HomePage_Banner
HomePage_Banner
HomePage_Banner

ಕರುವೇಲು ಮಸೀದಿ ಯಲ್ಲಿ ಸಮಸ್ತ ಪ್ರಾರ್ಥನಾ ದಿನ ಆಚರಣೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು:  ಸಮಸ್ತ ಕೇರಳ ಜಂಇಯ್ಯತುಲ್ ಮುಅಲ್ಲಿಮೀನ್ ಕೇಂದ್ರ ಸಮಿತಿಯ ನಿರ್ದೇಶ ದಂತೆ ಬದ್ರಿಯಾ ಜುಮಾ ಮಸೀದಿ ಮತ್ತು ಕುವ್ವತುಲ್ ಇಸ್ಲಾಂ ಮದ್ರಸ ಕರುವೇಲು ಆಶ್ರಯದಲ್ಲಿ ನವೆಂಬರ್ 22 ಆದಿತ್ಯವಾರ ಸಮಸ್ತ ಪ್ರಾರ್ಥನಾ ದಿನ ನಡೆಯಿತು.

ಇದರ ಅಂಗವಾಗಿ ಖಬರ್ ಝಿಯಾರತ್, ಜೀಲಾನಿ ಮೌಲಿದ್, ಅನುಸ್ಮರಣೆ ಮತ್ತು ಕೂಟ ಪ್ರಾರ್ಥನೆಯು ಸ್ಥಳೀಯ ಖತೀಬರಾದ ಸೈಯದ್ ಅನಸ್ ಹಾದೀ ತಂಙಳ್ ಅಲ್ ಅಝ್ಹರಿ ಯ ನೇತೃತ್ವದಲ್ಲಿ ನೆರವೇರಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಮಾಅತ್ ಅಧ್ಯಕ್ಷರಾದ ಉಮರಬ್ಬ (ತೋಜ)ವಹಿಸಿದರು. ಸೈಯದ್ ಅನಸ್ ಹಾದೀ ತಂಙಳ್ ಅಲ್ ಅಝ್ಹರಿ ಅನುಸ್ಮರಣಾ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಜಮಾಅತ್ ಕಾರ್ಯದರ್ಶಿ ಅಬ್ದುಲ್ ರಝ್ಝಾಕ್, ಕೋಶಾಧಿಕಾರಿ ಮುಹಮ್ಮದ್, ಜೊತೆ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಝುಲ್ ಝುಲ್ SKSSF ಅಧ್ಯಕ್ಷ ಅಬ್ದುಲ್ ಲತೀಫ್, ಝಿಕ್ರ್ ಹಲ್ಖಾ ಕಮೀಟಿ ಅಧ್ಯಕ್ಷ ಶರೀಫ್ ನಿರ್ಮಾ ಹಾಗೂ ಜಮಾಅತರು ಮದ್ರಸ ವಿದ್ಯಾರ್ಥಿಗಳು ಭಾಗವಹಿಸಿದರು. ಮದ್ರಸ ಸದರ್ ಉಸ್ತಾದ್ ಇಕ್ಬಾಲ್ ಮುಸ್ಲಿಯಾರ್ ಸ್ವಾಗತಿಸಿ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.