HomePage_Banner
HomePage_Banner
HomePage_Banner

ಮೆಡಿಕಲ್ ಕಾಲೇಜಿಗೆ ಮೀಸಲಿಟ್ಟ ಸ್ಥಳದಲ್ಲಿ ಸೀ ಪುಡ್ ಪಾರ್ಕ್ | ಸಿಎಫ್‌ಐಯಿಂದ ಖಂಡನೆ – ಹಕ್ಕೋತ್ತಾಯ ಸಭೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಸರಕಾರಿ ಮೆಡಿಕಲ್ ಕಾಲೇಜಿಗೆ ಮೀಸಲಿಟ್ಟ ಬನ್ನೂರಿನ 40 ಎಕ್ರೆ ಸ್ಥಳದಲ್ಲಿ ಸೀ ಫುಡ್ ಪಾರ್ಕ್ ನಿರ್ಮಾಣಕ್ಕೆ ಮುಂದಾದ ನಿರ್ಧಾರವನ್ನು ಖಂಡಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಪುತ್ತೂರು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಬನ್ನೂರಿನಲ್ಲಿ ಹಕ್ಕೊತ್ತಾಯ ಸಭೆ ನಡೆಯಿತು.

ಬನ್ನೂರಿನಲ್ಲಿ ಸೀಫುಡ್ ಪಾರ್ಕ್ ನಿರ್ಮಾಣಕ್ಕೆ ಊರವರ ಸಹಮತವಿಲ್ಲ, ಸರಕಾರಿ ಮೆಡಿಕಲ್ ಕಾಲೇಜು ಅದೇ ಸ್ಥಳದಲ್ಲಿ ನಿರ್ಮಾಣವಾಗಬೇಕು. ಈ ಬಗ್ಗೆ ಪುತ್ತೂರಿನ ಶಾಸಕರು ತೆಗೆದ ತೀರ್ಮಾನವನ್ನು ಖಂಡಿಸುತ್ತೇವೆ ಎಂದು ಸಭೆಯಲ್ಲಿ ಭಾಗವಹಿಸಿದವರು ಅಭಿಪ್ರಾಯ ವ್ಯಕ್ತಪಡಿಸಿದರು. ಸೀಫುಡ್ ತೀರ್ಮಾನವನ್ನು ವಿರೋಧಿಸಿ ಹಾಗೂ ಮೆಡಿಕಲ್ ಕಾಲೇಜು ಸ್ಥಾಪನೆಗೆ ಆಗ್ರಹಿಸಿ ಬೃಹತ್ ಹೋರಾಟದ ರೂಪುರೇಷೆಗಳನ್ನು ಇದೇ ಸಂದರ್ಭದಲ್ಲಿ ಚರ್ಚಿಸಲಾಯಿತು. ಹೋರಾಟಕ್ಕೆ ಸಂಪೂರ್ಣ ಸಹಕಾರವನ್ನು ನಗರಸಭಾ ಸದಸ್ಯೆ ಫಾತಿಮತ್ ಝೂರಾ ವ್ಯಕ್ತಪಡಿಸಿದರು. ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಜಿಲ್ಲಾ ಮುಖಂಡ ಸವಾದ್ ಕಲ್ಲರ್ಪೆ, ಪುತ್ತೂರು ಜಿಲ್ಲಾಧ್ಯಕ್ಷ ರಿಯಾಝ್ ಅಂಕತ್ತಡ್ಕ, ಕಾರ್ಯದರ್ಶಿ ಅನ್ಸಾರ್ ಬೆಳ್ಳಾರೆ, ಉಪಾಧ್ಯಕ್ಷ ಅಫ್ರೀದ್ ಕೂರ್ನಡ್ಕ , ಬನ್ನೂರು ಎಮ್.ವೈ.ಎಫ್ ಅಧ್ಯಕ್ಷ ಅಝರ್ ಬನ್ನೂರು ಹಾಗೂ ಊರ ಹಲವಾರು ಮುಖಂಡರು, ನಾಗರಿಕರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.