HomePage_Banner
HomePage_Banner
HomePage_Banner

ನಿವೃತ್ತ ಪಿಎಸ್‌ಐ ಸುಂದರ ಆಚಾರ್ ಮರೋಳಿರವರಿಗೆ ಮುಖ್ಯಮಂತ್ರಿ ಚಿನ್ನದ ಪದಕ ಪ್ರದಾನ

Puttur_Advt_NewsUnder_1
Puttur_Advt_NewsUnder_1

ಪುತ್ತೂರು : ನಿವೃತ್ತ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಸುಂದರ ಆಚಾರ್ ಮರೋಳಿರವರಿಗೆ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಚಿನ್ನದ ಪದಕ ಪ್ರದಾನ ಮಾಡಲಾಯಿತು.

ಸುಂದರ ಆಚಾರ್‌ರವರು ತಮ್ಮ ೨೦ನೇ ವಯಸ್ಸಿನಲ್ಲಿ ಪೊಲೀಸ್ ಇಲಾಖೆಗೆ ಸೇರಿ ಪುತ್ತೂರು, ಕದ್ರಿ, ಸುರತ್ಕಲ್, ಬರ್ಕೆ, ಮಂಗಳೂರು ಬಂದರು, ಕೊಣಾಜೆ, ಉಳ್ಳಾಲ ಪೊಲೀಸ್ ಠಾಣೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ಸುಮಾರು ೩೯ ವರ್ಷ ಸೇವೆ ಸಲ್ಲಿಸಿದ್ದರು. ತಮ್ಮ ಸೇವಾವಧಿಯಲ್ಲಿ ಠಾಣೆಯ ಬರಹಗಾರರಾಗಿ, ಉತ್ತಮ ತನಿಖಾ ಸಹಾಯಕನಾಗಿ, ಉತ್ತಮ ತನಿಖಾಧಿಕಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ಹಲವಾರು ಕ್ಲಿಷ್ಟ ಪ್ರಕರಣಗಳನ್ನು ಇವರು ಭೇದಿಸಿದ್ದಾರೆ. ಇಲಾಖೆಯಲ್ಲಿ ಇವರ ಉತ್ತಮ ಸೇವೆಯನ್ನು ಪರಿಗಣಿಸಿ 2017ರಲ್ಲಿ ಮುಖ್ಯಮಂತ್ರಿಗಳ ಪದಕ ನೀಡಿ ಗೌರವಿಸಲಾಗಿತ್ತು.

ಕಡಬ ತಾಲೂಕಿನ ಮರೋಳಿ ನಿವಾಸಿ ರಾಮಣ್ಣ ಆಚಾರ್ಯ ಮರೋಳಿ ಮತ್ತು ಆನಂದ ಲಕ್ಷ್ಮೀ ದಂಪತಿ ಪುತ್ರರಾಗಿರುವ ಇವರು ಎಡಮಂಗಲ ಪ್ರೈಮರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಕಡಬ ಸರಕಾರಿ ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣ, ಮೈಸೂರು ಯುನಿವರ್ಸಿಟಿಯಲ್ಲಿ ಬಿ.ಎ ಪದವಿ ಪಡೆದುಕೊಂಡಿದ್ದಾರೆ. ಇವರು ಪತ್ನಿ ವಿದ್ಯಾ, ಪುತ್ರರಾದ ಬೆಂಗಳೂರಿನಲ್ಲಿ ಉದ್ಯೋಗಿಯಾಗಿರುವ ಇಂಜಿನಿಯರಿಂಗ್ ಪದವೀಧರ ವಿಶ್ವಾಸ್, ಇಂಜಿನಿಯರಿಂಗ್ ವಿದ್ಯಾರ್ಥಿ ವಿಪಿನ್‌ರವರನ್ನು ಹೊಂದಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.