೆ ಹೊರತು ಸೀ ಪುಡ್ ಪಾರ್ಕ್ ಪುತ್ತೂರಿಗೆ ಬರುವುದೇ ಬೇಡ ಎಂಬುದರ ಕುರಿತು ವಿರೋಧಿಸುವುದು ಅಷ್ಟೊಂದು ಸರಿಯಲ್ಲ ಎಂದರು. ಸೀ ಪುಡ್ ಪಾರ್ಕ್‌ನ ಬಗ್ಗೆ ಯಾರು ವಿರೋಧ ಮಾಡುತ್ತಿರುವವರನ್ನು ಮತ್ತು ಸಾರ್ವಜನಿಕರನ್ನು ಕರೆಸಿ ಕಾರ್ಯಗಾರ ನಡೆಸಿ ಅರಿವು ಮೂಡಿಸುವ ಕೆಲಸವನ್ನು ಇವತ್ತು ಶಾಸಕರು ಮಾಡಿ ಸಾರ್ವಜನಿಕರ ಗೊಂದಲ ನಿವಾರಣೆ ಮಾಡಬೇಕು. ಈ ಹಿಂದಿನ ಪುತ್ತೂರಿನ ಶಾಸಕಿಯಾಗಿದ್ದಂತಹ ಶಕುಂತಳಾ ಶೆಟ್ಟಿಯವರು ಪುತ್ತೂರಿನ ಅಭಿವೃದ್ಧಿಗೆ ಪೂರಕವಾಗಿ ಮೆಡಿಕಲ್ ಕಾಲೇಜಿನನ್ನು ಪುತ್ತೂರಿನ ಬನ್ನೂರು ಗ್ರಾಮದ ಸೇಡಿಯಾಪಿನಲ್ಲಿ ಜಾಗ ಕಾಯ್ದಿರಿಸಿದ್ದರು. ಇವತ್ತು ಅದೇ ಸ್ಥಳದಲ್ಲಿ ಸೀ ಪುಡ್ ಪಾರ್ಕ್ ಯೋಜನೆ ಮಾಡುವುದನ್ನು ಬಿಟ್ಟು ಇತರ ಕಡೆ ಜಾಗ ನೋಡಿ ಮಾಡಬಹುದು. ಒಂದು ವೇಳೆ ತಕ್ಷಣಕ್ಕೆ ಯೋಜನೆ ಕಾರ್ಯಗತ ಆಗಬೇಕಾದರೆ ಮೆಡಿಕಲ್‌ಕಾಲೇಜಿಗೆ ಪ್ರಥಮವಾಗಿ ಜಾಗ ಕಾದಿರಿಸಬೇಕು ಎಂದು ಅವರು ಹೇಳಿದರು.

ಸೀ ಪುಡ್‌ಪಾರ್ಕ್ ಬಂದರೆ ಸಾಕಷ್ಟು ಅಭಿವೃದ್ಧಿ:
ಹಲವಾರು ಯೋಜನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೋಡಿದ್ದೇವೆ. ಮಂಗಳೂರಿನಲ್ಲಿ ಎಮ್.ಆರ್.ಪಿ.ಎಲ್, ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ನಂದಿಕೂರು ಉಷ್ಣವಿದ್ಯುತ್ ಸ್ಥಾವರಕ್ಕೆ ಬಹಳ ಹೋರಾಟ ನಡೆದಿತ್ತು. ಆದರೆ ಕೊನೆಗೆ ಏನಾಗಿದೆ. ಎಲ್ಲಾ ಯೋಜನೆಗಳು ಅನುಷ್ಠಾನ ಆಗಿದೆ. ಅದೇ ರೀತಿ ಸೀ ಪುಡ್ ಯೋಜನೆ ಪುತ್ತೂರಿಗೆ ಬರುವಾಗ ಸ್ವಾಗತ ಮಾಡಲೇ ಬೇಕು. ಇಂತಹ ಯೋಜನೆ ಬಂದಾಗ ಪುತ್ತೂರು ಸಾಕಷ್ಟು ಅಭಿವೃದ್ಧಿ ಹೊಂದುತ್ತದೆ. ಈಗಾಗಲೇ ಪುತ್ತೂರು ಸಮಗ್ರವಾಗಿ ಅಭಿವೃದ್ದಿಯಾಗಿಲ್ಲ. ಪುತ್ತೂರಿನ ಅಭಿವೃದ್ದಿ ಪೂರಕವಾದ ಯೋಜನೆ ಬಂದಾಗ ಅದರ ವಿರುದ್ಧ ಜನರಲ್ಲಿ ಗೊಂದಲ ಮೂಡಿಸುವ ಕೆಲಸ ಮಡಬಾರದು ಎಂದ ಅವರು ಕಳೆದ ವರ್ಷ ನೇತ್ರಾವತಿ ತಿರುವು ಯೋಜನೆಗೆ ದೊಡ್ಡ ಮಟ್ಟದ ಹೋರಾಟ ನಡೆಯಿತು. ಆದರೆ ಹೋರಾಟ ಏನಾಗಿದೆ. ಈ ಹೋರಾಟದ ನಾಯಕರ ಪತ್ತೆಯೇ ಇಲ್ಲ. ಇಂತಹ ತಾತ್ಕಾಲಿಕ ಹೋರಾಟಗಳು ಈ ಜಿಲ್ಲೆಯಲ್ಲಿ ನಡೆಯುವುದಿಲ್ಲ. ಮತ್ತು ಇಂತಹ ಹೋರಾಟದಲ್ಲಿ ಈ ಜಿಲ್ಲೆಯ ಜನತೆಗೆ ಆಸಕ್ತಿಯೂ ಇಲ್ಲ ಎಂದು ಮಹಮ್ಮದ್ ಆಲಿ ಹೇಳಿದರು.

ಶಾಸಕರಿಗೆ ಇಚ್ಚಾಶಕ್ತಿ ಕೊರತೆ:
ಸೀಪುಡ್ ಪಾರ್ಕ್ ಮಾಡಲು ಸ್ಥಳವಕಾಶದ ಕೊರತೆ ಇದ್ದರಿಂದ ನಾವು ಮೆಡಿಕಲ್ ಕಾಲೇಜಿಗೆ ಮೀಸಲಿಟ್ಟ ಜಾಗವನ್ನು ಸೀಪುಡ್ ಪಾರ್ಕ್‌ಗೆ ರೂಪಿಸಲಾಗಿದೆ ಎಂದು ಶಾಸಕರು ಹೇಳಿರುವುದು ಶಾಸಕರ ಇಚ್ಛಾಶಕ್ತಿ ಕೊರತೆಯನ್ನು ತೋರಿಸುತ್ತದೆ. ಪುತ್ತೂರಿನಲ್ಲಿ ಸಾಕಷ್ಟು ಜಾಗಗಳು ಇದೆ. ಹಲವಾರು ಬಲಾಡ್ಯರು ಹಲವಾರು ಎಕ್ರೆ ಜಾಗವನ್ನು ಕುಮ್ಕಿ ಹಕ್ಕಿನ ಹೆಸರಿನಲ್ಲಿ ಅತಿಕ್ರಮಣ ಮಾಡಿಕೊಂಡಿದ್ದಾರೆ. ಇದು ಕಂದಾಯ ಇಲಾಖೆಗೂ ಗೊತ್ತಿದೆ. ಕಂದಾಯ ಇಲಾಖೆಯ ಮೂಲಕ ಅಂತಹ ಸ್ಥಳವನ್ನು ಸ್ವಾದೀನ ಪಡಿಸಿಕೊಂಡು ಹಲವಾರು ಯೋಜನೆಗಳನ್ನು ಪುತ್ತೂರಿನಲ್ಲಿ ಅನುಷ್ಠಾನ ಮಾಡಲು ಸ್ಥಳ ಕಾಯ್ದಿರಿಸುವಿಕೆ ಕೆಲಸ ಆಗಬೇಕು. ಈ ಹಿಂದೆ ಕೆಮ್ಮಿಂಜೆ ಬೆದ್ರಾಳದಲ್ಲಿ ಮೌಲನ ಅಜಾದ್ ಶಾಲೆ ಮಾಡಲು ಶಾಸಕರು ಹೊರಟು ಕೊನೆಗೆ ಆಕ್ಷೇಪಕ್ಕೆ ಹೆದರಿ ಶಾಲೆಯನ್ನು ಸಾಲ್ಮರದ ಕಡೆ ವರ್ಗಾಯಿಸಿದ್ದಾರೆ. ಅದೇ ರೀತಿಯ ತೀರ್ಮಾಣವನ್ನು ಸೀ ಪುಡ್ ಪಾರ್ಕ್ ಯೋಜನೆಯಲ್ಲಿ ಮಾಡಬಾರದು. ಭಯಪಟ್ಟು ಯೋಜನೆ ಕೈ ಬಿಡುವುದು ಮಾಡಬಾರುದ ಮಹಮ್ಮದ್ ಆಲಿ ಹೇಳಿದರು.

ಯೋಜನೆಯಿಂದ ಶೇ.೯೦ಜನರಿಗೆ ಪ್ರಯೋಜನ:
ಸೀಪುಡ್ ಪಾರ್ಕ್‌ನ ಬಗ್ಗೆ ಕೆಲವರಿಗೆ ಗೊಂದಲ ಇದೆ. ಮೀನು ತಿನ್ನುವರೇ ವಾಸನೆ ಬರುತ್ತದೆ ಎಂದು ಹೇಳುತ್ತಿರುವುದು ಸರಿಯಲ್ಲ. ಕೇರಳದ ಅಲೆಪ್ಪಿಯಲ್ಲಿ ಸೀಪುಡ್ ಪಾರ್ಕ್ ಯಶಸ್ವಿಯಾಗಿ ಕಾರ್ಯಾಚರಿಸುತ್ತದೆ. ಇವತ್ತು ಯಾವುದೇ ಯೋಜನೆ ಬಂದಾಗ ಶೇ.೧೦ ಜನರಿಗೆ ತೊಂದರೆ ಆಗಬಹುದು. ಆದರೆ ಶೇ.೯೦ ಜನರಿಗೆ ಉಪಯೋಗ ಆಗುವ ಯೋಜನೆಯನ್ನು ವಿರೋಧಿಸುವುದು ಸರಿಯಲ್ಲ. ಯೋಜನೆ ಬಗ್ಗೆ ಈ ಭಾಗದ ಜನರಿಗೆ ಭಯವಿದೆ. ಅದನ್ನು ನಿವಾರಣೆ ಮಾಡುವ ಕೆಲಸ ಶಾಸಕರಿಂದ ಆಗಬೇಕು ಎಂದು ಮಹಮ್ಮದ್ ಆಲಿ ಹೇಳಿದರು.

ಕೆಲವರು ಹೋರಾಟ ಮಾಡುವುದು ಪ್ರಚಾರಕ್ಕಾಗಿ:
ಯಾವುದೇ ಯೋಜನೆಗಳು ಬಂದಾಗ ಕೆಲವರು ಹೋರಾಟ ಮಾಡುವುವದು ಸಹಜ. ಅದರೆ ಕೆಲವರ ಹೋರಾಟ ಇದು ಪ್ರಚಾರಕ್ಕಾಗಿ ಮಾತ್ರ. ಈ ಜಿಲ್ಲೆಯ ಜನರನ್ನು ನಂಬಿ ಹೋರಾಟ ಮಾಡಲು ಹೋಗಬಾರದು. ಅಣ್ಣಾ ಹಜಾರೆಯವರ ಹೋರಾಟ ಸಂದರ್ಭ ಪುತ್ತೂರಿನಲ್ಲಿ ಕೂತವರು ಬ್ರೋಕರ್‌ನವರು. ಹಾಗೆ ಎಲ್ಲಾ ಯೋಜನೆಯಲ್ಲಿ ತೊಂದರೆ ಆಗುತ್ತದೆ ಎಂದಾದರೆ ಸುಳ್ಯದಲ್ಲಿ ರಬ್ಬರ್ ಪ್ಯಾಕ್ಟರಿ ಬಂದರೆ ತೊಂದರೆ ಆಗುವುದಿಲ್ಲವಾ ಎಂದು ಪ್ರಶ್ನಿಸಿದರು. ಆರ್ಯಾಪು ಗ್ರಾ.ಪಂ ಮಾಜಿ ಅಧ್ಯಕ್ಷ ಸದಾನಂದ ಶೆಟ್ಟಿ ಕೂರೇಲು, ಸಾಮಾಜಿಕ ಕಾರ್ಯಕರ್ತ ರಾಮಣ್ಣ ನಾಯ್ಕ್ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಸೀ ಪುಡ್‌ಗಿಂತಲೂ ಮೊಬೈಲ್ ಟವರ್‌ನಿಂದಾಗಲಿದೆ ತೊಂದರೆ
ಸೀ ಪುಡ್ ಪಾರ್ಕ್ ಅಥವಾ ಇತರ ಯಾವುದೇ ಯೋಜನೆಗಳಿಂದ ಜನರಿಗೆ ದೊಡ್ಡ ಮಟ್ಟದ ತೊಂದರೆ ಆಗುವುದಿಲ್ಲ. ಸೀ ಪುಡ್ ಪಾರ್ಕ್‌ನಿಂದ ತ್ಯಾಜ್ಯ ಬರುತ್ತದೆ ಎಂದರೆ ಅದರ ತ್ಯಾಜ್ಯ ಗೊಬ್ಬರಕ್ಕೆ ಪ್ರಯೋಜನ ಆಗುತ್ತದೆ. ಇವತ್ತು ದೇಶದಲ್ಲೇ ಅತೀ ದೊಡ್ಡ ಗೋ ಮಾಂಸ ಸಂಸ್ಕರಣ ಘಟಕ ಇದೆ ಅದನ್ನು ವಿರೋಧಿಸದವರು ಇವತ್ತು ಮೀನಿನ ಸಂಸ್ಕರಣಾ ಘಟಕ್ಕೆ ವಿರೋಧ ಮಾಡುವುದು ಸರಿಯಲ್ಲ. ಒಂದು ವೇಳೆ ವಿರೋಧ ಮಾಡುವುದೇ ಅದರೆ ಮೊಬೈಲ್ ಟವರ್‌ಗೆ ವಿರೋಧ ವ್ಯಕ್ತಪಡಿಸಬೇಕು. ಬೇರೆ ಬೇರೆ ಖಾಸಗಿ ಸಂಸ್ಥೆಗಳ ಮೊಬೈಲ್ ಟವರ್‌ನಿಂದ ಹೊರಡುವ ರೇಡಿಯೇಷನ್‌ನಿಂದ ಆಗುವ ತೊಂದರೆ ಸೀ ಪುಡ್‌ನಲ್ಲಿ ಆಗುವುದಿಲ್ಲ. ಮೊಬೈಲ್ ಟವರ್ ಇವತ್ತಿನ ಕಾಲಗಟ್ಟದಲ್ಲಿ ದೊಡ್ಡ ತೊಂದರೆ ಕೊಡಲಿದೆ. -ಹೆಚ್.ಮಹಮ್ಮದ್ ಆಲಿ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.