HomePage_Banner
HomePage_Banner
HomePage_Banner

ಡಾಂಬಾರು ಮಿಶ್ರಣ ಘಟಕದಿಂದ ಪರಿಸರ ಮಾಲಿನ್ಯ | ಹೊಗೆ, ಜಲ್ಲಿ ಧೂಳುಮಯವಾದ ಬೆದ್ರೋಡಿ ಪರಿಸರ..!!!

Puttur_Advt_NewsUnder_1
Puttur_Advt_NewsUnder_1
  • ಒಂದೇ ಕಡೆಯಲ್ಲಿ ೨ ಘಟಕ ಕಾರ್‍ಯಾಚರಣೆ
  • ರಾತ್ರಿಯಾಗುತ್ತಲೇ ಮನೆಯೊಳಗೆ ನುಗ್ಗುತ್ತಿದೆ ಮಲೀನ ಗಾಳಿ
  • ರೋಗ ಭೀತಿ, ಗ್ರಾಮಸ್ಥರಲ್ಲಿ ಆತಂಕ
  • ಕೃಷಿಗೂ ಹಾನಿ

ಉಪ್ಪಿನಂಗಡಿ: ಬಜತ್ತೂರು ಗ್ರಾಮದ ಬೆದ್ರೋಡಿ ಎಂಬಲ್ಲಿ ಕೆಲ ದಿನಗಳಿಂದ ಡಾಂಬಾರು ಮಿಶ್ರಣ ಘಟಕವೊಂದು ಕಾರ್‍ಯಾಚರಿಸುತ್ತಿದ್ದು, ಇದರಿಂದಾಗಿ ಪರಿಸರ ಮಾಲಿನ್ಯಗೊಂಡು ಜನರ ನೆಮ್ಮದಿಯ ಬದುಕಿಗೆ ಭಂಗ ಉಂಟಾಗಿದೆ, ಮನೆ ಮಂದಿಯಲ್ಲಿ ರೋಗ ಭೀತಿ ಕಾಡತೊಡಗಿದೆ ಎಂದು ಗ್ರಾಮಸ್ಥರಿಂದ ದೂರು ವ್ಯಕ್ತವಾಗಿದೆ.

ಬೆದ್ರೋಡಿ ಜನತಾ ಕಾಲೋನಿ ಸಮೀಪದಲ್ಲಿ ಡಾಂಬಾರು ಮಿಶ್ರಣ ಘಟಕ ತಲೆಎತ್ತಿದ್ದು, ಘಟಕದಲ್ಲಿ ಅವ್ಯವಸ್ಥೆಯ ಆಗರ ಸೃಷ್ಠಿಯಾಗಿದ್ದು, ಜಲ್ಲಿ ಪುಡಿಯನ್ನು ಮಿಶ್ರಣ ಮಾಡುವ ವೇಳೆ ಅದರ ಧೂಳು ಹೊರಗೆ ಹಾರಿ ಹೋಗುತ್ತಿದ್ದು, ಪರಿಸರ ಸಂಪೂರ್ಣವಾಗಿ ಜಲ್ಲಿ ಪುಡಿ ಮಿಶ್ರಿತ ಧೂಳು ತುಂಬಿಕೊಂಡು ಮಾಲಿನ್ಯಗೊಳ್ಳುವಂತಾಗಿದೆ.

ಅದಾಗ್ಯೂ ಡಾಂಬಾರು ಮಿಶ್ರಣ ಮಾಡುವ ವೇಳೆ ಅದರ ಯಂತ್ರದ ಮೂಲಕ ಹೊರ ಬರುವ ಮಲೀನ ಹೊಗೆ ಪರಿಸರದ ಎಲ್ಲೆಡೆಯಲ್ಲಿ ಹರಡಿ ಹೋಗುತ್ತಿದ್ದು, ಈ ಮಲೀನ ಹೊಗೆ ಜನ ವಸತಿ ಪ್ರದೇಶವನ್ನು ಆವರಿಸಿಕೊಂಡು ಜನರ ಉಸಿರಾಟಕ್ಕೂ ತೊಡಕು ಉಂಟು ಮಾಡುತ್ತಿದ್ದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ರಾತ್ರಿ ಪೂರ್ತಿ ಮಲೀನ ಗಾಳಿ:
ಹಗಲು ಹೊತ್ತಿನಲ್ಲಿ ಜಲ್ಲಿ ಪುಡಿ ಮತ್ತು ಡಾಂಬಾರು ಮಿಶ್ರಣ ಮಾಡುವಾಗ ಚಾಲೂ ಸ್ಥಿತಿಯಲ್ಲಿರುವ ಯಂತ್ರದ ಹೊಗೆ ಜೊತೆಯಾಗಿ ಹರಡಿಕೊಂಡು ಕಾಡುತ್ತಿದ್ದು, ರಾತ್ರಿ  ಹೊತ್ತಿನಲ್ಲಿ ಡಾಂಬಾರು ಕುದಿಸುವ ಪ್ರಕ್ರಿಯೆಯಿಂದಾಗಿ ಅದರಿಂದ ಹೊರ ಬರುವ ಹೊಗೆ ತೀರಾ ಗಬ್ಬು ವಾಸನೆ ಮಿಶ್ರಿತವಾಗಿ ಊರಿನ ಎಲ್ಲೆಡೆಯಲ್ಲಿ ಹರಡಿಕೊಳ್ಳುತ್ತಿದೆ, ಇದು ಗಾಳಿಯಲ್ಲಿ ಸೇರಿಕೊಂಡು ಹರಡಿ ಬಂದು ಮನೆಯೊಳಗೆ ಸೇರಿಕೊಳ್ಳುತ್ತಿದೆ, ಬೆದ್ರೋಡಿ ಜನತಾ ಕಾಲೋನಿ ಮತ್ತು ಬೆದ್ರೋಡಿ ಪರಿಸರದ ಮನೆ ಮಂದಿಗೆ ನಿದ್ದೆಗೂ ಭಂಗ ಉಂಟು ಮಾಡುತ್ತಿದೆ ಎಂದು ಗ್ರಾಮಸ್ಥರು ತಮ್ಮ ಸಂಕಷ್ಠವನ್ನು ವ್ಯಕ್ತಪಡಿಸಿದ್ದಾರೆ.

ನಾದುರಸ್ಥಿಯಲ್ಲಿರುವ ಯಂತ್ರದ ಮೂಲಕ ಕೆಲಸ:
ಡಾಂಬಾರು ಮಿಶ್ರಣ ಮಾಡುವ ಯಂತ್ರ ಹಳೆಯದಾಗಿದ್ದು, ನಾದುರಸ್ಥಿಯಲ್ಲಿದ್ದು ಅದರ ಚಿಮಿಣಿಯ ಮೂಲಕ ನೇರವಾಗಿ ಆಕಾಶದ ಎತ್ತರಕ್ಕೆ ಹೋಗ ಬೇಕಾದ ಹೊಗೆ ಯಂತ್ರದ ಬುಡದಿಂದಲೇ ಹೊರ ಬರುತ್ತಿದ್ದು, ಈ ರೀತಿಯಾಗಿ ಇದು ಪರಿಸರದ ಎಲ್ಲೆಡೆಯಲ್ಲಿ ಹರಡಿಕೊಂಡು ಹೋಗುತ್ತಿರುವುದರಿಂದಲೇ ಇಲ್ಲಿ ಈ ಸಮಸ್ಯೆ ಎದುರಾಗಿದೆ ಎಂದು ಹೇಳಲಾಗಿದೆ.

ಗ್ರಾಮದಲ್ಲಿ ಅಸ್ತಮಾ ರೋಗ ಭೀತಿ:
ಡಾಂಬಾರು ಮಿಶ್ರಣ ಘಟಕದಿಂದ ದಿನದ ೨೪ ಗಂಟೆಯೂ ಮಲೀನ ಹೊಗೆ ಹರಡಿಕೊಂಡು ಬಂದು, ಅದರ ಸೇವನೆಯಿಂದಾಗಿ ಜನರಲ್ಲಿ ರೋಗಭೀತಿ ಕಾಡಲಾರಂಭಿಸಿದೆ. ಇದರಿಂದಾಗಿ ಈಗಾಗಲೇ ಕೆಲವರಲ್ಲಿ ಕೆಮ್ಮು, ಅಸ್ತಮಾ ಕಾಣಿಸಿಕೊಳ್ಳಲಾರಂಭಿಸಿದೆ ಎಂದು ಗ್ರಾಮಸ್ಥರು ದೂರಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಅಗತ್ಯ ಕ್ರಮಕೈಗೊಳ್ಳುವ ಬಗ್ಗೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಗ್ರಾಮಸ್ಥರಿಂದ ತರಾಟೆ, ಪ್ರತಿಭಟನೆಯ ಎಚ್ಚರಿಕೆ:
ಬೆದ್ರೋಡಿಯಲ್ಲಿ ೨ ಡಾಂಬಾರು ಮಿಶ್ರಣ ಘಟಕ ಕಾರ್‍ಯಾಚರಿಸುತ್ತಿದ್ದು, ಬಹಳ ಹಿಂದಿನಿಂದಲೂ ಬಹಳಷ್ಟು ಕಷ್ಟ, ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ, ಆದರೆ ಈಚೆಗೆ ಪ್ರಾರಂಭವಾದ ಘಟಕದಿಂದ ಈ ಸಮಸ್ಯೆ ಮತ್ತಷ್ಟು ಜಟಿಲಗೊಂಡಿದ್ದು, ಸ್ಥಳೀಯ ಕೆಲವರು ಈ ಬಗ್ಗೆ ಡಾಂಬಾರು ಮಿಶ್ರಣ ಘಟಕದದವರ ಗಮನಕ್ಕೆ ತಂದಿದ್ದರೆನ್ನಲಾಗಿದ್ದು, ಆದರೆ ಅವರು ದೂರನ್ನು ಕಡೆಗಣಿಸಿದ್ದು, ಈ ಹಿನ್ನೆಲೆಯಲ್ಲಿ ನ. ೨೦ರಂದು ಸ್ಥಳೀಯ ಗ್ರಾಮಸ್ಥರು ಘಟಕದ ಮುಂದೆ ಹೋಗಿ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದು, ಸರಿಪಡಿಸುವ ಭರವಸೆ ನೀಡಿದ್ದಾರೆ ಎಂದು ಹೇಳಲಾಗಿದೆ.

ಹೇಳುವವರು, ಕೇಳುವವರು ಯಾರೂ ಇಲ್ಲದಂತಾಗಿದೆ-ಧನಂಜಯ ಬೆದ್ರೋಡಿ
ಈ ಹಿಂದೆ ೧ ಘಟಕ ಕಾರ್‍ಯಾಚರಿಸುತ್ತಿತ್ತು, ಇದೀಗ ೨ ಘಟಕ ಆಗಿದೆ. ಅವರು ಪಂಚಾಯಿತಿ ಪರವಾಣಿಗೆಯೂ ಪಡೆಯುವುದಿಲ್ಲ, ಇನ್ನು ಘಟಕದಿಂದ ಪರಿಸರದಲ್ಲಿ ಆಗುವ ಹಾನಿಯ ಬಗ್ಗೆ ಹೇಳಿದರೂ ಕೇಳುವವರಿಲ್ಲದಂತಾಗಿದೆ, ಮಾಲಿನ್ಯ ತುಂಬಿದ ಗಾಳಿಯಿಂದಾಗಿ ಜನತೆ ರೋಗ ಭೀತಿ ಎದುರಿಸುವಂತಾಗಿದೆ. ಜೊತೆಗೆ ಧೂಳು ಕೃಷಿಯನ್ನೂ ಹಾನಿ ಉಂಟು ಮಾಡುತ್ತಿದೆ. ಸಾರ್ವಜನಿಕ ಹಿತದೃಷ್ಠಿಯಿಂದ ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ -ಧನಂಜಯ ಬೆದ್ರೋಡಿ ಮಾಜಿ ಅಧ್ಯಕ್ಷರು, ಗ್ರಾಮ ಪಂಚಾಯಿತಿ, ಬಜತ್ತೂರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.