HomePage_Banner
HomePage_Banner
HomePage_Banner

ಕೆಳದಿ ಚೆನ್ನಮ್ಮ ಜಿಲ್ಲಾ ಪ್ರಶಸ್ತಿಗೆ ಆಶ್ರಯ ಆಯ್ಕೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಂಗಳೂರು ವತಿಯಿಂದ ನೀಡಲಾಗುವ ೨೦೨೦-೨೧ ನೇ ಸಾಲಿನ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಜಿಲ್ಲಾಮಟ್ಟದ ಅಸಾಧಾರಣ ಪ್ರಶಸ್ತಿಗೆ ಪ್ರಸ್ತುತ ಪುತ್ತೂರಿನ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ೧೦ನೇ ತರಗತಿಯ ವಿದ್ಯಾರ್ಥಿನಿ ಆಶ್ರಯ ಪಿ ಇವರು ಆಯ್ಕೆಯಾಗಿರುತ್ತಾರೆ.

ಅಸಾಧಾರಣ ಪ್ರಶಸ್ತಿ ಯೋಜನೆಯಡಿ ನಾವೀನ್ಯತೆ ತಾರ್ಕಿಕ ಸಾಧನೆ, ಕ್ರೀಡೆ ಕಲೆ ಸಾಂಸ್ಕೃತಿಕ ಮತ್ತು ಸಂಗೀತ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ೫ರಿಂದ ೧೮ ವರ್ಷ ವಯೋಮಾನದ ವಿದ್ಯಾರ್ಥಿಗಳನ್ನು ಜಿಲ್ಲಾ ಮಟ್ಟದ ಪ್ರಶಸ್ತಿಗೆ ಆಯ್ಕೆ ಮಾಡುತ್ತಿದ್ದು ಪ್ರತೀ ಕ್ಷೇತ್ರದಲ್ಲಿ ಇಬ್ಬರಂತೆ ಒಟ್ಟು ೮ ಮಕ್ಕಳಿಗೆ ತಲಾ ೧೦೦೦೦/- ರಂತೆ ನಗದು ಹಾಗೂ ಪ್ರಶಸ್ತಿ ನೀಡಲಾಗುತ್ತದೆ.

೨೦೨೦-೨೧ನೇ ಸಾಲಿನಲ್ಲಿ ಮಂಗಳೂರು ನಗರದ ೫ ವಿದ್ಯಾರ್ಥಿಗಳು, ಮಂಗಳೂರು ಗ್ರಾಮೀಣ ವಿಭಾಗದ ೨ ವಿದ್ಯಾರ್ಥಿಗಳು ಹಾಗೂ ಪುತ್ತೂರು ತಾಲೂಕಿನ ಒಬ್ಬ ವಿದ್ಯಾರ್ಥಿನಿ ಆಯ್ಕೆಯಾಗಿರುತ್ತಾರೆ.

ಪುತ್ತೂರಿನಿಂದ ಆಯ್ಕೆಯಾದ ಇವರು ಚೇತನಾ ಸ್ಟುಡಿಯೋ ಮಾಲಕ ಹಾಗೂ ವಿವೇಕಾನಂದ ಶಿಶುಮಂದಿರದ ಅಧ್ಯಕ್ಷ ಅಶೋಕ ಕುಂಬಳೆ ಮತ್ತು ಆಶ್ರಯ ಕೋಚಿಂಗ್ ಸೆಂಟರ್ ಮಾಲಕಿ ಹಾಗೂ ವಿವೇಕಾನಂದ ಬಿಪಿಡ್ ಕಾಲೇಜಿನ ಅತಿಥಿ ಉಪನ್ಯಾಸಕಿ ಶೋಭಾ ಅಶೋಕ್‌ರವರ ಪುತ್ರಿ.

ಬಹುಮುಖ ಪ್ರತಿಭೆಯ ವಿದ್ಯಾರ್ಥಿನಿಯಾದ ಈಕೆ ಭರತನಾಟ್ಯ ಸೀನಿಯರ್ ಪರೀಕ್ಷೆ ತೇರ್ಗಡೆ ಹೊಂದಿದ್ದು ರಾಷ್ಟ್ರಪತಿ ಗೈಡ್ ಪ್ರಶಸ್ತಿ ಪುರಸ್ಕೃತೆ. ಕಳೆದ ಶೈಕ್ಷಣಿಕ ವರ್ಷದ ಡಿಸೆಂಬರ್‌ನಲ್ಲಿ ತಿರುವನಂತಪುರದಲ್ಲಿ ನಡೆದ Children’s National Science Congress ನಲ್ಲಿ ಭಾಗವಹಿಸಿ ತನ್ನ ಅವಿಷ್ಕಾರಕ್ಕೆ A Grade ಪಡೆದುಕೊಂಡಿರುತ್ತಾರೆ. ಈಕೆ ರಾಜ್ಯಮಟ್ಟದ ಕರಾಟೆ ಪಟು ಕೂಡಾ ಆಗಿರುತ್ತಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.