ನ.27 : ತುಳು ಪರ್ಬ ಯಕ್ಷೋತ್ಸವ ಯಜ್ಞದಿಂದ ನಟರಾಜ ವೇದಿಕೆಯಲ್ಲಿ ಗುರು ದಕ್ಷಿಣೆ – ದೃಪದಗರ್ವಭಂಗ ಯಕ್ಷಗಾನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಕೊರೋನಾ ಮಹಾಮಾರಿಯಿಂದ ನೊಂದ ಕಲಾವಿದರಿಗೆ ಸಹಾಯ ನೀಡುವ ಉದ್ಧೇಶದಿಂದ ಪ್ರಾರಂಭಗೊಂಡ ತುಳು ಪರ್ಬ ಯಕ್ಷೋತ್ಸವ ಯಜ್ಞ ಎಂಬ ಸಂಘಟನೆ ನ.೧ರಿಂದ ಯಕ್ಷಗಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಅದರಂತೆ ಈ ಸಂಘಟನೆ ವತಿಯಿಂದ ನ.೨೭ರಂದು ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಾಲಯದ ನಟರಾಜ ವೇದಿಕೆಯಲ್ಲಿ ಸಂಜೆ ೬ರಿಂದ “ಗುರು ದಕ್ಷಿಣೆ – ದೃಪದಗರ್ವಭಂಗ” ಕಾಲಮಿತಿ ಯಕ್ಷಗಾನ ನಡೆಯಲಿದೆ.

ತೆಂಕು ತಿಟ್ಟಿನ ಎಲ್ಲಾ ಸಮಾನ ಮನಸ್ಕ ಕಲಾವಿದರನ್ನು ಸಂಘಟಿಸಿ ಕಲಾವಿದರಿಗೆ ಬೇಕಾಗಿ ಕಲಾವಿದರು ಒಟ್ಟಾಗಿ ಮಾಡುವ ಈ ಕಾರ್ಯಕ್ರಮದಲ್ಲಿ ವೃತ್ತಿಪರ ಕಲಾವಿದರನ್ನು ಒಂದೊಂದು ಕಾರ್ಯಕ್ರಮದಲ್ಲಿ ಗುರುತಿಸಿ ಸಹಾಯಧನ ನೀಡಲಾಗುತ್ತದೆ. ಕಲಾಭಿಮಾನಿಗಳು, ಸಂಘ ಸಂಸ್ಥೆಗಳು ಸಹಕಾರ ನೀಡಬಹುದು ಎಂದು ಕಾರ್ಯಕ್ರಮ ಸಂಘಟಕ ಆನೆಕಲ್ಲು ಗಣಪತಿ ಭಟ್ ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.