HomePage_Banner
HomePage_Banner
HomePage_Banner

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ್ ಹೆಗ್ಡೆಯವರಿಗೆ ಸನ್ಮಾನ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಹೆಗ್ಡೆಯವರನ್ನು ಉರ್ಲಾಂಡಿ ಶ್ರೀ ನಾಗ ರಕ್ತೇಶ್ವರಿ ಭೈರವ ದೈವಾದಿಗಳ ಸ್ಥಾನದ ಬಳಿ ಸನ್ಮಾನಿಸಲಾಯಿತು.

ಕುಕ್ಕಾಡಿ ತಂತ್ರಿ ಕೆ ಪ್ರೀತಮ್ ಪುತ್ತೂರಾಯರು ಮತ್ತು ನಗರಸಭಾ ಸ್ಥಳೀಯ ಸದಸ್ಯ ಸಂತೋಷ ಕುಮಾರ್‌ರವರು ಶಾಲು ಹೊದಿಸಿ ಹಾರ ಹಾಕಿ ಫಲವಸ್ತು ನೀಡಿ ಚಂದ್ರಶೇಖರ ಹೆಗ್ಡೆ ದಂಪತಿಯನ್ನು ಸನ್ಮಾನಿಸಿದರು.

ಸನ್ಮಾನಿತರಾದ ಚಂದ್ರಶೇಖರ ಹೆಗ್ಡೆಯವರು ಮಾತನಾಡಿ ತಾವು ಈ ಹಂತಕ್ಕೆ ಏರಲು ಸಹಕರಿಸದವರನ್ನು ಸ್ಮರಿಸಿ ಅವರೆಲ್ಲರಿಗೂ ಕೃತಜ್ಞತೆಯನ್ನು ಅರ್ಪಿಸಿ ಶ್ರೀ ಮಹಾಲಿಂಗೇಶ್ವರ ದೇವರ ದಯೆಯಿಂದ ಮತ್ತು ಈಕ್ಷೇತ್ರದ ದೈವ ದೇವರುಗಳ ಆಶೀರ್ವಾದದಿಂದ ಸರಕಾರ ಮತ್ತು ಸಮಾಜ ನನ್ನನ್ನು ಗುರುತಿಸಿದೆ ಎಂದರು. ಕುಕ್ಕಾಡಿ ತಂತ್ರಿ ಪ್ರೀತಮ್ ಪುತ್ತೂರಾಯರು ಮಾತನಾಡಿ,ನಾವೆಲ್ಲರೂ ನಂಬಿಕೊಂಡು ಬರುವ ಶ್ರೀ ಮಹಾಲಿಂಗೇಶ್ವರ ದೇವರ ಕೃಪೆ ನಿಮ್ಮ ಮೇಲಿರಲಿ, ಮುಂದಿನ ದಿನ ಗಳಲ್ಲಿ ನಿಮ್ಮ ಸಾಧನೆಗೆ ಕರ್ನಾಟಕ ರಾಜ್ಯೋತ್ಸವವೇ ಸಿಗುವಂತಾಗಲಿ ಎಂದು ಹಾರೈಸಿದರು.

ನಗರ ಸಭಾ ಸದಸ್ಯ ಸಂತೋಷ ಕುಮಾರ್ ಮಾತನಾಡಿ ಚಂದ್ರಶೇಖರರು ಗಾಯನ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡಿದುದರಿಂದ ಈ ಪ್ರಶಸ್ತಿ ಅವರಿಗೆ ಲಭಿಸಿದೆ. ಯಾವಾಗಲೋ ಸಂದಾಯ ವಾಗಬೇಕಾದುದು ಈಗಲಾದರು ಸಿಕ್ಕಿದುದು ಅವರಅಭಿಮಾನಿಗಳಾದ ನಮಗೆಲ್ಲಾ ಬಹಳಷ್ಟು ಸಂತಸ ತಂದಿದೆ ಮುಂದೆ ಹೆಚ್ಚಿನ ಪ್ರಶಸ್ತಿ ಸಿಗಲಿ ಎಂದು ಶುಭ ಹಾರೈಸಿದರು ಅಧ್ಯಕ್ಷತೆ ವಹಿಸಿದ್ದ ಲೋಕೇಶ ಹೆಗ್ಡೆಯವರು ಮಾತನಾಡಿ ಚಂದ್ರಶೇಖರ ಹೆಗ್ಡೆಯವರು ಈ ಕ್ಷೇತ್ರದ ಪರಮಭಕ್ತರಾಗಿದ್ದು ತಮ್ಮಿಂದಾದ ಸೇವೆಯನ್ನು ಸಲ್ಲಿಸುತ್ತಿದ್ದುದರಿಂದ ನಾವುಕ್ಷೇತ್ರದ ದೈವ ದೇವರುಗಳ ಆಶೀರ್ವಾದದ ರೂಪ ದಲ್ಲಿ ಈ ಸನ್ಮಾನವನ್ನು ಎರ್ಪಡಿಸಿರುತ್ತೇವೆ ನೂರಾರು ಮಂದಿ ಇವರಲ್ಲಿ ಹಾಡುವ ವಿದ್ಯೆ ಯನ್ನು ಕಲಿತು ನಾಡಿನಾದ್ಯಂತ ಹೆಸರು ಗಳಿಸುತಿರುವದು ಇವರಿಗೆ ಹೆಮ್ಮೆಯ ವಿಷಯ ವಾಗಿದೆ ಇನ್ನು ಮುಂದಿನ ದಿನ ಗಳಲ್ಲಿ ಇವರಿಂದ ಇನ್ನೂ ಹೆಚ್ಚಿನ ಸಾಧನೆ ಯಾಗಲಿ ಎಂದು ಹಾರೈಸಿದರು. ಕಾರ್ಯಕ್ರಮದಲ್ಲಿ ಶ್ರೀ ಸರಸ್ವತಿ ಭಜನಾ ಮಂದಿರ ಉರ್ಲಾಂಡಿಯವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಕೋಶಾಧಿಕಾರಿ ನಾರಾಯಣ ಹೆಗ್ಡೆ ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನಾಡಿದರು. ಸೂರ್ಯ ಆರ್ ರವರು ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.