HomePage_Banner
HomePage_Banner
HomePage_Banner

ಪುತ್ತೂರು ಪಾಣಾಜೆ ಲಯನ್ಸ್ ಕ್ಲಬ್ ಉದ್ಘಾಟನಾ ಸಮಾರಂಭ

Puttur_Advt_NewsUnder_1
Puttur_Advt_NewsUnder_1
  • ಸೇವೆಯ ಮೂಲಕ ಯಾವುದೇ ಸಂಸ್ಥೆ ಸಮಾಜದಲ್ಲಿ ಗುರುತಿಸಲ್ಪಡುತ್ತದೆ:ಡಾ. ಗೀತಪ್ರಕಾಶ್

ಪುತ್ತೂರು: ಯಾವುದೇ ಸಂಸ್ಥೆಯಾಗಿರಲಿ ಅದು ಸಮಾಜದಲ್ಲಿ ತನ್ನನ್ನು ತೊಡಗಿಸಿಕೊಂಡಾಗ ಮತ್ರ ಸಮಾಜದ ಆ ಸಂಘಟನೆಯನ್ನು ಗುರುತಿಸುತ್ತದೆ ಮತ್ತು ಗೌರವಿಸುತ್ತದೆ. ಸಮಾಜ ಸೇವೆ ಮಾಡದೇ ಇದ್ದಲ್ಲಿ ಸಂಸ್ಥೆ ಸಮಾಜದಿಂದ ದೂರವಾಗಿ ಉಳಿಯುತ್ತದೆ. ಸಂಸ್ಥೆ ಉಳಿಯಬೇಕಾದರೆ ಸಮಾಜ ಸೇವೆಯೇ ಮುಖ್ಯವಾಗಿರುತ್ತದೆ ಎಂದು ಲಯನ್ಸ್ ಕ್ಲಬ್ ಗವರ್ನರ್ ಡಾ. ಗೀತಪ್ರಕಾಶ್ ಹೇಳಿದರು.

ಅವರು ಇರ್ದೆಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾ ಭವನದಲ್ಲಿ ಮ.೨೨ ರಂದು ನಡೆದ ಪುತ್ತೂರು ಪಾಣಜೆ ಲಯನ್ಸ್ ಕ್ಲಬ್ ಉದನ್ನು ಉದ್ಘಾಟಿಸಿ ಮಾತನಾಡಿದರು.ಲಯನ್ಸ್ ಕ್ಲಬ್ ಎಂಬ ಸೇವಾ ಸಂಶ್ಥೆಗೆ ಶತಮಾನಗಳ ಇತಿಹಾಸವಬಿದೆ, ಅಂತರರಾಷ್ಟ್ರೀಯ ಮಟ್ಟದಲ್ಲಿ ಅತೀ ಹೆಚ್ಚು ಸದಸ್ಯರನ್ನು ಹೊಂದಿರುವ ಸೇವಾ ಸಂಸ್ಥೆ ಎಂಬ ಹೆಗ್ಗಳಿಕೆ ಇದೆ. ಸಂಸ್ಥೆಯು ಜನರ ನಡುವೆ ಇದ್ದು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯವನ್ನು ಮಾಡುತ್ತಿದೆ. ಕೊರೋನಾ ಸಮಯದಲ್ಲಿ ವಿಶ್ವದೆಲ್ಲೆಡೆ ನಾವು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದೆವು ಎಂದು ಹೇಳಿದರು. ಲಯನ್ಸ್ ಕ್ಲಬ್ ನಲ್ಲಿ ಸದಸ್ಯರಾಗುವ ಮೂಲಕ ಗ್ರಾಮೀಣ ಯುವ ಸಮೂಹ ತಮ್ಮನ್ನು ಉತ್ತಮ ವ್ಯಕ್ತಿಯಾಗಿ ರೂಪಿಸಿಕೊಳ್ಳಬೇಕು, ವ್ಯಕ್ತಿತ್ವ ವಿಕಸನಕ್ಕೆ ಕ್ಲಬ್ ವೇದಿಕೆಯನ್ನು ಕಲ್ಪಿಸುತ್ತದೆ ಎಂದು ಹೇಳಿದರು.

ಪ್ರಾಂತೀಯ ವಲಯಾಧ್ಯಕ್ಷ ಹಾಗೂ ಕಾವು ಪುತ್ತೂರು ಲಯನ್ಸ್ ಕ್ಲಬ್‌ನ ಸ್ಥಾಪಕಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಎರಡು ವರ್ಷಗಳ ಹಿಂದೆ ಕಾವು ಪುತ್ತೂರು ಲಯನ್ಸ್ ಕ್ಲಬ್ ಮಾಡುವ ಮೂಲಕ ಸೇವೆಗೆ ಇಳಿದಿದ್ದೇವೆ, ಕಾವಿನಲ್ಲಿ ನಮ್ಮ ಸೇವೆ ಯಶಸ್ವಿಯಾದ ಬಳಿಕ ಪುತ್ತೂರು ಪಾಣಾಜೆ ಲಯನ್ಸ್ ಕ್ಲಬ್ ಆರಂಭಿಸಲಾಗಿದೆ. ಸ್ಥಳೀಯರನ್ನೇ ಸೇರಿಸಿಕೊಂಡು ಸಂಸ್ಥೆಯು ಮುನ್ನಡೆಯಲಿದೆ. ಸಮಾಜ ಸೇವೆಯನ್ನೇ ಗುರಿಯಾಗಿಸಿಕೊಂಡು ನಾವು ಕೆಲಸ ಮಾಡಲಿದ್ದೇವೆ. ಕಾವಿನಲ್ಲಿ ಎರಡು ವರ್ಷದ ಅವಧಿಯಲ್ಲಿ ೫೦ ಲಕ್ಷಕ್ಕೂ ಮಿಕ್ಕಿ ಸೇವಾ ಕಾರ್ಯವನ್ನು ಮಾಡಿದ್ದೇವೆ ಅದೇ ರೀತಿ ಪಾಣಾಜೆ ವಿಭಗದಲ್ಲೂ ಸಮಾಜ ಸೇವೆ ನಿರಂತರವಾಗಿ ಮುಂದುವರೆಯಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಲಯನ್ಸ್ ಸಂಸ್ಥೆಯ ವಿವಿಧ ವಿಭಾಗದ ಮುಖ್ಯಸ್ಥರು ಮಾತನಾಡಿ ನೂತನ ಸಂಸ್ಥೆಗೆ ಶುಭ ಹಾರೈಸಿದರು.
ವೇದಿಕೆಯಲ್ಲಿ ಪ್ರಥಮ ಮಹಿಳೆ ಗಾಯತ್ರಿ ಗೀತಪ್ರಕಾಶ್, ಲಯನ್ಸ್ ಪ್ರಮುಖರಾದ ವಸಂತ್ ಶೆಟ್ಟಿ, ಸಂತೋಷ್ ಶೆಟ್ಟಿ, ಸೋಮವಾರ ಪೇಟೆ ಲಯನ್ಸ್ ಕ್ಲಬ್‌ನ ಕೆ ಎಂ ಜಗದೀಶ್, ಸಂದ್ಯಾ ಶೆಟ್ಟಿ, ಮಹಮ್ಮದ್ ಇಕ್ಬಾಲ್, ಅನಿತಾ ಹೇಮನಾಥ ಶೆಟ್ಟಿ ಕಾವು, ಪುತ್ತೂರು ಕಾವು ಲಯನ್ಸ್ ಕ್ಲಬ್ ಅಧ್ಯಕ್ಷ ರಮೇಶ್ ರೈ ಸಾಂತ್ಯ, ಕಾರ್ಯದರ್ಶಿ ಪವನ್ ರಾಮ, ಕೋಶಾಧಿಕಾರಿ ಅಬ್ದುಲ್ ಅಝೀಜ್ ಸಿ ಎಚ್, ಕಾವು ದಿವ್ಯನಾಥ ಶೆಟ್ಟಿ , ಪಾಣಾಜೆ ಕ್ಲಬ್‌ನ ಅಧ್ಯಕ್ಷ ನವೀನ್ ರೈ ಚೆಲ್ಯಡ್ಕ, ಕೋಶಾಧಿಕಾರಿ ಶಾಹುಲ್ ಹಮೀದ್, ಗಣೇಶ್ ಶೆಟ್ಟಿ ಪುತ್ತೂರು ಉಪಸ್ಥಿತರಿದ್ದರು.ಸಭೆಯಲ್ಲಿ ಸೋಮವಾರ ಪೇಟೆ ಲಯನ್ಸ್ ಕ್ಲಬ್‌ನ ಶಶಿಕಲಾ ಚೌಟ, ಮಂಜುನಾಥ ಚೌಟ,ಹರೀಶ್, ಲೀಲಾರಾಮ್, ಲೋಕೇಶ್, ಮೆಲ್ವಿನ್,ಪಾಣಾಜೆ ಗಣಪತಿ ಶಂಕರನಾರಾಯಣ ಭಟ್, ಭಾರತೀ, ಕಾವು ಲಯನ್ಸ್ ಕ್ಲಬ್‌ನ ಸದಸ್ಯ ಬುಶ್ರಾ ಅಬ್ದುಲ್ ಅಝೀಝ್, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಮಹಮ್ಮದ್ ಹಾಜಿ ಕುಕ್ಕುವಳ್ಳಿ, ಜಗನ್ಮೋಹನ್ ರೈ ಬೆಳ್ಲಿಪ್ಪಾಡಿ, ಬಾಬು ರೈಕೋಟೆ, ಪುಷ್ಪರಾಜ್ ಶೆಟ್ಟಿ ಕೋಟೆ, ಮೂಸೆಕುಂಞಿ ಕಂಚಿಲ್ಕುಂಜ, ದಯಾನಂದ ರೈ ಕೊಮ್ಮಂಡ, ಅಬೂಬಕ್ಕರ್ ಸಿದ್ದಿಕ್, ಲ್ಯಾನ್ಸಿ ಮಸ್ಕರೇನಸ್, ಕೊರಗಪ್ಪ ಗೌಡ ಪುತ್ತೂರು, ಲಕ್ಷ್ಮೀ ನಾರಾಯಣ ರೈ ಕೆದಂಬಾಡಿ, ಮಹೇಶ್ ರೈ ಅಂಕೊತ್ತಿಮಾರ್, ರವಿಪ್ರಸಾದ್ ಶೆಟ್ಟಿ ಬನ್ನೂರು ,ತಿಲಕ್ ರಾಜ್ ಬೆಂಗಳೂರು, ಸೋಮವಾರ ಪೇಟೆ ಲಯನ್ಸ್ ಕ್ಲಬ್ ಮೊದಲಾದವರು ಉಪಸ್ಥಿತರಿದ್ದರು.ನೂತನ ಕಾರ್ಯದರ್ಶಿ ಶ್ರೀಪ್ರಸಾದ್ ವಂದಿಸಿದರು. ಮಂಗೇಶ್ ಭಟ್ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.

ಪುತ್ತೂರು ಕಾವು ಲಯನ್ಸ್ ಕ್ಲಬ್ ನ ಯಶಸ್ವಿ ಕಾರ್ಯಕ್ಕಾಗಿ ಪುತ್ತೂರು ಕಾವು ಲಯನ್ಸ್ ಕ್ಲಬ್‌ನ ಸ್ಥಾಪಕಾಧ್ಯಕ್ಷರಾದ ಕಾವು ಹೇಮನಾಥ ಶೆಟ್ಟಿ ದಂಪತಿಯನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.