HomePage_Banner
HomePage_Banner
HomePage_Banner

ಅಡಿಕೆ ಮರ ಏರುವ ಯಂತ್ರ ಪ್ರಾತ್ಯಕ್ಷಿಕೆ, ಪ್ರದರ್ಶನ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕುಂಡಡ್ಕ-ಮುಕ್ಕೂರು ನೇಸರ ಯುವಕ ಮಂಡಲ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ಪೆರುವಾಜೆ ಆಳ್ವಫಾರ್ಮ್ಸ್ ಸಹಯೋಗದಲ್ಲಿ ಆಳ್ವಫಾರ್ಮ್ಸ್‌ನಲ್ಲಿ ಕೃಷಿ ಯಂತ್ರಗಳ ಪ್ರಾತ್ಯಕ್ಷಿಕೆ, ಪ್ರದರ್ಶನ ಕಾರ್ಯಕ್ರಮ ನಡೆಯಿತು. ಆಳ್ವಫಾರ್ಮ್ಸ್‌ನ ಯಜಮಾನಿ ಕುಂಬ್ರ ಲಲಿತಾ ಎಸ್.ಆಳ್ವ ಅವರು ಹಿಂಗಾರ ಅರಳಿಸಿ ಕಾರ್ಯಕ್ರಮ ಉದ್ಘಾಟಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪ್ರಗತಿಪರ ಕೃಷಿಕ ಗೋಪಾಲಕೃಷ್ಣ ಭಟ್ ಕಾನಾವು ಮಾತನಾಡಿ, ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಕೃಷಿಕರಿಗೆ ಪೂರಕವಾದ ಕಾರ್ಯಕ್ರಮ ಅನುಷ್ಠಾನಿಸುವುದು ಉತ್ತಮ ಸಂಗತಿ. ಆಳ್ವಫಾರ್ಮ್ಸ್‌ನಲ್ಲಿ ನಡೆದ ಯಂತ್ರಗಳ ಪ್ರಾತ್ಯಕ್ಷಿಕೆ ಶ್ಲಾಘನೀಯ ಕಾರ್ಯ ಎಂದರು.

ನೇಸರ ಯುವಕ ಮಂಡಲದ ಗೌರವಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಅಧ್ಯಕ್ಷತೆ ವಹಿಸಿದ್ದರು. ಬೆಳ್ಳಾರೆ ಮಂಡಲದ ಮಾಜಿ ಪ್ರಧಾನ, ಪ್ರಗತಿಪರ ಕೃಷಿಕ ಜಯಸೂರ್ಯ ರೈ ಬೋರಡ್ಕ , ಪೆರುವಾಜೆ ಗ್ರಾ.ಪಂ.ಮಾಜಿ ಸದಸ್ಯ ಉಮೇಶ್ ಕೆಎಂಬಿ, ಮುಕ್ಕೂರು ಜ್ಯೋತಿ ಯುವಕ ಮಂಡಲದ ಮಾಜಿ ಅಧ್ಯಕ್ಷ ಸತ್ಯಪ್ರಸಾದ್ ಕಂಡಿಪ್ಪಾಡಿ ಶುಭ ಹಾರೈಸಿದರು. ವೇದಿಕೆಯಲ್ಲಿ ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ಗುಡ್ಡಪ್ಪ ಗೌಡ ಅಡ್ಯತಕಂಡ, ಮುಕ್ಕೂರು-ಪೆರುವಾಜೆ ಶ್ರೀ ಶಾರದೋತ್ಸವ ಸಮಿತಿ ಅಧ್ಯಕ್ಷ ಕಿರಣ್ ಚಾಮುಂಡಿಮೂಲೆ, ಮುಕ್ಕೂರು ಯುವಸೇನೆ ಅಧ್ಯಕ್ಷ ಸಚಿನ್ ರೈ ಪೂವಾಜೆ, ಕುಂಡಡ್ಕ-ಮುಕ್ಕೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಪೂವಪ್ಪ ನಾಯ್ಕ ಅಡೀಲು, ಮುಕ್ಕೂರು-ಕುಂಡಡ್ಕ ನೇಸರ ಯುವಕ ಮಂಡಲ ಅಧ್ಯಕ್ಷ ರಮೇಶ್ ಕಾನಾವು ಉಪಸ್ಥಿತರಿದ್ದರು. ಶ್ರಾವ್ಯ ರೈ ಪೂವಾಜೆ ರೈತಗೀತೆ ಹಾಡಿದರು. ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ ಸ್ವಾಗತಿಸಿ, ನೇಸರ ಯುವಕ ಮಂಡಲ ಕಾರ್ಯದರ್ಶಿ ಶಶಿಕುಮಾರ್ ಬಿ.ಎನ್. ವಂದಿಸಿದರು. ರಕ್ಷಿತಾ ಅಡ್ಯತಕಂಡ ನಿರೂಪಿಸಿದರು.

ಸಮ್ಮಾನ ಕಾರ್ಯಕ್ರಮ
ಮಿನಿ ಸ್ಕೂಟಿ ಟಿಪ್ಪರ್ ಸಂಶೋಧಕ ಮಂಜುನಾಥನಗರದ ಪುರುಷೋತ್ತಮ ಅವರನ್ನು ಇದೇ ಸಂದರ್ಭದಲ್ಲಿ ಸಮ್ಮಾನಿಸಲಾಯಿತು. ಆಳ್ವಫಾರ್ಮ್ಸ್‌ನ ಯಜಮಾನಿ ಕುಂಬ್ರ ಲಲಿತಾ ಎಸ್.ಆಳ್ವ ಅವರನ್ನು ಗೌರವಿಸಲಾಯಿತು. ಅತಿಥಿಗಳಿಗೆ ಅಡಿಕೆ ಸಸಿ ನೀಡುವ ಮೂಲಕ ವಿಶೇಷ ಗೌರವ ಸಲ್ಲಿಸಲಾಯಿತು. ಬೃಂದಾ ಮುಕ್ಕೂರು ಮತ್ತು ರಕ್ಷಿತ್ ಕಾನಾವು ಸಮ್ಮಾನ ಪತ್ರ ವಾಚಿಸಿದರು

ಪ್ರಾತ್ಯಕ್ಷಿಕೆ, ಪ್ರದರ್ಶನ
ಅಗ್ರಿ ಡಿಪೋ ಇದರ ಮಾರುಕಟ್ಟೆ ಮುಖ್ಯಸ್ತ ರಾಜರಾಮ ಕಾಡೂರು ಅವರು ಕೃಷಿ ಯಂತ್ರಗಳ ಬಗ್ಗೆ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ನೀಡಿದರು. ಅಡಿಕೆ ಮರ ಏರುವ ಯಂತ್ರ, ತೆಂಗಿನ ಮರ ಏರುವ ಯಂತ್ರ, ಹುಲ್ಲು ಕತ್ತರಿಸುವ, ಅಡಿಕೆ ಮರದ ಬುಡ ಅಗತೆ ಯಂತ್ರ, ಮಿನಿ ಸ್ಕೂಟಿ ಟಿಪ್ಪರ್, ರಿಕ್ಷಾ ಟಿಪ್ಪರ್ ಇದರ ಪ್ರಾತ್ಯಕ್ಷಿಕೆ ನಡೆಯಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.