HomePage_Banner
HomePage_Banner
HomePage_Banner

ಶಿರಾಡಿ: ಕಸ್ತೂರಿ ರಂಗನ್ ವರದಿ ಅನುಷ್ಠಾನ ವಿರೋಧಿಸಿ ಪ್ರತಿಭಟನೆ, ಗ್ರಾ.ಪಂ.ಮೂಲಕ ಡಿಸಿಗೆ ಮನವಿ

Puttur_Advt_NewsUnder_1
Puttur_Advt_NewsUnder_1

ನೆಲ್ಯಾಡಿ: ಕಸ್ತೂರಿ ರಂಗನ್ ವರದಿಯಂತೆ ಪರಿಸರ ಸೂಕ್ಷ್ಮ ವಲಯ ಎಂಬ ಯೋಜನೆಯಿಂದ ಶಿರಾಡಿ ಗ್ರಾಮವನ್ನು ಕೈ ಬಿಡಬೇಕೆಂದು ಒತ್ತಾಯಿಸಿ ನ.21ರಂದು ಬೆಳಿಗ್ಗೆ ಶಿರಾಡಿ ಗ್ರಾ.ಪಂ.ಕಚೇರಿ ಮುಂದೆ ಜಮಾಯಿಸಿದ ಗ್ರಾಮಸ್ಥರು ಯೋಜನೆ ವಿರುದ್ಧ ಧಿಕ್ಕಾರ ಕೂಗಿ, ಯೋಜನೆ ವಿರುದ್ಧದ ನಾಮಫಲಕ ಪ್ರದರ್ಶಿಸಿ ಗ್ರಾ.ಪಂ.ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ಕಸ್ತೂರಿ ರಂಗನ್ ವರದಿಯ ಪ್ರಕಾರ ದ.ಕ.ಜಿಲ್ಲೆಯ ಕಡಬ, ಸುಳ್ಯ,ಬೆಳ್ತಂಗಡಿ ತಾಲೂಕಿನ 46 ಗ್ರಾಮಗಳು ಪಶ್ಚಿಮ ಘಟ್ಟ ಸೂಕ್ಷ್ಮ ಪರಿಸರ ಪ್ರದೇಶ ಎಂದು ಗುರುತಿಸಲ್ಪಟ್ಟಿದೆ. ಶಿರಾಡಿ ಗ್ರಾಮವೂ ಇದರಲ್ಲಿ ಸೇರಿದೆ. ಈ ಭಾಗದ ಜನರು ತಲೆ ತಲಾಂತರಗಳಿಂದ ಕೃಷಿಯನ್ನೇ ಕುಲಕಸುಬಾಗಿ ಜೀವನ ನಡೆಸುತ್ತಿದ್ದಾರೆ. ಈ ಯೋಜನೆ ಜಾರಿಗೊಂಡರೆ ಈ ಭಾಗದ ರೈತರು ಕೃಷಿ, ಕೂಲಿ ಕಾರ್ಮಿಕರು, ಗ್ರಾಮಸ್ಥರು ಅತಂತ್ರಗೊಂಡು ನಿರ್ಗತಿಕರಾಗಲಿದ್ದಾರೆ. ಯೋಜನೆ ವಿರೋಧಿಸಿ 2015ರಲ್ಲಿ ಗ್ರಾಮ ಪಂಚಾಯತ್ ಹಾಗೂ ತಾಲೂಕು ಮಟ್ಟದಲ್ಲಿ ಪ್ರತಿಭಟನೆ ನಡೆದಿತ್ತು. ಇದರ ಪರಿಣಾಮವಾಗಿ 2015ರಲ್ಲಿ ವಿಶೇಷ ಗ್ರಾಮಸಭೆ ಕರೆದು ಅಭಿಪ್ರಾಯ ಪಡೆಯಲಾಗಿತ್ತು. ಈ ಸಭೆಯಲ್ಲಿ ಯೋಜನೆ ಜಾರಿಗೊಳಿಸದಂತೆ ನಿರ್ಣಯಿಸಿ ಸರ್ಕಾರಕ್ಕೆ ಕಳಿಸಲಾಗಿತ್ತು. ಆದ್ದರಿಂದ ಸರ್ಕಾರ 2015ರಲ್ಲಿ ನಡೆಸಿದ ವಿಶೇಷ ಗ್ರಾಮಸಭೆಯ ನಿರ್ಣಯವನ್ನೇ ಪರಿಗಣಿಸಿ ಯೋಜನೆಯನ್ನು ಕೈಬಿಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಮಲೆನಾಡು ಜನಹಿತ ರಕ್ಷಣಾ ವೇದಿಕೆ ಕೇಂದ್ರ ಸಮಿತಿ ಸಂಚಾಲಕ ಕಿಶೋರ್ ಶಿರಾಡಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಪರಿಷತ್ ಮಾಜಿ ಸದಸ್ಯ ಸಯ್ಯದ್ ಮೀರಾ ಸಾಹೇಬ್, ಗ್ರಾ.ಪಂ.ಮಾಜಿ ಅಧ್ಯಕ್ಷ ಜಿಮ್ಸನ್ ಗುಂಡ್ಯ, ವಿಜಯ್ ಶಿರಾಡಿ, ಗ್ರಾ.ಪಂ.ಮಾಜಿ ಸದಸ್ಯ ಎಂ.ಕೆ.ಪೌಲೋಸ್, ಗ್ರಾಮಸ್ಥರಾದ ಸುಂದರ ಗೌಡ ಬಳ್ಳೇರಿ, ಪಿ.ಜೆ.ಜೋಸೆಫ್ ಅಡ್ಡಹೊಳೆ, ಪಿ.ಜೆ.ಜೋಯಿ ಶಿರಾಡಿ ಮತ್ತಿತರರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.