HomePage_Banner
HomePage_Banner
HomePage_Banner

ಎಸ್ಕೆಎಸ್ಸೆಸ್ಸೆಪ್ ವತಿಯಿಮದ ಅನುಸ್ಮರಣಾ ಸಂಗಮ | ಕೌನ್ಸಿಲ್ ಮೀಟ್, ಸನ್ಮಾನ, ಸದಸ್ಯತ್ವ ಕಾರ್ಡ್ ವಿತರಣೆ

Puttur_Advt_NewsUnder_1
Puttur_Advt_NewsUnder_1
  • ಸಮಸ್ತದ ಸಂದೇಶಗಳನ್ನು ನವ ತಲೆಮಾರಿಗೆ ತಲುಪಿಸುವ ಜವಾಬ್ದಾರಿ ನಮ್ಮ ಮೇಲಿದೆ: ಸತ್ತಾರ್ ಪಂದಲ್ಲೂರ್

  
ಪುತ್ತೂರು: ಎಸ್ಕೆಎಸ್ಸೆಸ್ಸೆಫ್ ಪುತ್ತೂರು ವಲಯದ ವತಿಯಿಂದ ಆಗಲಿದ ಸಮಸ್ತ ನಾಯಕರ ಅನುಸ್ಮರಣಾ ಸಂಗಮ, ಕೌನ್ಸಿಂಗ್ ಮೀಟ್, ಸನ್ಮಾನ, ಸದಸ್ಯತ್ವ ಕಾರ್ಡ್ ವಿತರಣಾ ಕಾರ್ಯಕ್ರಮವು ನ.21ರಂದು ಪುತ್ತೂರು ಬದ್ರಿಯಾ ಮಸೀದಿಯ ಮದರಸ ಹಾಲ್‌ನಲ್ಲಿ ನಡೆಯಿತು. ಮುಖ್ಯ ಭಾಷಣಕಾರರಾಗಿ ಆಗಮಿಸಿದ ಎಸ್ಕೆಎಸ್ಸೆಸ್ಸೆಫ್‌ನ ಕೇಂದ್ರ ಸಮಿತಿ ಕಾರ್ಯದರ್ಶಿ ಸತ್ತಾರ್ ಪಂದಲ್ಲೂರ್ ಕೇರಳ ರವರು ಮಾತನಾಡಿ ಸಮಸ್ತದ ಒಳಿತಿನ ಸಂದೇಶಗಳನ್ನು ಸಮಾಜದ ನವ ತಲೆಮಾರಿಗೆ ತಲುಪಿಸುವ ಮಹತ್ತರ ಜವಾಬ್ದಾರಿ ನಮ್ಮ ಮೇಲಿದ್ದು, ನವ ತಲೆಮಾರು ಕೆಡುಕಿನ ಕಡೆಗೆ ವಾಲದೇ ಒಳಿತಿನ ಹಾದಿಯಲ್ಲಿ ಮುನ್ನಡೆಯಲು ನಾವೂ ಅವರಿಗೆ ಪ್ರೇರಿಪಿಸಬೇಕು ಎಂದು ಅವರು ಹೇಳಿದರು. ಆಧುನಿಕ ಕಾಲದಲ್ಲಿ ಧಾರ್ಮಿಕ ಪ್ರಜ್ಞೆಯೊಂದಿಗೆ ಶೈಕ್ಷಣಿಕ ರಂಗದಲ್ಲಿ ಕ್ರಾಂತಿಕಾರಿ ಮುನ್ನಡೆ ಸಾಧಿಸುವತ್ತ ಗಮನ ಹರಿಸುವುದು ಈಗಿನ ಅತೀ ದೊಡ್ಡ ಅಗತ್ಯತೆಗಳಲ್ಲೊಂದಾಗಿದೆ ಎಂದು ಅವರು ಹೇಳಿದರು.


ಕಾರ್ಯಕ್ರಮವನ್ನು ಪುತ್ತೂರಿನ ಮುದರ್ರೀಸ್ ಅಸ್ಸಯ್ಯದ್ ಅಹ್ಮದ್ ಪೂಕೋಯ ತಂಙಳ್ ರವರು ಉದ್ಘಾಟಿಸಿ ಮಾತನಾಡುತ್ತ ಸಮಸ್ತದ ದಿವ್ಯ ಸಂದೇಶಗಳ ವಿವರಿಸಿ, ಅಗಲಿದ ನಾಯಕರಿಗೆ ಅನುಸ್ಮರಣಾ ಕಾರ್ಯಕ್ರಮ ನಡೆಸಿಕೊಂಡು ಬರುವುದು ಉತ್ತಮ ಬೆಳವಣಿಗೆ, ಇದರಿಂದ ಅವರಿಗೂ ನಮಗೂ ಪರಲೋಕದಲ್ಲಿ ಜಯಶೀಲರಾಗಲಿದ್ದಾರೆ ಎಂದು ಅವರು ಹೇಳಿದರು. ಪುತ್ತೂರು ಎಸ್ಕೆಎಸ್ಸೆಸ್ಸೆಫ್ ವಲಯಾಧ್ಯಕ್ಷ ಮುಹಮ್ಮದ್ ಮುಸ್ಲಿಯಾರ್ ಮುಂಡೋಳೆ ಅಧ್ಯಕ್ಷತೆ ವಹಿಸಿದರು.

ಎಸ್ಕೆಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅನೀಸ್ ಕೌಸರಿ ಅನುಸ್ಮರಣಾ ಭಾಷಣ ಮಾಡಿದರು.ಸಯ್ಯದ್ ಅಕ್ರಮಲಿ ತಂಙಳ್ ಕರಾವಳಿ, ಜಿಲ್ಲಾ ಉಪಾಧ್ಯಕ್ಷ ತಾಜುದ್ಧೀನ್ ರಹ್ಮಾನಿ, ಜಿಲ್ಲಾ ಕಾರ್ಯದರ್ಶಿ ರಶೀದ್ ರಹ್ಮಾನಿ ಶುಭ ಹಾರೈಸಿದರು.


ವೇದಿಕೆಯಲ್ಲಿ ಎಸ್ ಕೆ ಎಸ್ ಎಸ್ ಎಫ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ, ಸಮಸ್ತ ವಿಧ್ಯಾಭ್ಯಾಸ ಬೋರ್ಡ್ ಸದಸ್ಯ ಅಬ್ದುರ್ರಶೀದ್ ಹಾಜಿ ಪರ್ಲಡ್ಕ , ಪುತ್ತೂರು ಅನ್ಸಾರುದ್ಧೀನ್ ಜಮಾಅತ್ ಕಮಿಟಿ ಅಧ್ಯಕ್ಷ ಎಲ್.ಟಿ ಅಬ್ದುಲ್ ರಝಾಕ್ ಹಾಜಿ, ಪುತ್ತೂರು ರೇಂಜ್ ಅಧ್ಯಕ್ಷ ಆಸಿಫ್ ಅಝ್ಹರಿ ಮಿತ್ತೂರು, ರಿಯಾದ್ ಎಸ್‌ಕೆಎಸ್‌ಎಸ್‌ಎಫ್ ನೇತಾರ ಝುಬೈರ್ ಬಪ್ಪಳಿಗೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಉಪಾಧ್ಯಕ್ಷ ಕೆ.ಎಂ. ಅಬ್ದುಲ್ಲಾ ಕೂರ್ನಡ್ಕ, ಪ್ರಧಾನ ಕಾರ್ಯದರ್ಶಿ ಯಾಕೂಬ್ ಖಾನ್ ಬಪ್ಪಳಿಗೆ, ಕೂರ್ನಡ್ಕ ಮದ್ರಸ ಮ್ಯಾನೇಜ್ಮೆಂಟ್ ಅಧ್ಯಕ್ಷ ಅಬೂಬಕರ್ ಮುಲಾರ್, ಸಾಲ್ಮರ ದಾರುಲ್ ಹಸನಿಯ್ಯಾ ಪ್ರಧಾನ ಕಾರ್ಯದರ್ಶಿ ಹಸನ್ ಹಾಜಿ ಸಿಟಿ ಬಝಾರ್, ಪುತ್ತೂರು ವಲಯ ಉಪಾಧ್ಯಕ್ಷ ಬಾತಿಷ ಪಾಟ್ರಕೋಡಿ, ಕೋಶಾಧಿಕಾರಿ ಅಶ್ರಫ್ ಮುಕ್ವೆ, ಟ್ರೆಂಡ್ ಚೆಯೆರ್ಮೆನ್ ಸಯ್ಯಿದ್ ಅಫ್ಹಂ ಅಲಿ ತಂಙಳ್ ಕರಾವಳಿ, ಇಬಾದ್ ಕಾರ್ಯದರ್ಶಿ ರಝಾಕ್ ಅಝ್ಹರಿ , ಸ್ವರ್ಗಲಯಂ ಕಾರ್ಯದರ್ಶಿ ಅಶ್ರಫ್ ರಹ್ಮಾನಿ, ವಿಖಾಯ ಕಾರ್ಯದರ್ಶಿ ಆಸಿಫ್ ಕಬಕ, ಸಹಚಾರಿ ಕಾರ್ಯದರ್ಶಿ ಹನೀಫ್ ಹಾಜಿ ಉದಯ, ತ್ವಲಬಾ ಕನ್ವೀನರ್ ಸವಾದ್ ಪರ್ಪುಂಜ, ಕ್ಯಾಂಪಸ್ ಚೆಯೆರ್ಮೆನ್ ಮುನೀರ್ ಮಾಡನ್ನೂರು, ವಲಯ ಕಾರ್ಯಕಾರಿ ಸಮಿತಿ ಸದಸ್ಯರಾದ ಝೈನುದ್ಧೀನ್ ಹಾಜಿ ರೆಂಜಲಾಡಿ, ರಫೀಕ್ ಫೈಝಿ ಮಾಡನ್ನೂರು, ನೌಷಾದ್ ಹಾಜಿ ಬೊಳ್ವಾರ್, ಶಂಸುದ್ಧೀನ್ ಪೋಳ್ಯ, ಮುಕ್ರಂಪಾಡಿ ಮಸೀದಿ ಅಧ್ಯಕ್ಷ ಶರೀಫ್ ಮುಕ್ರಂಪಾಡಿ, ಅಶ್ರಫ್ ಸಾರೆಪುಣಿ, ಶಾಫಿ ಪಾಪೆತ್ತಡ್ಕ ಉಪಸ್ಥಿತರಿದ್ದರು.

ಸನ್ಮಾನ:
ಕೋವಿಡ್-೧೯ ಧಪನ ಕಾರ್ಯದಲ್ಲಿ ಸೇವೆಗೈದ ವಿಖಾಯ ಕಾರ್ಯಕರ್ತರಾದ ಆಸಿಫ್ ಕಬಕ, ಮನ್ಸೂರ್ ಮೌಲವಿ ಅಮ್ಚಿನಡ್ಕ, ಇಬ್ರಾಹಿಂ ಕಡವ, ಅಶ್ರಫ್ ಮುಕ್ವೆ, ಹನೀಫ್ ಮುಕ್ವೆ, ಸಿದ್ದೀಕ್ ಸುಲ್ತಾನ್ ಕೂಡುರಸ್ತೆ, ಜಮಾಲುದ್ಧೀನ್ ಸವಣೂರು, ಹಾಶಿಂ ಮುರ, ಆದಂ ಕಲ್ಲೇಗ, ಮುಹ್ಯದ್ಧೀನ್ ಸವಣೂರು ರವರಿಗೆ ಇದೇ ಸಂದರ್ಭದಲ್ಲಿ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ಸದಸ್ಯತ್ವ ಕಾರ್ಡ್ ವಿತರಣೆ:
ಎಸ್‌ಕೆಎಸ್‌ಎಸ್‌ಎಫ್ ಸದಸ್ಯತ್ವ ಕಾರ್ಡ್ ವಿತರಣೆ ಕಾರ್ಯಕ್ರಮ ನಡೆಯಿತು. ಕೇಂದ್ರ ಸಮಿತಿ ಕಾರ್ಯದರ್ಶಿ ಸತ್ತಾರ್ ಪಂದಲ್ಲೂರು ರವರು ವಲಯ ಅಧ್ಯಕ್ಷ ಮುಹಮ್ಮದ್ ಮುಸ್ಲಿಯಾರ್ ಮುಂಡೊಳೆ ರವರಿಗೆ ಸದಸ್ಯತ್ವ ಕಾರ್ಡ್ ನೀಡುವ ಮೂಲಕ ಉದ್ಘಾಟಿಸಿದರು.

ಸುನ್ನೀ ಮಹಲ್ ಸಂದರ್ಶನ:
ಕಾರ್ಯಕ್ರಮದ ಬಳಿಕ ಕೇಂದ್ರ ಸಮಿತಿ ಕಾರ್ಯದರ್ಶಿ ಸತ್ತಾರ್ ಪಂದಲ್ಲೂರುರವರು ವಲಯ ಕಚೇರಿ ಸುನ್ನೀ ಮಹಲ್‌ಗೆ ಸಂದರ್ಶನ ನೀಡಿ ವಲಯ ಸಮಿತಿ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿದರು.

ಬಹುಮಾನ ವಿತರಣೆ:
ರಂಝಾನ್ ಕ್ಯಾಂಪಯಿನ್ ಪ್ರಮೇಯ ಸ್ಫರ್ಧೆಯಲ್ಲಿ ವಿಜಯಿಯಾದ ಸಿನಾನ್ ಪರ್ಲಡ್ಕರವರಿಗೆ ನಗದು ಮತ್ತು ಅವಾರ್ಡ್‌ನ್ನು ಸತ್ತಾರ್ ಪಂದಲ್ಲೂರು ನೀಡಿದರು. ವಲಯ ಪ್ರಧಾನ ಕಾರ್ಯದರ್ಶಿ ಜಾಬಿರ್ ಫೈಝಿ ಸ್ವಾಗತಿಸಿ ಸಂಘಟನಾ ಕಾರ್ಯದರ್ಶಿ ನಝೀರ್ ಅರ್ಶದಿ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.