HomePage_Banner
HomePage_Banner
HomePage_Banner

ಅಕ್ಷರದಾಸೋಹದ ಅಕ್ಕಿ ಚರಂಡಿಯಲ್ಲಿ !

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಅನ್ನ…ಅನ್ನ…ಅನ್ನ… ಎಂದು ಹಸಿದು ಕೈಯಾಡಿಸಿಕೊಂಡು ಬರುವವರಿಗೆ ಗೊತ್ತು `ಹಸಿವು’ ಎಂದರೆ ಏನು ಅಂತ,  ರಾಜ್ಯದಲ್ಲಿ ದಿನದ ಆಹಾರವಿಲ್ಲದೇ ಪರದಾಡುತ್ತಿರುವವರು ಅಷ್ಟೋ-ಇಷ್ಟೋ ಮಂದಿಯಲ್ಲ, ಒಂದು ಹೊತ್ತಿನ ಊಟ ಮಾಡಲು ಕೂಡ ಗತಿ ಇಲ್ಲದ ಹಲವು ಕುಟುಂಬಗಳು ನಮ್ಮ ಮುಂದಿದೆ. ಆದರೆ  ತಾಲೂಕಿನಲ್ಲೊಂದು ಮನಕಲಕುವ ದೃಶ್ಯವೊಂದು ನ.21ರಂದು ಕಂಡುಬಂದಿದೆ.  ಸರಕಾರದ ಮೂಲಕ ಅಕ್ಷರದಾಸೋಹದಿಂದ ಶಾಲಾ ಮಕ್ಕಳಿಗೆ ಉಚಿತವಾಗಿ ನೀಡುತ್ತಿರುವ ಅನ್ನದಾಸೋಹವನ್ನು ಕೊರೋನಾ ಸಂದರ್ಭದಲ್ಲಿ ಮಕ್ಕಳಿಗೆ ಮನೆಗೆ ನೀಡುತ್ತಿದ್ದ ಅಕ್ಕಿ ತುಂಬಿದ ಚೀಲ ಕೊಂಬೆಟ್ಟುನಲ್ಲಿರುವ ತಾಲೂಕು ಕ್ರೀಡಾಂಗಣದ ಚರಂಡಿಯಲ್ಲಿ ಬಿದ್ದಿರುವುದು ಬೆಳಕಿಗೆ ಬಂದಿದೆ. ಈ ಅಕ್ಕಿ ಚೀಲದಲ್ಲಿ ಪದಾರ್ಥ ಬೆಲೆ ಕೂಡವಿದ್ದು, ಇದನ್ನು ಎಸೆಯದೇ, ಬಡವರಿಗೆ ದಾನ ಮಾಡುತ್ತಿದ್ದರೆ ಒಳಿತಾಗುತ್ತಿತ್ತು ಎಂದು ಸಾರ್ವಜನಿಕರಿಂದ ಕೇಳಿಬರುತ್ತಿದೆ.

ಹೌದು ಇದು ಸತ್ಯ 
ಕಳೆದ ಎರಡು ಮೂರು ದಿನಗಳಿಂದ ಮಕ್ಕಳಿಗೆ ಶಾಲೆಯಲ್ಲಿ ಅಕ್ಷರದಾಸೋಹದ ಅಕ್ಕಿ ವಿತರಿಸುತ್ತಿದ್ದರು. ಕೊಂಬೆಟ್ಟು ಶಾಲೆಯಲ್ಲೂ ಮಕ್ಕಳಿಗೆ ಅಕ್ಕಿ ವಿತರಣೆ ನಡೆದಿದೆ.ಮಕ್ಕಳು ಶಾಲೆಯಿಂದ ಪಡೆದು ಕೊಂಡ ಅಕ್ಕಿತುಂಬಿದ ಚೀಲ ತಾಲೂಕು ಕ್ರೀಡಾಂಗಣದ ಚರಂಡಿಯಲ್ಲಿ ಬೆಳಕಿಗೆ ಬಂದಿದೆ. ಘಟನೆಯ ಕುರಿತು ಯುವಜನ ಸಬಲೀಕರಣ ಕ್ರೀಡಾಧಿಕಾರಿ ಸಂಬಂಧ ಪಟ್ಟ ಶಾಲೆ ಮತ್ತು ಸ್ಥಳೀಯ‌ ನಗರಸಭಾ ಸದಸ್ಯರಿಗೆ ‌ಮಾಹಿತಿ ನೀಡಿದ್ದಾರೆ. 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.