HomePage_Banner
HomePage_Banner
HomePage_Banner

ಭಕ್ತಕೋಡಿ:ಶ್ರೀರಾಮ ಭಜನಾ ಮಂದಿರದ ಪದಾಧಿಕಾರಿಗಳ ಹಿಂದೂ ವಿರೋಧಿ ನೀತಿ, ಸರ್ವಾಧಿಕಾರಿ ಧೋರಣೆ, ಅವ್ಯವಹಾರ ಖಂಡಿಸಿ ಶ್ರೀರಾಮ ಭಕ್ತವೃಂದದಿಂದ ಪ್ರತಿಭಟನಾ ಸಭೆ – ಶಾಸಕರ ಭೇಟಿ

Puttur_Advt_NewsUnder_1
Puttur_Advt_NewsUnder_1
  •  100% ಕಾನೂನು ಕ್ರಮ, ನ್ಯಾಯದ ಭರವಸೆ-ಪ್ರತಿಭಟನೆ ಹಿಂತೆಗೆತ

ಪುತ್ತೂರು: ಭಕ್ತಕೋಡಿ ಶ್ರೀರಾಮ ಭಜನಾ ಮಂದಿರದ ಪದಾಧಿಕಾರಿಗಳ ಹಿಂದೂ ವಿರೋಧಿ ನೀತಿ , ಸರ್ವಾಧಿಕಾರಿ ಧೋರಣೆ ಹಾಗೂ ಅವ್ಯವಹಾರವನ್ನು ವಿರೋಧಿಸಿ ಭಕ್ತಕೋಡಿ ಶ್ರೀರಾಮ ಭಕ್ತವೃಂದದ ವತಿಯಿಂದ ನ.22ರಂದು ಭಜನಾ ಮಂದಿರದ ವಠಾರದಲ್ಲಿ ಪ್ರತಿಭಟನಾ ಸಭೆ ನಡೆಸಿದರು. ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಸಂಜೀವ ಮಠಂದೂರು ಮಾತನಾಡಿ ಕಾನೂನು ಕ್ರಮದ ಭರವಸೆಯ ಬಳಿಕ ಪ್ರತಿಭಟನೆಯನ್ನು ಹಿಂತೆಗೆದುಕೊಂಡರು.

ಶಾಸಕ ಸಂಜೀವ ಮಠಂದೂರು ಮಾತನಾಡಿ, ಕಾನೂನು ಬದ್ದವಾಗಿ ನೋಂದಾವಣೆಗೊಂಡಿರುವ ಸಂಸ್ಥೆಯಲ್ಲಿ ಕಾನೂನಿನ ತೊಡಕನ್ನು ಪರಿಗಣಿಸಿ, ಸೂಕ್ತ ಕಾನೂನು ಕ್ರಮಕೈಗೊಳ್ಳಲು ಜಿಲ್ಲಾ ಹಾಗೂ ತಾಲೂಕು ನೋಂದಾವಣಾಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಭಜನಾ ಮಂದಿರದಲ್ಲಿ ಎಲ್ಲರಿಗೂ ಅವಕಾಶ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೆ ಅವಕಾಶ ನೀಡಬೇಕು, ಬೈಲಾ ಲೋಪ, ಅವ್ಯವಹಾರಗಳ ತನಿಖೆ ನಡೆಸುವಂತೆ ನಾಳೆಯೇ ಪತ್ರ ಬರೆದು ಜಿಲ್ಲಾ ಹಾಗೂ ತಾಲೂಕು ನೋಂದಾವಣಾಧಿಕಾರಿಗಳಿಗೆ ಸೂಚನೆ ನೀಡಲಾಗವುದು ಎಂದರು.

ಭಜನಾ ಮಂಡಳಿ, ಮಂದಿರಗಳು ಧಾರ್ಮಿಕ ದತ್ತಿ ಇಲಾಖೆಯ ಅಧೀನದಲ್ಲಿ ನೋಂದಾವಣೆಗೊಂಡಾಗ ಸರಕಾರದಿಂದ ನ್ಯಾಯ ಒದಗಿಸಲು ಸಾಧ್ಯವಿದೆ. ಅದಕ್ಕಾಗಿ ಎಲ್ಲಾ ಭಜನಾ ಕೇಂದ್ರಗಳು ಧಾರ್ಮಿಕ ದತ್ತಿ ಇಲಾಖೆಯ ನೋಂದಾವಣೆ ಆಗಬೇಕು ಎಂದು ಸಚಿವರಿಗೆ ಮನವಿ ಮಾಡಲಾಗಿದೆ. ಮುಸ್ಲಿಮರಿಗೆ ವಕ್ಪ್ ಬೋರ್ಡ್, ಕ್ರಿಶ್ಚಿಯನ್ನರಿಗೆ ಕ್ರಿಶ್ಚಿಯನ್ ಬೋರ್ಡ್‌ನ ಮೂಲಕ ನೋಂದಾವಣೆಗೊಳ್ಳಲಾಗುತಿದ್ದು ಅದರಂತೆ ಭಜನಾ ಮಂದಿರಗಳೂ ಹಿಂದೂ ಧಾರ್ಮಿಕ ವಿಚಾರಗಳೊಗೆ ಸಂಬಂಧಿಸಿದ್ದು ಇತರ ಇಲಾಖೆಗಳನ್ನು ಬಿಟ್ಟು ಧಾರ್ಮಿಕ ದತ್ತಿ ಇಲಾಖೆಯಲ್ಲಿಯೇ ನೊಂದಾವಣೆಯಾಗಬೇಕು ಎಂದು ಸಚಿವರಿಗೆ ಮನವಿ ಮಾಡಿದ್ದು ಈಡೇರಿಸುವ ಭರವಸೆ ನೀಡಿದ್ದಾರೆ. ಶ್ರೀರಾಮ ಭಜನಾ ಮಂದಿರದ ವಿಚಾರವನ್ನೂ ಸಚಿವರ ಗಮನಕ್ಕೆ ತಂದು ಶೇ.೧೦೦ರಷ್ಟು ನ್ಯಾಯ ಒದಗಿಸಲಾಗುವುದು ಎಂದು ಶಾಸಕರು ತಿಳಿಸಿದರು.

ಭಕ್ತ ವೃಂದದವರ ಆರೋಪವೇನು?
೧೯೫೩ರಲ್ಲಿ ಸ್ಥಾಪಿಸಲಾಗಿದ್ದ ಭಜನಾ ಮಂದಿರದಲ್ಲಿ ೨೦೧೯ರ ತನಕ ಹಿಂದೂ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು, ಪೂಜಾ ವಿಧಿ ವಿಧಾನಗಳ ಜೊತೆಗೆ ಶ್ರೀ ರಾಮ ಹೆಸರಿನಲ್ಲಿ ಕಬಡ್ಡಿ ಪಂದ್ಯಾಟವನ್ನು ನಡೆಸಿಕೊಂಡು ಬಂದಿರುತ್ತದೆ. ೨೦೨೦ರಲ್ಲಿ ರಚನೆಯಾದ ನೂತನ ಸಮಿತಿಯು ಈ ಹಿಂದೆ ರಚಿಸಲಾಗಿದ್ದ ಬೈಲಾಕ್ಕೆ ವಿರುದ್ಧವಾಗಿ ಭಕ್ತಾದಿಗಳಿಗೆ ಯಾವುದೇ ಮಾಹಿತಿ ನೀಡದೇ ಮಂಡಳಿಯ ಹಿಂದಿನ ಅಧ್ಯಕ್ಷರನ್ನು ಒತ್ತಾಯ ಪೂರ್ವಕವಾಗಿ ಕೆಳಗಿಸಿರುವುದಲ್ಲದೆ ಹಿಂದಿನ ಬೈಲಾವನ್ನು ಬದಲಾವಣೆ ಮಾಡಲಾಗಿದೆ. ಹೊಸ ಸಮಿತಿ ಪ್ರಾರಂಭವಾದ ಬಳಿಕ ಮಂದಿರದ ವಠಾರದಲ್ಲಿ ಹಿಂದೂ ಧಾರ್ಮಿಕ ಕಾರ್ಯಕ್ರಮಗಳಿಗೆ ತಡೆ, ಸಭೆ, ಸಮಾರಂಭಗಳಿಗೆ ಅವಕಾಶ ನೀಡದೇ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ. ಶ್ರೀರಾಮ ಭಜನಾ ಮಂದಿರದ ನೇತೃತ್ವದಲ್ಲಿ ಊರಿನ ಯುವಕರ ತಂಡ ಕಬಡ್ಡಿ ಆಟವಾಡಿ ಗೆದ್ದು ಗಳಿಸಿದ ಪ್ರಶಸ್ತಿ, ಫಲಕಗಳನ್ನು ಭಜನಾ ಮಂದಿರದ ಒಳಗೆ ಇರಿಸಲಾಗಿದ್ದ ಪ್ರಶಸ್ತಿ, ಫಲಕಗಳನ್ನು ತೆರವುಗೊಳಿಸಿ ಕಸದ ಬುಟ್ಟಿಗೆ ಎಸೆದಿರುತ್ತಾರೆ. ಮಂದಿರದ ಆವರಣದಲ್ಲಿ ಯಾವುದೇ ರೀತಿಯ ಕ್ರೀಡೆಗಳಿಗೂ ತಡೆ ಹಿಡಿಯಲಾಗಿದೆ. ನೂತನ ಸಮಿತಿ ಮಂದಿರದ ಮಹಾಸಭೆ ನಡೆಸದೆ, ಆಯ-ವ್ಯಗಳನ್ನು ಸಾರ್ವಜನಿಕರಿಗೆ ತಿಳಿಸದೆ ಅವ್ಯವಹಾರ ಎಸಗಿರುತ್ತಾರೆ. ಭಜನಾ ಮಂದಿರದ ಆದಾಯದ ದೃಷ್ಠಿಯಿಂದ ನಿರ್ಮಿಸಲಾದ ಕಟ್ಟಡಕ್ಕೆ ಬಾಡಿಗೆ ಪಾವತಿಸದೇ ದ್ರೋಹ ಎಸಗಿರುತ್ತಾರೆ. ಅರ್ಚಕರನ್ನು ಬದಲಾವಣೆ ಮಾಡಿ ಪೂಜಾ ನಿಯಮದಲ್ಲೂ ಬದಲಾವಣೆ ಮಾಡಿರುತ್ತಾರೆ. ಭಜನಾ ಮಂದಿರದಲ್ಲಿ ಸ್ಥಳಿಯ ಯುವಕ ಮಂಡಲದ ಕಾರ್ಯಕ್ರಮ ಹಾಗೂ ಇತರ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದು ಭಜನಾ ಮಂದಿರದ ಆಸ್ತಿಯನ್ನು ಯುವಕ ಮಂಡಲದ ಆಸ್ತಿಯನ್ನಾಗಿ ಪರಿಗಣಿಸಲು ಪ್ರಯತ್ನಿಸುತ್ತಿದ್ದಾರೆ. ಈ ಎಲ್ಲಾ ಕಾರ್ಯಗಳಿಗೆ ಸ್ಥಳಿಯ ರಾಜಕೀಯ ಮುಖಂಡರ ಕುಮ್ಮಕ್ಕಿನಿಂದ ನಡೆಯುತ್ತಿದ್ದು ಧಾರ್ಮಿಕ ಕೇಂದ್ರವನ್ನು ರಾಜಕೀಯ ಗೊಳಿಸುವ ಹುನ್ನಾರ ನಡೆಯುತ್ತಿದೆ ಎಂದು ಶಾಸಕರು, ಜಿ.ಪಂ ಅಧ್ಯಕ್ಷರು ಹಾಗೂ ತಾ.ಪಂ ಅಧ್ಯಕ್ಷರಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ.

 

ಜಿಲ್ಲಾ ಧಾರ್ಮಿಕ ಪರಿಷತ್‌ನ ಸದಸ್ಯ ಮುರಳಿಕೃಷ್ಣ ಹಸಂತಡ್ಕ, ಡಾ.ಎಂ.ಕೆ ಪ್ರಸಾದ್, ಮೋಹನ ರೈ ನರಿಮೊಗರು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು. ಸದಾಶಿವ ಭಂಡಾರಿ ಪ್ರಸ್ತಾವಣೆಗೈದರು. ಜಿ.ಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತಾ.ಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಸದಸ್ಯ ಶಿವರಂಜನ್, ಎಪಿಎಂಸಿ ಸದಸ್ಯರಾದ ರಾಧಾಕೃಷ್ಣ ರೈ ಬೂಡಿಯಾರು, ತ್ರಿವೇಣಿ ಪೆರ್‍ವೋಡಿ, ಹಿಂದು ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ, ಅರ್ಚಕ ಶ್ರೀರಾಮ ಕಲ್ಲೂರಾಯ, ಹಿಂದು ಜಾಗರಣಾ ವೇದಿಕೆ ಜಿಲ್ಲಾ ಕಾರ್ಯದರ್ಶಿ ಅಜಿತ್ ರೈ ಹೊಸಮನೆ, ತಾ.ಪಂ ಮಾಜಿ ಸದಸ್ಯ ಜಯರಾಮ ಪೂಜಾರಿ, ರಾಷ್ಟ್ರೀಯ ಭಜರಂಗದಳದ ಜಿಲ್ಲಾಧ್ಯಕ್ಷ ಧನ್ಯ ಕುಮಾರ್ ಬೆಳಂದೂರು, ನರಸಿಂಹ ಮಾಣಿ, ನಾಗರಾಜ ರೈ ಮೇಗಿನಗುತ್ತು, ವಿಶ್ವನಾಥ ರೈ ಬೊಟ್ಯಾಡಿ, ಅಶೋಕ್ ರೈ ಸೊರಕೆ, ಬೆಳಿಯಪ್ಪ ಗೌಡ, ಪ್ರಕಾಶ್ಚಂದ್ರ ರೈ ಕುಂಜಾಡಿ, ಉಮೇಶ್ ಗೌಡ ಅಂಬಟ ಸೇರಿದಂತೆ ನೂರಾರು ಮಂದಿ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿದ್ದರು. ಸ್ವಸ್ತಿಕ್ ಮೇಗಿನ ಗುತ್ತು ಮನವಿ ವಾಚಿಸಿದರು. ನ್ಯಾಯವಾದಿ ಚಿನ್ಮಯ ರೈ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.