HomePage_Banner
HomePage_Banner
HomePage_Banner

ನಿಡ್ಪಳ್ಳಿ; ಶಾಸಕರಿಂದ ವಿವಿಧ ಕಾಮಗಾರಿಗಳ ಉದ್ಘಾಟನೆ – ಶಂಕುಸ್ಥಾಪನೆ       

Puttur_Advt_NewsUnder_1
Puttur_Advt_NewsUnder_1
ನಿಡ್ಪಳ್ಳಿ; ಇಲ್ಲಿಯ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ  ಶಾಸಕರ ಅನುದಾನದಲ್ಲಿ ಕೈ ಗೊಳ್ಳಲಾದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು  ಶಾಸಕ ಸಂಜೀವ ಮಠಂದೂರು ನ.21 ರಂದು ಉದ್ಘಾಟಿಸಿದರು.

ಟಾಸ್ಕ್ ಫೋರ್ಸ್‌, ಕುಡಿಯುವ ನೀರು ಸೌಲಭ್ಯ, ಮಳೆಹಾನಿ, ಗ್ರಾಮೀಣ ರಸ್ತೆ ಅಭಿವೃದ್ಧಿ ನಿಧಿ ಹಾಗೂ ಲೋಕೋಪಯೋಗಿ ಇಲಾಖೆಯ ವತಿಯಿಂದ ಶಾಸಕರ  ಸುಮಾರು 143.35 ಲಕ್ಷ ಅನುದಾನದಿಂದ ಅಭಿವೃದ್ಧಿ ಗೊಳಿಸಿದ ಕಾಮಗಾರಿಗಳನ್ನು ತೆಂಗಿನಕಾಯಿ ಒಡೆಯುವ ಮೂಲಕ ಉದ್ಘಾಟಿಸಿದರು. ಅಲ್ಲದೆ ಮತ್ತೆ 8 ಲಕ್ಷ ವೆಚ್ಚದಲ್ಲಿ ಕೈ ಗೊಳ್ಳಲಾಗುವ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು.
ತಾಲೂಕು ಪಂಚಾಯತ್ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಬಿ.ಜೆ.ಪಿ ಪುತ್ತೂರು ಗ್ರಾಮಾಂತರ ಮಂಡಲ ಕಾರ್ಯದರ್ಶಿ ನಿತೀಶ್ ಕುಮಾರ್ ಶಾಂತಿವನ, ಹಿಂದುಳಿದ ವರ್ಗಗಳ ಮೋರ್ಚಾ ಜಿಲ್ಲಾಧ್ಯಕ್ಷ ಅರ್.ಸಿ.ನಾರಾಯಣ ರೆಂಜ, ನಿಡ್ಪಳ್ಳಿ ಗ್ರಾಮ ಬಿ.ಜೆ.ಪಿ ಅಧ್ಯಕ್ಷ ಪದ್ಮನಾಭ ಬೋರ್ಕರ್, ಮಾಜಿ ಅಧ್ಯಕ್ಷ ವೆಂಕಟ್ರಮಣ ಬೋರ್ಕರ್, ಪಿಡಬ್ಲ್ಯುಡಿ ಇಂಜಿನಿಯರ್ ರಾಜಾರಾಮ್, ಶ್ರೀ ಶಾಂತದುರ್ಗಾ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ನಾಗೇಶ ಗೌಡ, ಪಾಣಾಜೆ ಸಿ.ಎ ಬ್ಯಾಂಕ್ ನಿರ್ದೇಶಕರಾದ   ನಾರಾಯಣ ರೈ ಕೊಪ್ಪಳ, ಕುಮಾರ ನರಸಿಂಹ ಬುಳೆನಡ್ಕ, ಗುತ್ತಿಗೆದಾರ ಅಪ್ಪಣ್ಣ ನಾಯ್ಕ, ಪ್ರಕಾಶ್ ಬೋರ್ಕರ್ ,ವಿಶ್ವ ಹಿಂದು ಪರಿಷತ್ ಭಜರಂಗದಳ ಗ್ರಾಮ ಸಮಿತಿ ಅಧ್ಯಕ್ಷ ಮುರಳೀಕೃಷ್ಣ ಮುಂಡೂರು ಹಾಗೂ  ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ನಂದಿನಿ  ಅರ್.ರೈ, ಪಕ್ಷದ ಮುಖಂಡರು, ಬಿ.ಜೆ.ಪಿ ಕಾರ್ಯಕರ್ತರು ಉಪಸ್ಥಿತರಿದ್ದರು.
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.